ಪೂರ್ವ ಪ್ರಾಥಮಿಕ ತರಗತಿಗಳಲ್ಲಿಮಕ್ಕಳಿಗೆ ನೋಡುವ ಮತ್ತು ಗ್ರಹಿಸುವ ಆಸಕ್ತಿ ಇರುತ್ತದೆ. ಅಂತಹ ಮಕ್ಕಳಿಗೆ ಸ್ವಾತಂತ್ರ್ಯದ ಪ್ರತೀಕವಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮಹತ್ವ ತಿಳಿಸಬೇಕು ಎಂದು ಖ್ಯಾತ ಜಾದೂಗಾರ ಸತೀಶ್ ಹೆಮ್ಮಾಡಿ ಹೇಳಿದರು.ಕೋಟೇಶ್ವರದ ಕೆನರಾ ಕಿಡ್ಸ್ ಚಿಣ್ಣರ ಶಾಲೆಯಲ್ಲಿಜರುಗಿದ ಸ್ವಾತಂತ್ರ್ಯ ಪೂರ್ವ ಸಂಭ್ರಮದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಶಿಕ್ಷಕಿ ಶೋಭಾ ಐತಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಮಹತ್ವವನ್ನು ತಿಳಿಸಿದರು. ಶಾಲಾ ಶಿಕ್ಷಕರಾದ ಪುಷ್ಪ, ಮಲ್ಲಿಕಾ, ಸವಿತಾ, ಉಮಾ ಮಕ್ಕಳಿಗೆ ಕಥೆಗಳ ಮೂಲಕ ರಾಷ್ಟ್ರ ಪ್ರೇಮ ತಿಳಿಸಿದರು.
ಸಹ ಶಿಕ್ಷಕಿ ಲತಾ ಕಾರ ್ಯಕ್ರಮ ನಿರ್ವಹಿಸಿದರು. ಬಳಿಕ ಸತೀಶ್ ಹೆಮ್ಮಾಡಿ ಅವರಿಂದ ಮಕ್ಕಳಿಗಾಗಿ ಜಾದೂ ಪ್ರದರ್ಶನ ನಡೆಯಿತು.
ಪೋಟೋ//14ಎಬಿ-ಸಿಎಎನ್ // ಕೋಟೇಶ್ವರದ ಕೆನರಾ ಕಿಡ್ಸ್ ಚಿಣ್ಣರ ಶಾಲೆಯಲ್ಲಿಜರುಗಿದ ಸ್ವಾತಂತ್ರ್ಯ ಪೂರ್ವ ಸಂಭ್ರಮದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.