ಪುಟ 4 ಸೆಕೆಂಡ್ ಲೀಡ್ -2

Contributed byPanchami M S|Vijaya Karnataka
approval of 13041 crores for railway and highway projects
ರೈಲ್ವೆ ಹಳಿ ಹಾಗೂ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ

- 13,041 ಕೋಟಿ ರೂ. ವೆಚ್ಚದಲ್ಲಿನಿರ್ಮಾಣ
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಟ್ಟು 13,041 ಕೋಟಿ ರೂ. ವೆಚ್ಚದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಡಿಯಲ್ಲಿ9,450 ಕೋಟಿ ರೂ. ವೆಚ್ಚದ ನಾಲ್ಕು ರೈಲ್ವೆ ಹಳಿ ನಿರ್ಮಾಣ ಯೋಜನೆಗಳು ಮತ್ತು ಬಿಹಾರದಲ್ಲಿ3,590 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆ ಸೇರಿವೆ.

ಹೌರಾ-ಚೆನ್ನೈ ಪ್ರಮುಖ ರೈಲು ಮಾರ್ಗದಲ್ಲಿಜನದಟ್ಟಣೆ ಕಡಿಮೆ ಮಾಡಲು ಮತ್ತು ಸರಕು ಸಾಗಣೆಯನ್ನು ಸುಗಮಗೊಳಿಸಲು ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿಸುಮಾರು 410 ಕಿ.ಮೀ ಉದ್ದದ ನಾಲ್ಕು ರೈಲ್ವೆ ಹಳಿಗಳ ವಿಸ್ತರಣೆ ಕೈಗೊಳ್ಳಲಾಗುತ್ತಿದೆ. ಖರಗ್ ಪುರ-ಭದ್ರಕ್ , ಭದ್ರಕ್ -ಹರಿದಾಸ್ ಪುರ, ಗುಮ್ಮಿಡಿಪೂಂಡಿ-ಗುಡೂರು ಮತ್ತು ಕಟಕ್ -ಪಾರಾದೀಪ್ ಮಾರ್ಗಗಳನ್ನು ಒಳಗೊಂಡಿರುವ ಈ ಯೋಜನೆಗಳು 2030-31ರೊಳಗೆ ಪೂರ್ಣಗೊಳ್ಳಲಿವೆ. ಇದರಿಂದ ವಾರ್ಷಿಕ 76 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದ್ದು, ತೈಲ ಆಮದು ಮತ್ತು ಇಂಗಾಲದ ಹೊರಸೂಸುವಿಕೆ ಗಣನೀಯವಾಗಿ ತಗ್ಗಲಿದೆ. ಜತೆಗೆ, ಬಿಹಾರದ ಮುಝಫರ್ ಪುರ-ಸಿತಾಮರ್ಧಿ-ಸೋನ್ ಬರ್ಸಾ ನಡುವಿನ ಎನ್ ಎಚ್ -22 ರಸ್ತೆಯನ್ನು 3,590.73 ಕೋಟಿ ರೂ. ವೆಚ್ಚದಲ್ಲಿ4-ಪಥಗಳ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ. 82.6 ಕಿ.ಮೀ ಉದ್ದದ ಈ ಹೆದ್ದಾರಿಯು ಭಾರತ-ನೇಪಾಳ ಗಡಿ ಹಾಗೂ ಪ್ರಮುಖ ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸಲಿದೆ.