ಸಂವಿಧಾನ ಬದ್ಧವಾದ ನಿಯಮಗಳಿಗೆ ಬದ್ಧರಾಗಿರಿ: ಜಿಫ್ರಿ ತಂಙಳ್
ವಿಕ ಸುದ್ದಿಲೋಕ ಕಡಬಖಾಝಿ ಸ್ವೀಕಾರ ಮಾಡಿದ ಮಾತ್ರಕ್ಕೆ ತಮ್ಮ ಇಷ್ಟದಂತೆ ನಿಯಮ ಪಾಲಿಸುವಂತಿಲ್ಲ, ದೇಶದ ಸಂವಿಧಾನ ಬದ್ಧವಾದ ಮತ್ತು ಅದರ ಪರಿಧಿಯೊಳಗೆ ಮಸೀದಿ, ಮಹಲ್ , ಮದ್ರಸ, ದರ್ಸ್ ಗಳಲ್ಲಿಧರ್ಮ ಬೋಧನೆ ನಡೆಯಬೇಕು ಎಂದು ಸಮಸ್ತ ಕೇರಳ ಜಮೀಯ್ಯತ್ ಉಲಮಾ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಅವರು ಶುಕ್ರವಾರ ಸಂಜೆ ಕಡಬ ಅನುಗ್ರಹ ಸಭಾಭವನದಲ್ಲಿನಡೆದ ಕಡಬ ತಾಲೂಕು ವ್ಯಾಪ್ತಿಯ ಮಸೀದಿ ಒಕ್ಕೂಟವಾದ ಸಂಯುಕ್ತ ಜಮಾಅತ್ ಖಾಝಿ ಸ್ವೀಕಾರ ಸಮಾರಂಭದಲ್ಲಿಜಮಾಅತ್ ಗಳಿಗೆ ದೃಢೀಕರಣ ಪತ್ರ ನೀಡಿ ಮಾತನಾಡಿ, ಶರೀಅತ್ ನಿಯಾಮಾವಳಿ ಪ್ರಕಾರ ಧರ್ಮ ಬೋಧನೆ, ಧಾರ್ಮಿಕದ ಜತೆಗೆ ಲೌಖಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಕೇಂದ್ರ ಸಮಿತಿ ಸದಸ್ಯ ಉಮ್ಮರ್ ಫೈಝಿ ಮುಕ್ಕಂ ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಸಂಘಟನೆ ದೇಶ, ಅಂತರ ರಾಷ್ಟ್ರೀಯ ಮಟ್ಟದಲ್ಲಿಗುರುತಿಸಲ್ಪಟ್ಟಿದೆ, ಅದನ್ನು ಮುನ್ನಡೆಸುತ್ತಿರುವ ಮೇಧಾವಿ, ಮಹಾನ್ ಪಂಡಿತರಾಗಿರುವ ಜಿಫ್ರಿ ತಂಙಳ್ ಅವರನ್ನು ಖಾಝಿಯಾಗಿ ಸ್ವೀಕಾರ ಮಾಡುವಂತದ್ದು ಹೆಮ್ಮೆಯ ವಿಚಾರ, ಅವರ ನಿರ್ದೇಶನಗಳಿಗೆ ನಾವುಗಳು ಬದ್ಧರಾಗಿರಬೇಕು. ಮಸೀದಿ, ಮಹಲ್ ಗಳಲ್ಲಿರಾಜಕೀಯವನ್ನು ದೂರ ಇಟ್ಟು ಧರ್ಮ ರಕ್ಷಣೆಯೊಂದೇ ನಮ್ಮ ಗುರಿ ಆಗಿರಬೇಕು ಎಂದರು.
ಕೊಡಗು ಜಿಲ್ಲಾಖಾಝಿ ಅಬ್ದುಲ್ಲಫೈಝಿ ಮಾತನಾಡಿ, ನಮ್ಮ ಯುವ ಸಮೂಹ ಹಲವು ರೀತಿಯ ಅನಾಚಾರ, ಗಾಂಜಾ ಮೊದಲಾದ ಅಮಲು ಪದಾರ್ಥ ಸೇವೆಗಳಲ್ಲಿತೊಡಗಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಇದನ್ನು ತಡೆಯುವ ಸಲುವಾಗಿ ಜಮಾಅತ್ ಗಳಲ್ಲಿಜಾಗೃತಿ ಕಾರ ್ಯಕ್ರಮಗಳನ್ನು ರೂಪಿಸಬೇಕು ಎಂದರು.
ಕಡಬ ಸಂಯುಕ್ತ ಜಮಾಅತ್ ವ್ಯಾಪ್ತಿಯ 16 ಮಸೀದಿ ಜಮಾಅತ್ ಪರವಾಗಿ ಅಧ್ಯಕ್ಷರು ಖಾಝಿ ಅವರಿಂದ ದೃಢೀಕರಣ ಪತ್ರ ಸ್ವೀಕರಿಸಿದರು. ಸಿದ್ದಿಕ್ ದಾರಿಮಿ ಸ್ವಾಗತಿಸಿದರು. ಸಂಯುಕ್ತ ಜಮಾಅತ್ ಪ್ರಧಾನ ಕಾರ ್ಯದರ್ಶಿ ಅಶ್ರಫ್ ಶೇಡಿಗುಂಡಿ ವಂದಿಸಿದರು. ಅನ್ಸಾರ್ ಅದ್ ನಾನಿ ಕಾರ ್ಯಕ್ರಮ ನಿರೂಪಿಸಿದರು.
(ಕಡಬ ಸಂಯುಕ್ತ ಜಮಾಅತ್ ಖಾಝಿ ಸ್ವೀಕಾರ ಸಮಾರಂಭ ನಡೆಯಿತು: ಫೊಟೋ ಫೈಲ್ ನೇಮ್ 22ಕೆಡಿಬಿ ಎಸ್ ಜೆ)