ಮನೆಯಲ್ಲಿಎಷ್ಟು ಜನರಿರುತ್ತಾರೋ ಅಷ್ಟು ವಾಹನಗಳು ಇರುವ ಕಾಲದಲ್ಲಿನಾವಿದ್ದೇವೆ. ವಾಹನ ಎಲ್ಲರ ಅವಶ್ಯಕತೆ ಆಗಿದೆ. ಒಂದು ಅಂಕಿಅಂಶದ ಪ್ರಕಾರ 2025ರಲ್ಲಿಜಗತ್ತಿನಾದ್ಯಂತ ಸುಮಾರು 100 ದಶಲಕ್ಷ ವಾಹನಗಳು ಮಾರಾಟವಾಗಿವೆ. 25 ದಶಲಕ್ಷ ವಾಹನಗಳು ಭಾರತದಲ್ಲೇ ಮಾರಟವಾಗಿವೆ. ಇದರಲ್ಲಿದ್ವಿಚಕ್ರವಾಹನಗಳದ್ದೇ ಸಿಂಹಪಾಲು. 2025ರಲ್ಲಿ19 ದಶಲಕ್ಷದಷ್ಟು ಹೊಸ ದ್ವಿಚಕ್ರವಾಹನಗಳು ಭಾರತದ ರಸ್ತೆಗಿಳಿದಿವೆ.
ಭಾರತದಲ್ಲಿದ್ವಿಚಕ್ರವಾಹನಗಳ ಬಳಕೆ ಮತ್ತು ಕೊಳ್ಳುವಿಕೆಯ ಟ್ರೆಂಡ್ ಬಹಳಷ್ಟು ಬದಲಾಗಿದೆ. 150 ಸಿಸಿಯ ಒಳಗಿರುವ ಪ್ರವೇಶ ಮಟ್ಟದ ಬೈಕ್ ಗಳನ್ನು ಹೆಚ್ಚು ಕೊಳ್ಳುತ್ತಿದ್ದ ಗ್ರಾಹಕರು ಇಂದು ಮಧ್ಯಮವರ್ಗದ ಪ್ರೀಮಿಯಂ ಬೈಕ್ ಗಳನ್ನು ಖರೀದಿಸುತ್ತಿದ್ದಾರೆ. ಜನರ ಆಸಕ್ತಿ 200ರಿಂದ 650 ಸಿಸಿಯ ಬೈಕ್ ಗಳಲ್ಲಿಹೆಚ್ಚು ಕಾಣುತ್ತಿದೆ. ಕ್ರಿಸಿಲ್ ಇಂಟೆಲಿಜೆನ್ಸ್ ನ ವರದಿಯ ಪ್ರಕಾರ 2030ರ ಹೊತ್ತಿಗೆ ಮಾರಾಟವಾಗುವ ಬೈಕ್ ಗಳ ಪೈಕಿ ಕಾಲು ಭಾಗದಷ್ಟು ಪ್ರೀಮಿಯಂ ಬೈಕ್ ಗಳೇ ಆಗಿರುತ್ತವೆ. ಇದನ್ನು ಅರ್ಥ ಮಾಡಿಕೊಂಡು ರಾಯಲ್ ಎನ್ಫೀಲ್ಡ್ , ಕೆಟಿಎಂ, ಬಜಾಜ್ , ಟಿವಿಎಸ್ , ಹೋಂಡಾ, ಕವಾಸಕಿ, ಜಾವಾ, ಯಮಹಾ ಸೇರಿದಂತೆ ಎಲ್ಲಬೈಕ್ ಸಂಸ್ಥೆಗಳು ಮಿಡ್ -ಕೆಪಾಸಿಟಿ ಪ್ರೀಮಿಯಂ ಬೈಕ್ ಗಳ ಉತ್ಪಾದನೆ ಮತ್ತು ಆಯ್ಕೆಯನ್ನು ಹೆಚ್ಚು ಮಾಡಿವೆ. ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನಾದ್ಯಂತ ಈ ಟ್ರೆಂಡ್ ಕಂಡುಬಂದಿದೆ. ಇದಕ್ಕೆ ಹಲವು ಕಾರಣಗಳಿವೆ:
* ಉಪಯುಕ್ತತೆ ಮತ್ತು ದಕ್ಷತೆ: ಕಡಿಮೆ ಸಿಸಿಯ ಬೈಕ್ ಗಳು ದಿನ ಬಳಕೆಗೆ ಅನುಕೂಲಕರವಾದರೂ ದೂರಪ್ರಯಾಣಗಳಿಗೆ ಸುಖಕರವಲ್ಲ. ಹಾಗೇ ಸೂಪರ್ ಬೈಕ್ ಗಳ ವೇಗ ಹೆಚ್ಚಿದ್ದರೂ ಅದು ದಿನ ಬಳಕೆಗೆ ಸಹಕಾರಿ ಆಗುವುದಿಲ್ಲ. ಇವೆರಡರ ಮಧ್ಯೆ ಇರುವ ಪ್ರೀಮಿಯಂ ಬೈಕ್ ಗಳು ದಿನ ಬಳಕೆಗೂ ಸೈ, ದೂರ ಪ್ರಯಾಣಕ್ಕೂ ಜೈ. ಅಲ್ಲದೇ ತಂತ್ರಜ್ಞಾನದಿಂದಾಗಿ ಈಗಿನ ಪ್ರೀಮಿಯಂ ಬೈಕ್ ಗಳ ದಕ್ಷತೆ ಮತ್ತು ಮೈಲೇಜ್ ಎರಡೂ ಹೆಚ್ಚಾಗಿದೆ. ಸೂಪರ್ ಬೈಕ್ ಗಳಲ್ಲಿಕಾಣುವ ಸುರಕ್ಷತೆಯ ತಂತ್ರಜ್ಞಾನಗಳು ಇಂದು ಪ್ರೀಮಿಯಂ ಬೈಕ್ ಗಳಲ್ಲೂಲಭ್ಯ.
* ಕೊಳ್ಳುವಿಕೆಯ ಸಾಮರ್ಥ್ಯ: ಜನರ ಕೊಳ್ಳುವಿಕೆಯ ಸಾಮರ್ಥ್ಯ ಹೆಚ್ಚಾಗಿದೆ. ಇದರ ಜತೆಗೆ ಬೈಕ್ ಕೊಳ್ಳಲು ಬ್ಯಾಂಕ್ ನಿಂದ ಸಾಲ ಪಡೆಯುವುದು ಸುಲಭವಾಗಿದೆ. ಸ್ಪರ್ಧಾತ್ಮಕತೆಯಂದಾಗಿ ಸಂಸ್ಥೆಗಳು ಬೈಕ್ ಗಳ ಬೆಲೆಯನ್ನೂ ಕೈಗೆ ಎಟುಕುವಂತೆ ಮಾಡಿವೆ.
* ಬದಲಾದ ಮನೋಭಾವ: ಇಂದು ಪ್ರವಾಸ ಎಂಬುದು ಬಸ್ , ಕಾರ್ , ರೈಲು ಇವುಗಳಿಗೆ ಸೀಮಿತವಾಗಿಲ್ಲ. ಎಲ್ಲಿಂದ ಎಲ್ಲಿಗೆ ಬೇಕಿದ್ದರೂ ಬೈಕ್ ನಲ್ಲಿಹೋಗಬಹುದು ಎಂಬ ಸಾಹಸ ಮನೋಭಾವ ಜನರಲ್ಲಿಬೆಳೆದಿದೆ. ಹಾಗಾಗಿ ದೇಶದಾದ್ಯಂತ ರೈಡಿಂಗ್ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ದೂರ ಪ್ರಯಾಣ ಮಾಡಲು ಅನುಕೂಲಕರವಾದ ಬೈಕ್ ಬೇಕಾಗುತ್ತದೆ. ಇದಕ್ಕೆ ಮಿಡ್ -ಕೆಪಾಸಿಟಿ ಬೈಕ್ ಗಳು ಒಳ್ಳೆಯ ಆಯ್ಕೆ. ಇಷ್ಟೇ ಅಲ್ಲದೆ, ರೈಡಿಂಗ್ ಎಂದರೆ ಸ್ಟೆ್ರಸ್ ಬಸ್ರ್ಟರ್ ಎಂಬ ಪರಿಕಲ್ಪನೆಯೂ ಜನರಲ್ಲಿಮೂಡಿದೆ.
* ಸಾಮಾಜಿಕ ಜಾಲತಾಣ ಮತ್ತು ರೈಡಿಂಗ್ ಬಳಗಗಳು: ಸಾಮಾಜಿಕ ಜಾಲತಾಣಗಳಲ್ಲಿರೈಡಿಂಗ್ ಬಗ್ಗೆ ವಿಶೇಷ ಆಕರ್ಷಣೆ ಸೃಷ್ಟಿಯಾಗಿದೆ. ಬೈಕ್ ರೈಡ್ ಹೋದಾಗ ಒಂದು ಫೋಟೋ ಅಥವಾ ವಿಡಿಯೋ ಹಾಕುವುದು, ಅದನ್ನು ನೋಡಿ ಮತ್ತಷ್ಟು ಜನ ಆ ಜಾಗಗಳಿಗೆ ಹೋಗುವ ಪರಿಪಾಠ ಪ್ರಾರಂಭವಾಗಿದೆ. ಇದಕ್ಕೆ ಪುಷ್ಟಿಯಾಗಿ ಹಲವಾರು ರೈಡಿಂಗ್ ಬಳಗಗಳು ಹುಟ್ಟಿಕೊಂಡಿವೆ.
* ಸರ್ವಿಸಿಂಗ್ ಮತ್ತು ಬಿಡಿ ಭಾಗಗಳು: ಮೊದಲು ದುರ್ಬಲವಾಗಿದ್ದ ಪ್ರೀಮಿಯಂ ಬೈಕ್ ಗಳ ಸರ್ವಿಸಿಂಗ್ ವ್ಯವಸ್ಥೆ ಹಾಗೂ ಬಿಡಿ ಭಾಗಗಳ ಲಭ್ಯತೆ ಈಗ ಸುಲಭವಾಗಿದೆ.
* ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ: ಇಂದು ಬೈಕ್ ಗಳ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ದೊಡ್ಡದಾಗಿ ಬೆಳೆದು ನಿಂತಿದೆ. ಹಾಗಾಗಿ ಖರೀದಿಸಿದ ಬೈಕ್ ಗಳನ್ನು ಮಾರುವುದೂ ಅಷ್ಟೇ ಸುಲಭ.
ಜಾಗತಿಕ ಮಟ್ಟದಲ್ಲಿಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತ. ಹಾಗಾಗಿ ಭಾರತ ಪ್ರೀಮಿಯಂ ಬೈಕ್ ಗಳ ಅತಿ ದೊಡ್ಡ ಮಾರುಕಟ್ಟೆಗಳಲ್ಲಿಒಂದು. ಇಥನಾಲ್ ಮಿಶ್ರಣ, ಎಲೆಕ್ಟ್ರಿಕ್ ಗಾಡಿಗಳ ಹವಾ ಹೆಚ್ಚುತ್ತಿರುವ ಸಂದರ್ಭದಲ್ಲೂಪ್ರೀಮಿಯಂ ಬೈಕ್ ಗಳ ಮಾರಾಟ ಕಡಿಮೆಯಾಗಿಲ್ಲ. ಸದ್ಯಕ್ಕೆ ಕಡಿಮೆಯಾಗುವ ಸಂಭವವೂ ಕಾಣುತ್ತಿಲ್ಲ.