ಆತ್ಮಬಲದಿಂದ ಆಧುನಿಕತೆಗೆ ಚೈತನ್ಯತೆ

Contributed bymadhugirinews@gmail.com|Vijaya Karnataka
self energy and modernization in tumkur education newly intended possibilities
ವಿಕ ಸುದ್ದಿಲೋಕ ತುಮಕೂರು

ಶಿಕ್ಷಕನ ಬದುಕಿನಲ್ಲಿಕಲಿಯುವುದು ಮತ್ತು ಬೋಧಿಸುವುದೇ ನಿಜವಾದ ತಪಸ್ಸಾಗಿದ್ದು, ರಾಷ್ಟ್ರ ನಿರ್ಮಾಣದ ಪ್ರಧಾನ ಶಿಲ್ಪಿ ಶಿಕ್ಷಕನೇ ಆಗಿದ್ದಾನೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತೀ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿವಿದ್ಯಾಶಂಕರ್ ಲರ್ನಿಂಗ್ ಸೆಂಟರ್ ಸಹಯೋಗದೊಂದಿಗೆ ಆಯೋಜಿಸಿದ್ದ ವಿದ್ಯಾರ್ಥಿ ದೇವೋಭವ’ ಕಾರ್ಯಕ್ರಮದಲ್ಲಿವಿಶೇಷ ಉಪನ್ಯಾಸ ನೀಡಿದ ಅವರು, ರಾಷ್ಟ್ರದ ಅತ್ಯುತ್ತಮ ಮನಸ್ಸುಗಳು ಶಿಕ್ಷಕರಾಗಬೇಕೆಂಬುದು ಸರ್ವಪಲ್ಲಿರಾಧಾಕೃಷ್ಣನ್ ಅವರ ಆಶಯವಾಗಿತ್ತು ಎಂದರು.

ಆಧುನೀಕರಣವೆಂದರೆ ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತು ಮನೋನಿಗ್ರಹದ ಮಹತ್ವವನ್ನು ಕಡೆಗಣಿಸುವುದಲ್ಲ. ಆಧುನಿಕತೆ ಚೈತನ್ಯದಾಯಕವಾಗಬೇಕಾದರೆ ಅದು ಆತ್ಮಬಲದ ಶಕ್ತಿಯಿಂದ ಕೂಡಿರಬೇಕು. ವಿದ್ಯಾರ್ಥಿಗಳು ಸೋಲಿನ ಭಯ, ಆಷಾಢಭೂತಿತನ, ಹುಸಿ ಅಹಂಕಾರ, ಸತ್ಯವನ್ನು ನುಡಿಯುವ ಧೈರ್ಯದ ಕೊರತೆ ಹಾಗೂ ಇತರರಿಂದ ಎದುರಾಗಬಹುದಾದ ಟೀಕೆಗಳ ಭಯವನ್ನು ಸಮರ್ಪಕವಾಗಿ ಎದುರಿಸುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳೇ ರಾಷ್ಟ್ರದ ಭವಿಷ್ಯದ ಸಂಪನ್ಮೂಲವಾಗಿದ್ದಾರೆ ಎಂದರು.

ಆಪಲ್ ಸಂಸ್ಥೆಯ ಹಿರಿಯ ಎಂಜಿನಿಯರ್ ಪ್ರೀತಿ ಶ್ರೀಧರ್ , ಸ್ವಾಮಿ ಧೀರಾನಂದಜೀ, ಮೈಸೂರು ಮಾಳವಿ ಮಂಜುನಾಥ್ , ಸುಮಂತ್ ಮಂಜುನಾಥ್ , ಶಿಕ್ಷಣತಜ್ಞ ಜಿ.ವಿ. ವಿದ್ಯಾಶಂಕರ್ , ಸುನೀಲ್ ಹುಲಿಕಲ್ ಹಾಜರಿದ್ದರು.

ಫೋಟೋ 21ಕೆಜಿಎಚ್ 2: ತುಮಕೂರು ರಾಮಕೃಷ್ಣ ಆಶ್ರಮದಲ್ಲಿನಡೆದ ’ವಿದ್ಯಾರ್ಥಿ ದೇವೋಭವ’ ಕಾರ್ಯಕ್ರಮವನ್ನು ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀ ಉದ್ಘಾಟಿಸಿದರು.