ನಿಧನ

Contributed bysantoshgirimast@gmail.com|Vijaya Karnataka
final tributes departed souls leaving a void in society
ಅಮಿತ್ ಕುಠೋಳೆ ಬಾವನಸೌಂದತ್ತಿ: ಅಂಕಲಿ ಗ್ರಾಮದ ಅಮಿತ್ ಅರುಣ ಕುಠೋಳೆ(40) ನಿಧನರಾದರು. ಮೃತರಿಗೆ ತಂದೆ, ತಾಯಿ, ಪತ್ನಿ, ಮಕ್ಕಳು ಇದ್ದಾರೆ. ಭೀಮಪ್ಪಾ ಭರ್ಚಿ ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿ ಭೀಮಪ್ಪಾ ಭರ್ಚಿ(75) ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು,

ಓರ್ವ ಪುತ್ರಿ ಇದ್ದಾರೆ. ಅಕ್ಕವ್ವ ಕರಿಲಿಂಗಣ್ಣವರ ಗೋಕಾಕ: ತಾಲೂಕಿನ ಅಕ್ಕತಂಗೇರ ಹಾಳದ ಅಕ್ಕವ್ವ ನಿಂಗಪ್ಪ ಕರಿಲಿಂಗಣ್ಣವರ (70) ನಿಧನ ರಾದರು. ಮೃತರಿಗೆ ಗ್ರೇಟರ್ ಬೆಂಗಳೂರು
ಪ್ರಾಧಿಕಾರದ ಉಪ ಆಯುಕ್ತ ರವೀಂದ್ರ ಕರಲಿಂಗಣ್ಣವರ ಸೇರಿ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದೆ. ಅಬ್ದುಲಕರೀಂ ನಂದಗಡ ಬೈಲಹೊಂಗಲ: ನಗರದ ಮುಲ್ಲಾಗಲ್ಲಿಯ ಅಬ್ದುಲಕರೀಂ ಯಾಕೂಬ ಸಾಹಬ್ ನಂದಗಡ (76) ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಸುಶೀಲಾ ಗಣಾಚಾರಿ ಬೈಲಹೊಂಗಲ: ನಗರದ ಎಂ.ಜಿ. ಹೌಸಿಂಗ್ ಕಾಲೊನಿಯ ಸುಶೀಲಾ ದುಂಡಯ್ಯ ಗಣಾಚಾರಿ (ಪುರಾಣಿಕಮಠ) (85) ನಿಧನರಾದರು. ಮೃತರಿಗೆ ಪುತ್ರಿ ಇದ್ದಾರೆ. ವೆಂಕವ್ವ ರೆಡ್ಡಿ ಬೈಲಹೊಂಗಲ: ಇಲ್ಲಿನ ವಿಜಯ ನಗರದ ವೆಂಕವ್ವ ಬಸಪ್ಪ ರೆಡ್ಡಿ (74) ನಿಧನರಾದರು. ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.