ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹಾಗೂ ಬೇಲೂರು ಲಯನ್ಸ್ ಸಂಸ್ಥೆಯ ವತಿಯಿಂದ ಕಾನಳ್ಳಿ ಅರಣ್ಯದಂಚಿನ ಗ್ರಾಮವಾದ ಶಿರಗುರ ಎಂಬಲ್ಲಿಹಣ್ಣಿನ ಸಸಿಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಬೇಲೂರು ಲಯನ್ಸ್ ಸಂಸ್ಥೆಯ ಕಾರ ್ಯದರ್ಶಿ ಲ.ಪೂವಯ್ಯ ಮಾತನಾಡಿ, ಕಾಡಿನಲ್ಲಿಹಣ್ಣಿನ ಗಿಡಗಳ ಸಂಖ್ಯೆ ಗಣನೀಯವಾಗಿ ಇಳಿಕೆಯುತ್ತಿರುವ ಪರಿಣಾಮ ಕಾಡಿನಲ್ಲಿರಬೇಕಾದ ಆನೆಯು ಸೇರಿದಂತೆ ಇತರ ಜೀವಿಗಳು ಆಹಾರವನ್ನು ಅರಸಿ ನಾಡಿಗೆ ಬಂದು ರೈತರಿಗೆ ಬಹಳ ತೊಂದರೆ ನೀಡುತ್ತಿವೆ. ಈ ನಿಟ್ಟಿನಲ್ಲಿನಮ್ಮ ಸಂಸ್ಥೆಯು ಕಾಡು ಪ್ರಾಣಿಗಳಿಗೆ ತಿನ್ನಲು ಅವಶ್ಯಕವಿರುವಂತಹ ಹಲಸು,ನೇರಳೆ,ಸೀಬೆಯಂತಹ ಸುಮಾರು 300 ಗಿಡಗಳನ್ನು ಮುಖ್ಯ ರಸ್ತೆ ಬದಿ ಹಾಗೂ ಖಾಲಿಯಿರುವ ಸ್ಥಳಗಳನ್ನು ಆಯ್ಕೆ ಮಾಡಿ ನೆಡುವುದರ ಮೂಲಕ ಕಾಡುಪ್ರಾಣಿಗಳಿಗೆ ನೈಸರ್ಗಿಕವಾಗಿ ಆಹಾರ ಪೂರೈಸಲು ಸಾಧ್ಯವಾಗುತ್ತದೆ. ಹಾಗಾಗಿ ವನಮಹೋತ್ಸವ ಅಂಗವಾಗಿ ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.ಅರೇಹಳ್ಳಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಲ.ಸತೀಶ್ ಪೂಜಾರಿ, ಕಾರ ್ಯದರ್ಶಿ ಲ.ಸೌಜನ್ಯ ಪೃಥ್ವಿರಾಜ್ , ಪ್ರಾಂತೀಯ ರಾಯಭಾರಿ ಲ. ರಾಬಿ ಸೋಮಯ್ಯ, ಖಜಾಂಚಿ ಲ.ಗುರು ಪ್ರಸಾದ್ , ಸಹ ಕಾರ ್ಯದರ್ಶಿ ಲ. ಲಖಿತ್ , ಬೇಲೂರು ಸಂಸ್ಥೆಯ ಅಧ್ಯಕ್ಷ ಲ.ಮುಕ್ತರ್ ಅಹ್ಮದ್ ,ಲ.ರಶ್ಮಿ ಸೋಮಯ್ಯ, ಲ,ಪ್ರವೀಣ್ , ಲ.ಬೃಂದನ್ , ಲ.ಸಂತೋಷ್ ,ಲ.ಫೆಲಿಕ್ಸ್ , ಲ.ಪೂರ್ಣೇಶ್ ಹಾಗೂ ಇನ್ನೂ ಹಲವರಿದ್ದರು.
21-08-2026ಊಓಂಖಐ04ಆ
ಚಿತ್ರ ಸುದ್ದಿ:
ಬೇಲೂರು ತಾಲೂಕು ಅರೇಹಳ್ಳಿ ಹಾಗೂ ಬೇಲೂರು ಲಯನ್ಸ್ ಸಂಸ್ಥೆಯ ಸದಸ್ಯರು ವನಮಹೋತ್ಸವದ ಅಂಗವಾಗಿ ಶಿರಗುರ ಗ್ರಾಮದಲ್ಲಿನಾನಾ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟರು.