ವಾಲ್ಮೀಕಿ ವಿದ್ಯಾಪೀಠದ ಅಧ್ಯಕ್ಷ ಎನ್ .ಟಿ.ತಮ್ಮಣ್ಣ ಹೇಳಿಕೆ (ಕಿಕ್ಕರ್ )
ನೋಂದವರ ಸೇವೆ ಮಾಡಿದರೆ ಆತ್ಮತೃಪ್ತಿವಿಕ ಸುದ್ದಿಲೋಕ ಕೂಡ್ಲಿಗಿ
‘‘ಪ್ರಸ್ತುತ ನೊಂದವರಿಗೆ ಸಹಾಯ ಮಾಡುವುದರಿಂದ ಆತ್ಮತೃಪ್ತಿಯ ಜತೆಗೆ ನೆಮ್ಮದಿ ಸಿಗಲಿದೆ. ಆದ್ದರಿಂದ ಜನರ ಒಳಿತಿಗಾಗಿ ಸದಾ ಕೆಲಸ ಮಾಡುವ ಧ್ಯೇಯ ಹೊಂದಿದ್ದೇನೆ,’’ ಎಂದು ಸಮಾಜ ಸೇವಕ ಹಾಗೂ ನರಸಿಂಹನಗಿರಿ ವಾಲ್ಮೀಕಿ ವಿದ್ಯಾಪೀಠದ ಅಧ್ಯಕ್ಷ ಎನ್ .ಟಿ.ತಮ್ಮಣ್ಣ ತಿಳಿಸಿದರು.
ತಾಲೂಕಿನ ಗಡಿಗ್ರಾಮ ತಾಯಕನಹಳ್ಳಿ ಗುರುಕನಕ ವಿದ್ಯಾಕೇಂದ್ರದ ಆವರಣದಲ್ಲಿಶನಿವಾರ ಅಭಿಮಾನಿಗಳಿಂದ ಆಯೋಜಿಸಿದ್ದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ನಮ್ಮ ತಂದೆಯವರಾದ ಮಾಜಿ ಶಾಸಕ ದಿ.ಎನ್ .ಟಿ.ಬೊಮ್ಮಣ್ಣ ಅವರು ಮೂಲಸೌಲಭ್ಯಗಳೇ ಇಲ್ಲದಂಥ ಹಳ್ಳಿಗಳಲ್ಲಿಪ್ರೌಢಶಾಲೆಗಳನ್ನು ಆರಂಭಿಸಿ ಲಕ್ಷಾಂತರ ಬಡವರ ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗಿದ್ದಾರೆ. ಅವರಂತೆಯೇ ನಾವುಗಳು ಸಹ ಬಡವರ ಮಕ್ಕಳಿಗೆ ಶಿಕ್ಷಣ, ನೊಂದವರಿಗೆ ಸಹಾಯ ಸೇರಿದಂತೆ ನಾನಾ ಕೆಲಸಗಳನ್ನು ಮಾಡುವುದರಲ್ಲಿತೃಪ್ತಿ ಕಾಣುತ್ತಿದ್ದೇನೆ,’’ ಎಂದು ತಿಳಿಸಿದರು.
ಬೊಮ್ಮಣ್ಣರಿಂದ ಸಮಾಜ ಸೇವೆ :
ಗುರುಕನಕ ವಿದ್ಯಾಕೇಂದ್ರದ ಕಾರ್ಯದರ್ಶಿ ಬಿ.ಟಿ.ಮಂಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ‘‘ಮಾಜಿ ಶಾಸಕ ದಿ.ಎನ್ .ಟಿ.ಬೊಮ್ಮಣ್ಣ ಅವರು ಬಡವರು ಸೇರಿ ಎಲ್ಲರ ಮಕ್ಕಳಿಗೆ ಶಿಕ್ಷಣ ಕಲಿಕೆಗೆ ಅನುಕೂಲವಾಗುವ ದೃಷ್ಟಿಯಿಂದ ಹುಡೇಂ ಸೇರಿ ನಾನಾ ಭಾಗದಲ್ಲಿಶಾಲೆಗಳನ್ನು ಆರಂಭಿಸಿ ಶಿಕ್ಷಣ ಪ್ರೇಮಿಯಾಗಿದ್ದರು. ಅಂಥ ಮಾಜಿ ಶಾಸಕರ ಪುತ್ರರಾದ ಎನ್ .ಟಿ.ತಮ್ಮಣ್ಣ ಅವರು ಸಮಾಜ ಸೇವೆಯಲ್ಲಿತೊಡಗಿಸಿಕೊಂಡು ಉತ್ತಮ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ,’’ ಎಂದು ತಿಳಿಸಿದರು.
ಅಭಿಮಾನಿ ಬಳಗದ ಸನ್ಮಾನ:
ಸಮಾಜ ಸೇವಕ ಎನ್ .ಟಿ.ತಮ್ಮಣ್ಣ ಅವರಿಗೆ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕ ಟಿ.ದೇವಪ್ಪ, ನಿವೃತ್ತ ಡಿವೈಎಸ್ಪಿ ಓಂಕಾರ ನಾಯ್ಕ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಉಣ್ಣೆ ಕೈಮಗ್ಗ ಸಂಘದ ಅಧ್ಯಕ್ಷ ರವಿ, ಮುಖಂಡರಾದ ಎಚ್ .ಮಹಾಂತಪ್ಪ, ಕರ್ನಾರಹಟ್ಟಿ ಪೇಪರ್ ಸೂರಣ್ಣ, ಎ.ಚನ್ನಬಸಪ್ಪ, ದುಗ್ಗಪ್ಪ, ಈಡಿಗರ ಮಲ್ಲಿಕಾರ್ಜುನಪ್ಪ, ಕೆಂಚಲಿಂಗಪ್ಪ, ಸನಾವುಲ್ಲಾ, ಬೊಮ್ಮಣ್ಣ, ಗುರುಲಿಂಗಪ್ಪ, ಕೆ.ಎನ್ .ರಾಘವೇಂದ್ರ, ಕೋಲ್ಕಾರ್ ಪ್ರಕಾಶ್ , ಅಂಜಿನಪ್ಪ, ಈಚಲಬೊಮ್ಮನಹಳ್ಳಿ ಅಂಜಿನಪ್ಪ, ಮಹದೇವಪ್ಪ, ಕಾನಹೊಸಹಳ್ಳಿ ಪೀತಾಂಬರ್ , ಬಿ.ಎಸ್ .ಪಾಪಣ್ಣ, ಸೂರಯ್ಯ, ಕ್ಯಾತಯ್ಯ, ಕೋಟೇಶ್ , ಕೆ.ಎನ್ .ರಮೇಶ್ , ಆಲೂರು ತಿಪ್ಪೇಸ್ವಾಮಿ, ಹಾರಕಬಾವಿ ಕೋಟೇಶ್ , ಶಿಕ್ಷಕ ಹುಲುಗಪ್ಪ ಸೇರಿ ಇತರರಿದ್ದರು.
22 ಕೂಡ್ಲಿಗಿ 01
ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗುರುಕನಕ ವಿದ್ಯಾಕೇಂದ್ರದ ಆವರಣದಲ್ಲಿಶನಿವಾರ ಅಭಿಮಾನಿಗಳಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿಸಮಾಜ ಸೇವಕ ಎನ್ .ಟಿ.ತಮ್ಮಣ್ಣ ಅವರಿಗೆ ಸನ್ಮಾನಿಸಲಾಯಿತು.