ಇಂಟ್ರೊ: ಮಳೆಗಾಲ ಅಂದರೆ ಪ್ರವಾಸಕ್ಕೆ ಆಫ್ ಸೀಸನ್ . ಆದರೆ ಈ ವರ್ಷ ವಾರಾಂತ್ಯದ ಪ್ರವಾಸಗಳು ಹಸಿರಿನ ತಾಣಗಳಿಗಾಗಿಯೇ ಯಥೇಚ್ಛವಾಗಿ ಆಯೋಜನೆ ಆಗುತ್ತಿವೆ ಎಂಬುದು ಪ್ರವಾಸ ಆಯೋಜಕರ ವರದಿ.
ಶುಭಾ ವಿಕಾಸ್ ಒಮ್ಮೆ ಬಿರುಸು ಮಳೆ. ಮಗದೊಮ್ಮೆ ಹನಿಯ ಸಿಂಚನದ ನಡುವೆ ಇಣುಕುವ ಬಿಸಿಲ ವಾತಾವರಣ. ಹಿಂದೆಂದಿನಂತಿಲ್ಲಈ ವರ್ಷದ ಮಳೆಗಾಲ ಎಂಬ ಮಾತಿನ ನಡುವೆ ಮಳೆಗಾಲಕ್ಕೆ ಈಗ ಮಧ್ಯಮ ಕಾಲ. ಕೆಲವು ಪ್ರದೇಶಗಳಲ್ಲಿಮಳೆಗೆ ಕೊಂಚ ವೇಗ ಸಿಕ್ಕಿದೆ. ಹೊಳೆಗಳು ತುಂಬಿವೆ, ಜಲಪಾತಗಳು ಧುಮ್ಮಿಕ್ಕುತ್ತಿವೆ. ಆದರೆ ಇನ್ನೂ ಹಲವೆಡೆ ಹರಿಯುವ ಹೊಳೆಯ ನೀರಲ್ಲಿಸೆಳೆತವಿಲ್ಲ, ನೀರಿನ ಭೋರ್ಗರೆತ ಕಿವಿಗೆ ಅಪ್ಪಳಿಸುವುದಿಲ್ಲ. ಆದರೆ ಚಿಗುರಿದ ಹುಲ್ಲು, ಅರಳಿದ ಹೂವು, ಒದ್ದೆಯಾದ ಹಾದಿ ಎಲ್ಲವೂ ಇಲ್ಲೇ ಎಲ್ಲೊಮಳೆಯಾಗಿದೆ ಎನ್ನುತ್ತವೆ.
ಈ ವರ್ಷ ಮಳೆಯ ಕೊರತೆಯ ಕಾರಣಕ್ಕೆ ಇಡೀ ಮಳೆಗಾಲದ ವಾತಾವರಣ ಬದಲಾಗಿದೆ. ಇದು ಮಳೆಗಾಲದ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರಿದೆ. ಮಳೆ ನೋಡಲಿಕ್ಕಾಗಿಯೇ ಪ್ರವಾಸ ಮಾಡುವವರಿಗೆ ಹಿನ್ನೆಡೆಯಾದರೆ ಮಳೆಯೇ ಓಡಾಟಕ್ಕೆ ಸಮಸ್ಯೆ ಎನ್ನುವವರಿಗೆ ಆರಾಮದಾಯಕ. ಸಾಮಾನ್ಯವಾಗಿ ಮಳೆಗಾಲವೆಂದರೆ ಪ್ರವಾಸೋದ್ಯಮದಲ್ಲಿಆಫ್ ಸೀಸನ್ . ಆದರೆ ಈ ವರ್ಷ ಚಿತ್ರಣ ಸಂಪೂರ್ಣ ಬದಲಾಗಿದೆ. ಜನರು ಮಳೆಯ ಕಾರಣಕ್ಕೆ ಮನೆಯಲ್ಲಿಕುಳಿತುಕೊಳ್ಳುವ ಬದಲು ಮಳೆಯನ್ನೇ ಹುಡುಕಿಕೊಂಡು ಹೊರಟಿದ್ದಾರೆ.
ಪೀಕ್ ಸೀಸನ್ ಆಗಿದ್ದು ಯಾಕೆ?
ಈ ವರ್ಷ ಅಲ್ ನಿನೋ ಪ್ರಭಾವದಿಂದಾಗಿ ದೇಶದ ಹಲವು ಭಾಗಗಳಲ್ಲಿವಾಡಿಕೆಗಿಂತ ಕಡಿಮೆ ಹಾಗೂ ವಿಳಂಬಿತ ಮಳೆಯಾಗಿದೆ. ಭೋರ್ಗರೆಯುವ ಮಳೆಯ ಭಯವಿಲ್ಲದೆ, ಹಿತಕರವಾದ ಜಿನುಗು ಮಳೆ ಹಾಗೂ ಮಬ್ಬು ವಾತಾವರಣ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಹಸಿರು ಕಣಿವೆಗಳು ಮತ್ತು ಮೋಡಗಳ ಸೌಂದರ್ಯ ಆಕರ್ಷಿಸುತ್ತಿದೆ. ವಾರಾಂತ್ಯದಲ್ಲಿ2-3 ದಿನಗಳ ಕಾಲ ನಿಸರ್ಗದ ಮಡಿಲಲ್ಲಿಕಳೆಯುವ ಅಭ್ಯಾಸ ಹೆಚ್ಚಾಗಿದೆ. ಹಸಿರು ವಾತಾವರಣದಲ್ಲಿಸಮಯ ಕಳೆಯಬೇಕು ಎಂಬ ಮನೋಭಾವದ ಪ್ರವಾಸ ಈ ವರ್ಷ ತೇಜೋಮಯವಾಗಿದೆ ಎಂಬುದು ಪ್ರವಾಸ ಆಯೋಜಕರ ಅಭಿಪ್ರಾಯ.
ಅಲ್ಲದೆ ಹೋಟೆಲ್ ಹಾಗೂ ಟ್ರಾವೆಲ್ ಕಂಪನಿಗಳÜ ಆಕರ್ಷಕ ರಿಯಾಯಿತಿಗಳಿಂದಾಗಿ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಿದೆ. ವರದಿಯೊಂದರ ಪ್ರಕಾರ, ಮುನ್ನಾರ್ , ಮಸ್ಸೋರಿಯಂತಹ ಪ್ರವಾಸಿ ತಾಣಗಳಲ್ಲಿಕಳೆದ ವರ್ಷಕ್ಕೆ ಹೋಲಿಸಿದರೆ ಹೋಟೆಲ್ ಬುಕಿಂಗ್ ಗಳು ಸುಮಾರು 10 ಪಟ್ಟು ಹೆಚ್ಚಾಗಿವೆ. ವಯನಾಡ್ , ಊಟಿ, ಕೊಡೈಕೆನಾಲ್ , ತಿರುವನಂತಪುರಂ, ಕೊಲ್ಲಂ, ಪಳನಿ, ಮಸ್ಸೋರಿ, ಮನಾಲಿ, ನೈನಿತಾಲ್ , ಋುಷಿಕೇಶ, ಲೋನಾವಲ, ಮಹಾಬಲೇಶ್ವರ, ಸತಾರಾ, ಗೋವಾ, ಉದಯಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ಮುಂಚೂಣಿಯಲ್ಲಿವೆ.
ಬಾಕ್ಸ್
ಮಳೆ ಕೊರತೆಗೆ ಪ್ರವಾಸಿಗರ ನಿರಾಸಕ್ತಿ
ಭಾರಿ ಮಳೆ ಬೀಳುವ ಪ್ರವಾಸ ತಾಣಗಳಲ್ಲಿಸ್ಥಳೀಯ ಜೀವನ, ಪರಿಸರ, ಜಲಪಾತಗಳನ್ನು ನೋಡಲಿಕ್ಕಾಗಿಯೇ ಮಳೆಗಾಲದಲ್ಲಿಪ್ರವಾಸಿಗರು ಯಥೇಚ್ಛವಾಗಿ ಹೋಗುತ್ತಾರೆ. ಆದರೆ ಈ ವರ್ಷ ಮಳೆಯ ಕೊರತೆಯೇ ಜಲಪಾತಗಳನ್ನು ಅರಸಿ ಹೊರಡುವ ಯಾನ ನಿರಾಸಕ್ತವಾಗಿದೆ. ಏಕೆಂದರೆ ಮಳೆಯೇ ಬಾರದ ಕಾರಣ ಧುಮ್ಮಿಕ್ಕುವ ಜಲಧಾರೆ, ತುಂಬಿ ಹರಿಯುವ ಹೊಳೆ, ನದಿಗಳ ರುದ್ರ ರಮಣೀಯ ನೋಟ ಸಿಗುತ್ತಿಲ್ಲ.
ಕೋಟ್
ಪ್ರತಿ ವರ್ಷ ಮಳೆಯನ್ನು ನೋಡಲಿಕ್ಕಾಗಿಯೇ ದೂರದ ಊರುಗಳಿಂದ ಪ್ರವಾಸಿಗರು ಕಾಡಿನ ತಾಣಗಳಿಗೆ ಯಥೇಚ್ಛವಾಗಿ ಬರುತ್ತಿದ್ದರು. ಆದರೆ ಈ ವರ್ಷ ಮಳೆಯ ಕೊರತೆಯ ಕಾರಣಕ್ಕೆ ಪ್ರವಾಸಿ ಆಕರ್ಷಣೆಯೂ ಇಲ್ಲ. ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಮಳೆಯ ಕೊರತೆ ಪ್ರವಾಸಿಗರನ್ನೇ ನಂಬಿದ್ದ ಹೋಮ್ ಸ್ಟೇಗಳಿಗೆ ನಷ್ಟ ಉಂಟು ಮಾಡಿವೆ.
ನರಸಿಂಹ ಚಾಪಖಂಡ| ಹೋಮ್ ಸ್ಟೇಯೊಂದರ ಮುಖ್ಯಸ್ಥ
ಕಳೆದ ವರ್ಷಗಳ ಮಳೆಗಾಲಕ್ಕೆ ಹೋಲಿಸಿದರೆ ಈ ವರ್ಷ ಪ್ರವಾಸಕ್ಕಾಗಿ ಬುಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಿದೆ. ವಾರಾಂತ್ಯದ ಟ್ರಿಪ್ ಗಳಿಗೆ ಬೇಡಿಕೆ ಇದೆ. ಕೊನೆಯ ಕ್ಷಣದ ಬುಕಿಂಗ್ ಗಳು ಟ್ರೆಂಡಿಂಗ್ ನಲ್ಲಿವೆ. ಹಿಲ್ ಸ್ಟೇಷನ್ ಗಳು ಸದ್ಯ ಗಮನ ಸೆಳೆಯುತ್ತಿದ್ದು, ಈಶಾನ್ಯ ಭಾರತದತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಪೂಜಾ | ಪ್ರವಾಸ ಆಯೋಜಕಿ
---
ಬಾಕ್ಸ್
ಸಣ್ಣ ಪ್ರವಾಸ
ವರದಿಯ ಪ್ರಕಾರ, ದೇಶದೊಳಗೆ ಮಳೆಗಾಲದ ಪ್ರವಾಸಗಳ ಹುಡುಕಾಟವು ಕಳೆದ ವರ್ಷಕ್ಕಿಂತ ಶೇಕಡಾ 40 ರಷ್ಟು ಹೆಚ್ಚಾಗಿದೆ. ಜನರು 3 ರಿಂದ 5 ದಿನಗಳ ವೀಕೆಂಡ್ ಬ್ರೇಕ್ ಅಥವಾ ಸಣ್ಣ ರಜೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಮೆಟ್ರೋ ನಗರಗಳಲ್ಲದ ಪ್ರಶಾಂತ ಹಾಗೂ ಹಸಿರಿನಿಂದ ಕೂಡಿದ ಸ್ಥಳಗಳ ಕಡೆ ಒಲವು ಹೆಚ್ಚಿದೆ. ಭಾರತೀಯರು ಮುಂಚಿತವಾಗಿ ಯೋಜನೆ ರೂಪಿಸಿ ಲಾಂಗ್ ವೀಕೆಂಡ್ ಗಳಲ್ಲಿವಿದೇಶಗಳಿಗೆ ತೆರಳುತ್ತಿದ್ದಾರೆ. ವಿದೇಶಿ ಲಾಂಗ್ ವೀಕೆಂಡ್ ಬುಕಿಂಗ್ ಗಳು ಕೂಡ ಶೇಕಡಾ 40 ರಷ್ಟು ಏರಿಕೆಯಾಗಿವೆ. ಮಾಲ್ಡೀÊ್ಸ…, ಬಾಲಿ, ಥಾಯ್ಲೆಂಡ್ , ಸಿಂಗಾಪುರ್ ಮತ್ತು ಶ್ರೀಲಂಕಾ ಜನಪ್ರಿಯ ತಾಣಗಳು. ಹಬ್ಬಗಳ ಸಾಲಲ್ಲಿಲಕ್ನೋ, ಭೋಪಾಲ್ , ಇಂದೋರ್ ನಂತಹ ಉತ್ತರ ಭಾರತದ ನಗರಗಳಲ್ಲಿರಕ್ಷಾ ಬಂಧನಕ್ಕೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ.