ಅಪ್ಪಾಜಿ ಪ್ರಥಮ ಪುಣ್ಯಸ್ಮರಣೆ ಇಂದಿನಿಂದ* ನಾನಾ ಕಾರ್ಯಕ್ರಮ ಆಯೋಜನೆ
ವಿಕ ಸುದ್ದಿಲೋಕ ಸುರಪುರ
ಶತಮಾನೋತ್ಸವ ಆಚರಿಸಿಕೊಂಡಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ಇಲ್ಲಿನ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿಪೂಜ್ಯ ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯಸ್ಮರಣೋತ್ಸವದ ನಿಮಿತ್ತ ಇಂದಿನಿಂದ ನಾನಾ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸೇವಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್ .ಅಪ್ಪಾಜಿ ಹಾಗೂ ಡಾ.ಶಾಂತಲಾ ಎಸ್ .ನಿಷ್ಠಿ ಅವರ ಮಾರ್ಗದರ್ಶನದಲ್ಲಿನಡೆಯುತ್ತಿರುವ ಕಾರ್ಯಕ್ರಮದಲ್ಲಿಅಪ್ಪಾಜಿಯವರ ಶಿಕ್ಷಣ, ಸಮಾಜಸೇವೆ, ದಾಸೋಹ, ಮಾನವೀಯತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿಬೆಳೆಸುವ ಉದ್ದೇಶ ಹೊಂದಲಾಗಿದೆ. ಆ.25ರಂದು ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿಪ್ರಬಂಧ ಬರವಣಿಗೆ, ರಂಗೋಲಿ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ಆ.27ರಂದು ನಾನಾ ಆಸ್ಪತ್ರೆಗಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಗುವುದು. ಆ.29ರಂದು ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜು ಆವರಣದಲ್ಲಿವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.1ರಂದು ಸೇವೆಯೇ ಶ್ರೇಷ್ಠ ಎಂಬ ಸಂದೇಶದೊಂದಿಗೆ ಅಗತ್ಯವಿರುವವರಿಗೆ ದಾಸೋಹ ಸೇವೆ ನಡೆಸಲಾಗುವುದು. ಇದೇ ದಿನ ದಾಸೋಹದ ಮಹತ್ವ ಹಾಗೂ ಸೇವಾ ಮನೋಭಾವ ಸಾರುವ ದಾಸೋಹ ಸೂತ್ರಗಳ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.
ಪೂಜ್ಯ ಅಪ್ಪಾಜಿಯವರ ಶಿಕ್ಷಣ, ದಾಸೋಹ ಹಾಗೂ ಸಮಾಜಸೇವೆಯ ಆದರ್ಶ ಸ್ಮರಿಸುವುದರ ಜತೆಗೆ ಅವುಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೂಜ್ಯಅಪ್ಪಾಜಿಯವರ ಪುಣ್ಯಸ್ಮರಣೋತ್ಸವದ ನಿಮಿತ್ತ ನಡೆಯುತ್ತಿರುವ ಈ ಎಲ್ಲಕಾರ್ಯಕ್ರಮ ಅವರ ಆದರ್ಶಗಳು, ದಾಸೋಹ ಪರಂಪರೆ, ಕರುಣೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿವೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿಸೇವಾ ಮನೋಭಾವ, ಮಾನವೀಯತೆ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸುವಲ್ಲಿಕಾರ್ಯಕ್ರಮ ಸಹಕಾರಿಯಾಗಲಿವೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.