ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

Contributed bychandruhiremath06@gmail.com|Vijaya Karnataka
invitation for applications for the vishwakarma community talent award
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ಕಲಬುರಗಿ: ವಿಶ್ವಕರ್ಮ ಸಮುದಾಯದ ಪ್ರಸಕ್ತ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವಕರ್ಮ ನೌಕರರ ಸಂಘ, ಜಿಲ್ಲಾವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಶ್ವಕರ್ಮ ನೌಕರರ ವಿವಿಧೋದ್ದೇಶ ಸಹಕಾರ ಸಂಘ, ಗಾಯತ್ರಿ ವಿಶ್ವಕರ್ಮ ಮಹಿಳಾ ಸಹಕಾರ ಸಂಘಗಳ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿಪ್ರತಿಭಾ ಪುರಸ್ಕಾರ ನೀಡಲಾಗುವುದು. ಹೀಗಾಗಿ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಸೇ.85ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿ ಪ್ರತಿ, ಆಧಾರ್ ಕಾರ್ಡ್ , ಜಾತಿ ಪ್ರಮಾಣಪತ್ರ, ಭಾವಚಿತ್ರ ನೀಡಬೇಕು, ಅಷ್ಟೇ ಅಲ್ಲಜಿಲ್ಲಾ, ರಾಜ್ಯ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಸಾಧಕರಿಗೆ, ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಮುಗಿಸಿದವರಿಗೆ ಸನ್ಮಾನಿಸಿ ಗೌರವಿಸಲಾಗವುದು. ಹೀಗಾಗಿ ಆ.25ರ ಒಳಗಾಗಿ ಮಾಹಿತಿ ನೀಡಬೇಕು. ಮಾಹಿತಿಗೆ ಮೊ.8073905407ಗೆ ಸಂಪರ್ಕಿಸಬಹುದು ಎಂದು ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಪತ್ತಾರ ತಿಳಿಸಿದ್ದಾರೆ.