ಪೇಜ್ 8

Contributed byDHEERAJ K|Vijaya Karnataka
the necessity of india an epic of pride
ಅಮ್ಮ

ನನಗೆ ಜನ್ಮ ನೀಡಿದ ದೇವತೆ
ನನ್ನ ಉಸಿರಿಗಾಗಿ ಉಸಿರನ್ನು ತ್ಯಾಗ ಮಾಡಿದ ಮಾತೆ

ನಾನು ಅತ್ತಾಗ ಸಮಾಧಾನ ಮಾಡುವಳು

ನನ್ನ ತಪ್ಪುಗಳನ್ನು ತಿದ್ದುವ ಗುರು

ನನಗೆ ಗೊಂಬೆ ಕೊಟ್ಟು ನನ್ನ ಜೊತೆ ಆಟವಾಡುವ ನನ್ನ ಮುದ್ದಿನ ಸ್ನೇಹಿತೆ

ನನ್ನ ಕೈ ಹಿಡಿದು ಮುನ್ನಡೆಸುವ ಸಹೋದರಿ

ನನಗೆ ಓದಲು ಬರೆಯಲು ಕಲಿಸಿದವಳು

ನನ್ನನು ಹೂವಿನ ಹಾಗೆ ನೋಡಿಕೊಳ್ಳುವವಳು

ನನ್ನ ಪ್ರೀತಿಯ ಅಮ್ಮ

ನಿನ್ನಿಂದ ಸಾರ್ಥಕವೀ ಜನ್ಮ

-ಮಾನ್ಯಶ್ರೀ

7ನೇ ತರಗತಿ, ಹೊಂಗಿರಣ ಶಾಲೆ, ಅಮಟ್ಟಿಕೊಪ್ಪ ಸಾಗರ

-------

ಅಮ್ಮ

ಅಮ್ಮ ನಿನಗಾರು ಸರಿಸಾಟಿ?

ನೀನಿಲ್ಲದವರಿಗೆ ಜೀವನ ಬೇಕಾಬಿಟ್ಟಿ!

ಅಮ್ಮನಿರದ ಜೀವನ ಸ್ವಾರಸ್ಯವಿಲ್ಲ,

ಅಮ್ಮನಿರದ ಬಾಳು ಊಹಿಸಲೂ ಸಾಧ್ಯವಿಲ್ಲ

ಅಮ್ಮನ ಮಡಿಲು ಸ್ವರ್ಗದ ಬಾಗಿಲು,

ಅವಳಿದ್ದರೆ ಬಾಳೇ ಸುಂದರ ಮುಗಿಲು

ಬೇರೆಯವರಿಗಾಗಿ ತನ್ನನ್ನು ಮುಡಿಪಾಗಿಟ್ಟವಳು

ಮಕ್ಕಳ ನಗುವಲ್ಲಿಖುಷಿ ಕಂಡವಳು..

ದೇಶವ ಕಾಯುವ ಸೈನಿಕರಂತೆ;

ಮನೆಯ ಕಾಯುವ ದೇವತೆಯವಳು

ಅಮ್ಮನಿರದ ಎಲ್ಲರ ಜೀವನ,

ಪೂರ್ಣವಾಗದ ಕವನ

ಧನುಷ್

8ನೇ ತರಗತಿ, ಜವಾಹರ್ ನವೋದಯ ವಿದ್ಯಾಲಯ, ಹಾವೇರಿ

-------

ನನ್ನ ಭಾರತ - ನನ್ನ ಹೆಮ್ಮೆ

ಹಿಮಾಲಯದ ಕಿರೀಟವಿಟ್ಟ ಚೆಲುವಿನ

ನೆಲೆವೀಡು, ವೈವಿಧ್ಯತೆಯಲಿ ಏಕತೆ ಮೆರೆಯುವ ನಮ್ಮ

ಅಭೇದ್ಯ ನಾಡು!

ಮೂರು ವರ್ಣದ ಧ್ವಜವು ಬಾನಲಿ ಎತ್ತರಕೆ

ಹಾರಾಡುತಿರೆ,

ಪ್ರತಿಯೊಬ್ಬ ಭಾರತೀಯನ ಎದೆಯಲಿ

ಹೆಮ್ಮೆಯ ಸಿಂಚನ!

ತ್ಯಾಗ-ಬಲಿದಾನದಿ ಸ್ವಾತಂತ್ರ್ಯ ತಂದ ವೀರರಿಗೆ

ನಮನ,

ಶಾಂತಿ, ಸೋದರತೆಯ ಹಾದಿಯಲಿ ಸಾಗಲಿ

ನಮ್ಮಯ ಪಯಣ!

ಜಗತ್ತಿನೆದುರು ನಮ್ಮ ದೇಶದ ಕೀರ್ತಿ ಪತಾಕೆ

ಹಾರಲಿ,

‘ನಾವು ಭಾರತೀಯರು’ ಎಂಬ ಮುಕ್ತ ಧ್ವನಿ

ಜಗದೆಲ್ಲೆಡೆ ಮೊಳಗಲಿ!

-ವಿಘ್ನೇಶ್

8ನೇ ತರಗತಿ, ಡಾ. ಎನ್ .ಎಸ್ .ಎ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆ, ನಿಟ್ಟೆ, ಉಡುಪಿ

---------

ಸ್ವಾತಂತ್ರ್ಯ ಗೀತೆ

ದೇಶಕ್ಕೆ ಉಸಿರಾಗಿ ಒಂದಾಗಿ ಮುಂದಾಗಿ

ಬ್ರಿಟಿಷರ ಕನಸಿಗೆ ದುಃಸ್ವಪ್ನರಾದರು

ಭಾರತ ಮಾತೆಯ ವರಪುತ್ರರೆಲ್ಲರೂ

ಸ್ವಾತಂತ್ರ್ಯದ ರಣಕಹಳೆ ಊದಿದರಂದು

ಲಾಲ-ಪಾಲ-ಭೋಸರು ಕ್ರಾಂತಿಗೆ ದನಿಯಾಗಿ

ಯುವಕರನ್ನೆಲ್ಲಮಿಂಚಂತೆ ಸೆಳೆದರು

ಭಗತಸಿಂಗ ಸುಖದೇವ ರಾಜಗುರುರಂಥವರು

ಪುಟಿದೆದ್ದು ಬಂದು ಸಿಡಿಲಂತೆ ಸಿಡಿದರು

ಬಿಟಿಷರ ಬೂಟು ಕಾಲಿಗೆ ಎದೆಯೊಡ್ಡಿ ನಿಂತರು

ಸಿಡಿಮದ್ದು ಗುಂಡುಗಳಿಗೆ ಪ್ರಾಣವೇ ಕೊಟ್ಟರು

ಹೋರಾಟದ ಕಿಚ್ಚಿಗೆ ಸ್ಫೂರ್ತಿಯ ನೆಲೆಯಾಗಿ

ಸ್ವಾತಂತ್ರ್ಯದ ಕನಸಿಗೆ ಮುನ್ನುಡಿಯಾದರು

ಅಹಿಂಸೆಯ ಹೋರಾಟದಿ ಸತ್ಯಾಗ್ರಹ ಮಾಡುತಲಿ

ಬ್ರಿಟಿಷರ ನೀತಿಗಳನ್ನು ಗಾಂಧೀಜಿಯು ಮುರಿದರು

ದೇಶವೇ ಒಂದಾಯ್ತು ಬ್ರಿಟಿಷರಿಗೆ ನಡುಕಾಯ್ತು

ಭಾರತವ ತೊರೆಯುವ ಮನಸ್ಸನ್ನೆ ಮಾಡಿದರು

ವಲ್ಲಭಾಯಿ ನೆಹರೂ ಪಟೇಲರಾದಿಗಳು

ಸ್ವಾತಂತ್ರ್ಯದ ಕಿರೀಟಕೆ ಹೊನ್ನುಡಿಯಾದರು

ಆಗಸ್ಟ್ 15, 1947 ಭಾರತದ ಚರಿತ್ರೆಗೆ

ಎಂದೆಂದೂ ಮರೆಯದ ಶುಭದಿನವಾಯ್ತು

ಅಮರರ ತ್ಯಾಗವನು ಮನಸಾರೆ ನೆನೆಯುತ

ರಾಷ್ಟ್ರದ ಏಕತೆಗೆ ಒಗ್ಗೂಡಿ ಬೆರೆಯೋಣ

ವೀರರ ಕನಸಿನ ಭಾರತ ಕಟ್ಟೋಣ

ದೇಶದ ಸೇವೆಗೆ ಅಣಿಯಾಗಿ ನಿಲ್ಲೋಣ

-ವಿಠಲ ತು. ಜಾಧವ,

ಶಿಕ್ಷಕರು ಸಪ್ತಋುಷಿ ಪಾಠಶಾಲೆ, ವಿಜಯಪುರ

ಫೊಟೋ ಇದೆ

==========

ಖುಷಿ ಪಡಿಸುವುದ್ದೆಲ್ಲಒಳ್ಳೆಯದ್ದಲ್ಲ

ದುಃಖ ಪಡಿಸುವುದ್ದೆಲ್ಲಕೆಟ್ಟದ್ದಲ

ಖುಷಿಯ ಹಿಂದೇ ಒಂದು ಅಳುಕಿದೆ ನೋಡು

ದುಃಖವು ಮುಂದೆ ನಾನಾ ಪಾಠ ಕಲಿಸುತ್ತದೆ ತಾಳು..

-ಸ್ನೇಹ ಬಿ.ಬಿ.

10ನೇ ತರಗತಿ, ಸರಕಾರಿ ಪ್ರೌಢಶಾಲೆ, ಆರಗ, ತೀರ್ಥಹಳ್ಳಿ

= = =

ರೈತ

ದೇಶದ ಬೆನ್ನೆಲುಬು ರೈತ.

ರೈತ ಒಬ್ಬ ಮನುಷ್ಯ ಅಲ್ಲ, ನಮ್ಮೆಲ್ಲರನ್ನು ರಕ್ಷಿಸುವ ದೇವರ ಹಾಗೆ

ಚಳಿ, ಗಾಳಿ, ಮಳೆ ಅಲ್ಲದೆ ಬೆಳಗ್ಗೆಯಿಂದ ಸಂಜೆ ತನಕ ಬೆವರನ್ನು ಸುರಿಸುತ್ತಾ ದುಡಿಯುವವನು,

ಹೊಲದಲ್ಲಿಬೆಳೆಯನ್ನು ಬೆಳೆದು

ತನ್ನ ಹೊಟ್ಟೆಗೆ ಇಲ್ಲದಿದ್ದರೂ ಮನೆಯವರ ಹೊಟ್ಟೆಯನ್ನು ತುಂಬಿಸುವವನು ,

ಎಷ್ಟೇ ಕಷ್ಟದಲ್ಲಿದ್ದರೂ ಮನೆಯವರ ಜೊತೆಗೆ ಖುಷಿ ಖುಷಿಯಿಂದ ಇರುವವನು,

ಅವನೇ ನಮ್ಮೆಲ್ಲರ ಅನ್ನದಾತ ರೈತ

-ತನ್ಮಯಿ ಎಸ್ . ಆನ್ವೇರಿ

7ನೇ ತರಗತಿ, ಹೊಂಗಿರಣ ಶಾಲೆ, ಅಮಟೆಕೊಪ್ಪ ಸಾಗರ