ನಿಧನ

Contributed byshashankm102@gmail.com|Vijaya Karnataka
obituary a day of loss for religious and social personalities
ನೀಲವ್ವ ಮಠದ ಸಂಕೇಶ್ವರ: ನಿಡಸೋಸಿ ಗ್ರಾಮದ ನೀಲವ್ವ ಶಂಕರಯ್ಯ ಮಠದ (70) ಹೃದಯಾಘಾತ ದಿಂದ ಶುಕ್ರವಾರ ನಿಧನರಾದರು. ಶರಣ ಪರಂಪರೆಯೊಂದಿಗೆ ಗುರುತಿಸಿಕೊಂಡಿ ದ್ದ ಅವರು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿಸಕ್ರಿಯರಾಗಿದ್ದರು. ಮೃತರಿಗೆ ಪತಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವಿದೆ. ವಸಂತ ಬಡಿಗೇರ ಬೈಲಹೊಂಗಲ: ಇಲ್ಲಿನ ಶ್ರೀ ಮೌನೇಶ್ವರ ನಗರ ನಿವಾಸಿ ವಸಂತ ಈಶ್ವರ ಬಡಿಗೇರ (81) ನಿಧನರಾದರು. ಮೃತರಿಗೆ ಪುತ್ರ ಸೇರಿದಂತೆ ಅಪಾರ ಬಳಗವಿದೆ. ಸಿದ್ಧನಗೌಡ ಪಾಟೀಲ ಬೈಲಹೊಂಗಲ: ಚಿವಟಗುಂಡಿ ಗ್ರಾಮದ ಸಿದ್ಧನಗೌಡ ಗೌಡಪ್ಪ ಪಾಟೀಲ (83) ನಿಧನ ರಾದರು. ಮೃತರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಗೀತಾ ಮೂಗಿ ಬೈಲಹೊಂಗಲ: ಇಲ್ಲಿನ ಪ್ರಭು ನಗರ ನಿವಾಸಿ ಹಾಗೂ ಗಣ್ಯ ಮನೆತನದ ಹಿರಿಯರಾದ ಗೀತಾ ಬಾಬಣ್ಣ ಮೂಗಿ (68) ನಿಧನರಾದರು. ಮೃತರಿಗೆ ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಳಗವಿದೆ. ನೀಲವ್ವ ಕುಲಕರ್ಣಿ ಬೈಲಹೊಂಗಲ: ನಗರದ ಬಾರಿಗಿಡದ ಲೇಔಟ್ ನಿವಾಸಿ ಹಾಗೂ ಗಣ್ಯ ಮನೆತನದ ಹಿರಿಯರಾದ ನೀಲವ್ವ ರುದ್ರಯ್ಯ ಕುಲಕರ್ಣಿ (75) ನಿಧನರಾದರು. ಮೃತರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವಿದೆ.