‘ಗೌರವಕ್ಕಾಗಿ ಬೇಕಾಗಿತ್ತು ಸಚಿವ ಸ್ಥಾನ’

Contributed bybhrahmanand.arali@timesgroup.com|Vijaya Karnataka
it was necessary to have the ministerial position for honor dr ajay dharmasingh
ನೂತನ ಸಚಿವ ಡಾ.ಅಜಯ್ ಧರ್ಮಸಿಂಗರಿಗೆ ಜಿಲ್ಲಾಕಾಂಗ್ರೆಸ್ ನಿಂದ ಅದ್ಧೂರಿ ಸನ್ಮಾನ

ಗೌರವಕ್ಕಾಗಿ ಸಚಿವ ಸ್ಥಾನ ಬೇಕಿತ್ತು
ವಿಕ ಸುದ್ದಿಲೋಕ ಕಲಬುರಗಿ

ಸಚಿವನಾಗುವುದಕ್ಕೂ ಮುನ್ನ ಕಾಂಗ್ರೆಸ್ ನ ನಾಯಕರಾದ ಸುರ್ಜೇವಾಲ ಮತ್ತು ವೇಣುಗೋಪಾಲ ಅವರು ‘ಕೆಕೆಆರ್ ಡಿಬಿ ಅಧ್ಯಕ್ಷರಾಗಿ ನಿಮ್ಮ ಬಳಿ ಇರುವಷ್ಟು ಅನುದಾನ ರಾಜ್ಯದ 10-12 ಸಚಿವರ ಬಳಿ ಇಲ್ಲ. ಆದರೂ ಸಚಿವ ಸ್ಥಾನ ಏಕೆ’ ಎಂದು ಕೇಳಿದ್ದರು. ಆ ವೇಳೆ ‘ನಾನು ಮೂರು ಬಾರಿ ಶಾಸಕನಾಗಿದ್ದೇನೆ, ಮಾಜಿ ಸಿಎಂ ಮಗನಾಗಿದ್ದೇನೆ. ಗೌರವಕ್ಕಾಗಿಯಾದರೂ ಸಚಿವ ಸ್ಥಾನ ಬೇಕು,’’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ಮೆಲಕು ಹಾಕಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಡಾ. ಎಸ್ .ಎಂ. ಪಂಡಿತ್ ರಂಗಮಂದಿರದಲ್ಲಿಶನಿವಾರ ರಾತ್ರಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿಸನ್ಮಾನ ಸ್ವೀಕರಿಸಿ ಭಾವನಾತ್ಮಕವಾಗಿ ಮಾತನಾಡಿದರು.

13 ವರ್ಷಗಳಿಂದ ಶಾಸಕನಾಗಿ ಕಲಬುರಗಿಗೆ ಬರುತ್ತಿದ್ದ ನಾನು, ಇದೀಗ ಸಚಿವನಾಗಿ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದೇನೆ. ತಂದೆ ಧರ್ಮಸಿಂಗ್ , ತಾಯಿ ಪ್ರಭಾವತಿ ಅವರ ಪ್ರಾರ್ಥನೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಧಮ್ಮ ಅವರ ಆಶೀರ್ವಾದ, ಜೇವರ್ಗಿ ಮತದಾರರ ಆಶೀರ್ವಾದವೂ ನನ್ನ ಮೇಲಿದೆ. ನನ್ನ ಪರವಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಶರಣು ಮೋದಿ, ನೀಲಕಂಠರಾವ್ ಮೂಲಗೆ, ಲಾಲ್ ಅಹ್ಮದ್ ಸೇಠ್ , ವಾಣಿಶ್ರೀ ಸಗರಕರ್ ಮಾತನಾಡಿದರು. ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್ , ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ್ , ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ…, ಮಹಾಂತಪ್ಪ ಸಂಗಾವಿ, ಸೋಮಶೇಖರ್ ಗೋನಾಯಕ್ , ಸಂತೋಷ್ ಪಾಟೀಲ್ ದಣ್ಣೂರ್ ಸೇರಿ ಹಲವರು ಉಪಸ್ಥಿತರಿದ್ದರು.

***

ಕೋಟ್ ...

ಬರಗಾಲದ ಸಂದರ್ಭದಲ್ಲಿಸಣ್ಣ ನೀರಾವರಿ ಸಚಿವನಾಗಿ ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ರೈತರು ಸಂಕಷ್ಟದಲ್ಲಿದ್ದರೆ ಅಂತರ್ಜಲ ಅಭಿವೃದ್ಧಿ ಸೇರಿ ಇಲಾಖೆಯಿಂದ ಆಗಬೇಕಾದ ಎಲ್ಲಕೆಲಸಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ 21 ತಿಂಗಳಲ್ಲಿರೈತರ ಹಿತಕ್ಕಾಗಿ ಪರಿಣಾಮಕಾರಿ ಕೆಲಸ ಮಾಡಲು ಶ್ರಮಿಸುತ್ತೇನೆ.

- ಡಾ.ಅಜಯ್ ಸಿಂಗ್ , ಸಚಿವ

*

ಕೋಟ್ ...

ದಿ. ಧರ್ಮಸಿಂಗ್ ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರಂತೆ ಅಜಯ್ ಸಿಂಗ್ ಕೂಡ ಉತ್ತಮ ಕೆಲಸ ಮಾಡಲಿದ್ದಾರೆ. ಜನರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಸ್ಪಂದಿಸುವ ಅಪರೂಪದ ನಾಯಕರು. ಜಿಲ್ಲೆಯಲ್ಲಿಮೂವರು ಸಚಿವರಿದ್ದು, ಮೂರು ಶಕ್ತಿಗಳು ಒಂದಾಗಿ ಕೆಲಸ ಮಾಡಿದರೆ ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವೇಗ ಪಡೆಯಲಿದೆ.

- ಜಗದೇವ್ ಗುತ್ತೇದಾರ, ಎಂಎಲ್ಸಿ, ಡಿಸಿಸಿ ಅಧ್ಯಕ್ಷ

*

ಕೋಟ್ ...

ತಂದೆಯಂತೆ ಮಗನೂ ಕೂಡ ಅಜಾತಶತ್ರುವಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿ. ಧರ್ಮಸಿಂಗ್ ಹಾಗೂ ಖರ್ಗೆ ಅವರ ಸ್ನೇಹ ಅಪರೂಪದ್ದು. ಅವರ ಒಡನಾಟದಂತೆ ಅಜಯ್ ಸಿಂಗ್ ಹಾಗೂ ಪ್ರಿಯಾಂಕ್ ಖರ್ಗೆ ಕೂಡ ಬೆಳೆಯಬೇಕೆಂಬ ಆಸೆ ಈಡೇರಿದೆ. ಭೀಮಾ ನದಿ ತಟದ ಐದು ಕ್ಷೇತ್ರಗಳಲ್ಲಿನೀರಾವರಿ ಅಭಿವೃದ್ಧಿಗೆ ಆದ್ಯತೆ ನೀಡಿ ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು.

- ಎಂ.ವೈ. ಪಾಟೀಲ…, ಶಾಸಕ

*

ಕೋಟ್ ...

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು. ಬಚಾವತ್ ಆಯೋಗದ ಪ್ರಕಾರ ಭೀಮಾ ನದಿಯಿಂದ ಜಿಲ್ಲೆಗೆ ಬರಬೇಕಿರುವ 15 ಟಿಎಂಸಿ ನೀರಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಅಲ್ಲದೆ ನಮ್ಮ ಪಾಲಿನ ನೀರಿಗಾಗಿ ಕಾನೂನು ಹೋರಾಟ ಕೂಡ ರೂಪಿಸಬೇಕು.

- ಅಲ್ಲಮಪ್ರಭು ಪಾಟೀಲ…, ಶಾಸಕ