ಸುಸ್ಥಿರ ಭಾರತ ನಿರ್ಮಾಣ ಸಂಕಲ್ಪಶಿಕ್ಷಣವು ಕೇವಲ ಜ್ಞಾನಾರ್ಜನೆಗಷ್ಟೇ ಅಲ್ಲ. ಅದು ಉತ್ತಮ ವ್ಯಕ್ತಿತ್ವ ಮತ್ತು ಸಮಾಜವನ್ನು ರೂಪಿಸುವ ಪ್ರಬಲ ಶಕ್ತಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ.ಬಿ.ಆರ್ . ಅಂಬೇಡ್ಕರ್ ಅವರಂತಹ ಮಹನೀಯರು ಶಿಕ್ಷಣವೇ ಪ್ರಗತಿಯ ಮೂಲ ಸಂಜೀವಿನಿ ಎಂದು ಪ್ರತಿಪಾದಿಸಿದ್ದರು.
ಆಧುನಿಕ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣ ಪಡೆಯುವುದು ದೇಶದ ಪ್ರತಿ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದೆ. ಈ ಸೌಲಭ್ಯವು ನಗರ-ಗ್ರಾಮೀಣ ಎನ್ನದೆ ಎಲ್ಲರಿಗೂ ಸಮಾನವಾಗಿ ಸಿಗಬೇಕು. ದೊರೆತ ಶಿಕ್ಷಣವನ್ನು ಕೇವಲ ಅಂಕಗಳಿಕೆಗೆ ಬಳಸದೆ, ಜವಾಬ್ದಾರಿಯುತ ಪ್ರಜೆಯಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ಜೆನ್ ಜಿ ತಲೆಮಾರಿನ ಮುಖ್ಯ ಕರ್ತವ್ಯ. ಶಿಕ್ಷಣದ ಬೆಳಕಿನಿಂದ ಅಜ್ಞಾನವನ್ನು ತೊಲಗಿಸಿ, ಸಮಾನತೆಯ ಸುಸ್ಥಿರ ಭಾರತ ನಿರ್ಮಿಸುವ ಸಂಕಲ್ಪ ಮಾಡಬೇಕು.
ಸಿ.ಎಲ್ .ಸಿಂಚನ, 9ನೇ ತರಗತಿ, ಡಾ.ಬಿ. ಆರ್ .ಅಂಬೇಡ್ಕರ್ ವಸತಿ ಶಾಲೆ, ಆಲ್ದೂರು