Recruitment Of 38 Manager And 34 Specialist Positions By State Bank Of India And Ntpc Green Energy Limited
ಜಾಬ್ ಸುದ್ದಿ-2
Contributed by: Jaya shree|Vijaya Karnataka•
ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ನೇಮಕ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಉದ್ಯೋಗಾವಕಾಶಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಅರ್ಹ ಅಭ್ಯರ್ಥಿಗಳಿಂದ ವಿವಿಧ ವಿಭಾಗಗಳಲ್ಲಿಖಾಲಿಯಿರುವ ಒಟ್ಟು 38 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 27 ಕೊನೆಯ ದಿನವಾಗಿದೆ. ಸೈಬರ್ ಸೆಕ್ಯುರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ , ಮಾನವ ಸಂಪನ್ಮೂಲ ಹಾಗೂ ಎಂಟರ್ ಪ್ರೈಸ್ ಟೆಕ್ನಾಲಜಿ ಆರ್ಕಿಟೆಕ್ಚರ್ ವಿಭಾಗಗಳಲ್ಲಿಡೆಪ್ಯೂಟಿ ಮ್ಯಾನೇಜರ್ , ಮ್ಯಾನೇಜರ್ ಮತ್ತು ವೈಸ್ ಪ್ರೆಸಿಡೆಂಟ್ ಹುದ್ದೆಗಳು ಲಭ್ಯವಿವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೈಬರ್ ಸೆಕ್ಯುರಿಟಿ ಮತ್ತು ಎಐ ಹುದ್ದೆಗಳಿಗೆ ಬಿಇ/ಬಿ.ಟೆಕ್ ಅಥವಾ ಎಂಸಿಎ/ಎಂ.ಟೆಕ್ ಪದವಿ ಹಾಗೂ ಕನಿಷ್ಠ 4ಧಿ-12 ವರ್ಷಗಳ ಅನುಭವ ಹೊಂದಿರಬೇಕು. ಎಚ್ ಆರ್ ಮ್ಯಾನೇಜರ್ ಹುದ್ದೆಗಳಿಗೆ ಎಂಜಿಎಂ/ಎಂಬಿಎ(ಎಚ್ ಆರ್ ) ಜತೆಗೆ ಕನಿಷ್ಠ 6 ವರ್ಷಗಳ ಅನುಭವ ಮತ್ತು ಆರ್ಕಿಟೆಕ್ಚರ್ ಹುದ್ದೆಗಳಿಗೆ ಎಂಜಿನಿಯರಿಂಗ್ ಪದವಿಯೊಂದಿಗೆ ಟೋಗಾಫ್ ಪ್ರಮಾಣಪತ್ರ ಹಾಗೂ ವೃತ್ತಿಪರ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕು. ಜುಲೈ 31, 2026ರ ಅನ್ವಯ ಹುದ್ದೆಗಳ ಆಧಾರದ ಮೇಲೆ ಕನಿಷ್ಠ 25ರಿಂದ ಗರಿಷ್ಠ 50 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಇರುತ್ತದೆ. ಸಾಮಾನ್ಯ, ಆರ್ಥಿಕ ಹಿಂದುಳಿದ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ. ಆಗಿದೆ. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಆಯ್ಕೆ ಪ್ರಕ್ರಿಯೆಯು ಶಾರ್ಟ್ ಲಿಸ್ಟಿಂಗ್ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಅಧಿಕೃತ ವೆಬ್ ಸೈಟ್ sಚಿಜಿ.ಚಿa್ಞk.ಜ್ಞಿ ಪರಿಶೀಲಿಸಬಹುದಾಗಿದೆ.
==================
ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
- ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕೊನೆಯ ದಿನ
ಎನ್ ಟಿಪಿಸಿ ಗ್ರೀನ್ ಎನರ್ಜಿ ಲಿಮಿಟೆಡ್ ಸಂಸ್ಥೆಯು ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ನವೀಕರಿಸಬಹುದಾದ ಇಂಧನ, ಹಣಕಾಸು ಮತ್ತು ಭೂ ವಿಭಾಗಗಳಲ್ಲಿಒಟ್ಟು 34 ಮ್ಯಾನೇಜರ್ (ಇ-4 ಗ್ರೇಡ್ ) ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕೊನೆಯ ದಿನವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಎಂಜಿನಿಯರಿಂಗ್ ಪದವಿ, ಸಿಎ/ಸಿಎಂಎ ಅಥವಾ ನಿರ್ದಿಷ್ಟ ವಿಷಯಗಳಲ್ಲಿಸ್ನಾತಕೋತ್ತರ ಪದವಿ ಪಡೆದಿರಬೇಕು. ಜತೆಗೆ, ಸಂಬಂಧಿತ ಕ್ಷೇತ್ರದಲ್ಲಿಕನಿಷ್ಠ 10 ವರ್ಷಗಳ ಕಾರ್ಯಾನುಭವ ಹೊಂದಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 70,000 ರೂ. ನಿಂದ 2,00,000 ರೂ.ವರೆಗೆ ವೇತನ ದೊರೆಯಲಿದೆ. ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್ ಸಿ, ಎಸ್ ಟಿ, ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.್ಞಜಛ್ಝಿ.ಜ್ಞಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ.