16 year old Achieves Dual Qualifications As Ca And Cfa Becoming The Worlds Youngest Chartered Accountant
ಪುಟ 4 ಲೀಡ್
Contributed by: Jaya shree|Vijaya Karnataka•
ವಿಶ್ವದ ಅತ್ಯಂತ ಕಿರಿಯ ಸಿಎ ಹೆಗ್ಗಳಿಕೆ
- ಭಾರತ ಮೂಲದ ಯುವಕನಿಂದ ಗಿನ್ನೆಸ್ ವಿಶ್ವ ದಾಖಲೆ, ಹಣಕಾಸು ಕ್ಷೇತ್ರದ ಆಸಕ್ತಿಯೇ ಪ್ರೇರಣೆ ನೀಡಿತು ಎಂದ ಲಕ್ಷ್ಮಣನ್ ಭಾರತ ಮೂಲದ 16 ವರ್ಷದ ಯುವಕ ಲಕ್ಷ್ಮಣನ್ ಮೆಯಪ್ಪನ್ ಅವರು ವಿಶ್ವದ ಅತ್ಯಂತ ಕಿರಿಯ ಪುರುಷ ಚಾರ್ಟರ್ಡ್ ಅಕೌಂಟೆಂಟ್ ಎಂಬ ಖ್ಯಾತಿಗೆ ಪಾತ್ರರಾಗುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈನಲ್ಲಿ2021ರಲ್ಲಿಸಿಎ ಉತ್ತೀರ್ಣರಾದಾಗ ಇವರ ವಯಸ್ಸು ಕೇವಲ 16 ವರ್ಷವಾಗಿತ್ತು. ಕಿರಿಯ ವಯಸ್ಸಿಗೆ ಈ ಸಾಧನೆ ಹೇಗೆ ಸಾಧ್ಯವಾಯಿತು ಎಂಬುದನ್ನು ಮಾಧ್ಯಮಗಳೊಂದಿಗೆ ಲಕ್ಷಣನ್ ಹಂಚಿಕೊಂಡಿದ್ದಾರೆ.
‘‘ಕೋವಿಡ್ ಲಾಕ್ ಡೌನ್ ಸಮಯದಲ್ಲಿ, ಅಂದರೆ 10ನೇ ತರಗತಿಯ ವಿದ್ಯಾಭ್ಯಾಸ ಮುಗಿದ ಬಳಿಕ ನನಗೆ ಹಣಕಾಸು ಕ್ಷೇತ್ರದಲ್ಲಆಸಕ್ತಿ ಮೂಡಿತು. ಇದೇ ಆಸಕ್ತಿಯನ್ನು ಮುಂದುವರಿಸಲು ನಿರ್ಧರಿಸಿ, 15ನೇ ವಯಸ್ಸಿನಲ್ಲಿ‘ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ ಕೋರ್ಸ್ ಗೆ ತಯಾರಿ ಆರಂಭಿಸಿದೆ. ಒಂದೇ ವರ್ಷದಲ್ಲಿಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ’’ ಎಂದು ತಮಗೆ ಸಿಕ್ಕ ಮನ್ನಣೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ‘‘ಐದು ವರ್ಷಗಳ ಹಿಂದೆ 10ನೇ ತರಗತಿ ಪರೀಕ್ಷೆಯನ್ನೂ ತೇರ್ಗಡೆಯಾಗುತ್ತೆನೋ ಇಲ್ಲವೂ ಎಂದು ಭಯಪಡುತ್ತಿದ್ದೆ. ಇಂದು ಎಸಿಸಿಎ ಸದಸ್ಯತ್ವ ಮತ್ತು ಸಿಎಫ್ ಎ ಚಾರ್ಟರ್ ಎರಡನ್ನೂ ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕಠಿಣ ಪರಿಶ್ರಮ, ಸತತ ಅಧ್ಯಯನ, ಶಿಸ್ತು, ಛಲ ಎಂಬುದಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು. ಸಾಧನೆಗೆ ವಯಸ್ಸಿನ ಮಿತಿ ಎಂಬುದಿಲ್ಲ’’ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಕೇವಲ ಎಸಿಸಿಎಗೆ ಸೀಮಿತಗೊಳ್ಳದೆ ತಮ್ಮ ಶೈಕ್ಷಣಿಕ ಓದು ಮತ್ತು ವೃತ್ತಿಯನ್ನು ಮುಂದುವರಿಸಿರುವ ಮೆಯಪ್ಪನ್ , ಸಿಎಫ್ ಎ ಸಂಸ್ಥೆಯ ಚಾರ್ಟರ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಪ್ರಸ್ತುತ ದುಬೈನ ಪ್ರತಿಷ್ಠಿತ ‘ಸೆಂಚುರಿ ಫೈನಾನ್ಷಿಯಲ್ ’ ಸಂಸ್ಥೆಯಲ್ಲಿಹಿರಿಯ ಸಂಶೋಧನಾ ವಿಶ್ಲೇಷಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಶಾರ್ಜಾದ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿಹಣಕಾಸು ವಿಷಯದಲ್ಲಿಸ್ನಾತಕೋತ್ತರ ಪದವಿ ಪಡೆಯಲು ಅಧ್ಯಯನ ನಡೆಸುತ್ತಿದ್ದಾರೆ. ವೃತ್ತಿ ಮತ್ತು ಶಿಕ್ಷಣದ ಜೊತೆಗೆ, ಬಿಡುವಿನ ವೇಳೆಯಲ್ಲಿಸ್ವತಃ ಕೈಯಿಂದ ಕೈಗಡಿಯಾರಗಳನ್ನು ವಿನ್ಯಾಸಗೊಳಿಸಿ ತಯಾರಿಸುವುದು ಇವರ ಹವ್ಯಾಸಗಳಲ್ಲಿಒಂದಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಠಿಣ ಪರಿಶ್ರಮ ಮತ್ತು ಗುರಿಯ ಮೂಲಕ ಅಸಾಧಾರಣ ಸಾಧನೆ ಮಾಡಿರುವ ಮೆಯಪ್ಪನ್ ಇಂದಿನ ಯುವ ಜನತೆಗೆ ದೊಡ್ಡ ಸ್ಪೂರ್ತಿಯಾಗಿದ್ದಾರೆ.