48 ಸಾವಿರ ಮತದಾರರಿಗೆ ನೋಟಿಸ್

Contributed byaatish.kannale@timesgroup.com|Vijaya Karnataka
notice to 48 thousand voters special verification of the asddo category
ಎಸ್ ಐಆರ್ ನಂತರದ ದತ್ತಾಂಶ

* ಪರಿಷ್ಕರಣೆ ಪೂರ್ಣ: 87.59% **(ಗ್ರಾಫ್ ಮಾಡಿ) **
* ಒಟ್ಟು ಮತದಾರರು: 13,30,905

* ಪುರುಷರು: 6,56,527

* ಮಹಿಳೆಯರು: 6,74,351

* ಲಿಂಗತ್ವ ಅಲ್ಪಸಂಖ್ಯಾತರು: 027

* ಹೆಸರುಗಳು ಪಟ್ಟಿಯಿಂದ ಹೊರಗೆ: 48,668

* ಮ್ಯಾಪಿಂಗ್ ಆಗದ ಮತದಾರರು: 15,164

* ದೋಷಪೂರಿತ ಮಾಹಿತಿ ಹೊಂದಿರುವ ಮತದಾರರು: 33,504

* ಎಎಸ್ ಡಿಡಿಒ ವರ್ಗ: 1,88,554

(ಎಎಸ್ ಡಿಡಿಒ ವರ್ಗದ ವಿವರ)

* ಮೃತರು: 46,683

* ಗೈರು: 23,165

* ಸ್ಥಳಾಂತರಗೊಂಡವರು: 99,225

===

(ಕಿಕ್ಕರ್ ) ಎಸ್ ಐಆರ್ ಕರಡು ಪಟ್ಟಿ ಪ್ರಕಟ | ಮನೆಗಳಿಗೆ ಬಿಎಲ್ ಒಗಳು ಖುದ್ದು ಭೇಟಿ | 1.88 ಲಕ್ಷ ಮಂದಿ ಮತದಾರರ ಪಟ್ಟಿಯಿಂದ ಹೊರಗೆ

48 ಸಾವಿರ ಮತದಾರರಿಗೆ ನೋಟಿಸ್

ವಿಕ ಸುದ್ದಿಲೋಕ ಶಿವಮೊಗ್ಗ

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ ಐಆರ್ ) ಪ್ರಕ್ರಿಯೆ ನಂತರ ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ48,668 ಮತದಾರರಿಗೆ ನೋಟಿಸ್ ನೀಡಲಾಗಿದೆ. ಈ ಅರ್ಜಿಗಳ ಪರಿಶೀಲನೆಗೆ 176 ಎಇಆರ್ ಒಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಕೆಲವರು ಎನ್ಯೂಮರೇಷನ್ ಫಾಮ್ ರ್ (ಇಎಫ್ ) ಗಳಲ್ಲಿಬರಿ ಸಹಿ ಮಾಡಿ ನೀಡಿದವರೂ ಇದ್ದಾರೆ. ಮ್ಯಾಪಿಂಗ್ ಆಗದ, ದೋಷಪೂರಿತ ಮಾಹಿತಿ ನೀಡಿರುವ ಮತದಾರರಿಗೆ ನೋಟಿಸ್ ನೀಡಲಾಗಿದೆ. ಅವರು ಏಳು ದಿನಗಳೊಳಗೆ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ ಎಂದರು.

ಮ್ಯಾಪಿಂಗ್ ಆಗದಿರುವ 15,164 ಮತದಾರರು, ತಂದೆ-ಮಗನ ವಯಸ್ಸಿನ ಗಣನೀಯ ಅಂತರ ಸೇರಿದಂತೆ ದೋಷಪೂರಿತ ಮಾಹಿತಿ ಇರುವ 33,504 ಮತದಾರರು ಸೇರಿದಂತೆ ಒಟ್ಟು 48,668 ಮತದಾರರಿಗೆ ನೋಟಿಸ್ ನೀಡಲಾಗಿದೆ. ಈ ಎಲ್ಲರೂ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗುತ್ತದೆ. ಮ್ಯಾಪಿಂಗ್ ಮಾಡಲು ಅವರಿಗೆ ಕಾಲಾವಕಾಶ ನಿಗದಿಪಡಿಸಿಕೊಡಲಾಗುವುದು. ಪಟ್ಟಿಯಲ್ಲಿಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರ ವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ ಎಂದು ಹೇಳಿದರು.

ಜೂನ್ 16, 2026ರ ಮತಪಟ್ಟಿಯಲ್ಲಿದ್ದಂತೆ ಜಿಲ್ಲೆಯಲ್ಲಿ15,19,459 ಮತದಾರರಿದ್ದು, ಅವರಲ್ಲಿ13,30,905 ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಂದರೆ ಶೇ.87.59ರಷ್ಟು ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದೆ. ಎಸ್ ಐಆರ್ ಪ್ರಕ್ರಿಯೆ ವೇಳೆ 1,88,554 ಮತದಾರರನ್ನು ‘ಎಎಸ್ ಡಿಡಿಒ’ ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿಬರುವುದಿಲ್ಲ. ಈ ಪೈಕಿ 46,683 ಮತದಾರರು ಮೃತಪಟ್ಟಿದ್ದು, 23,165 ಗೈರು, 99,225 ಸ್ಥಳಾಂತರಗೊಂಡಿರುವುದಾಗಿ ಗುರುತಿಸಲಾಗಿದೆ ಎಂದರು.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಕುರಿತು ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರಿಗೆ ಸಕಾಲಿಕ ಮಾಹಿತಿ ಒದಗಿಸಲಾಗಿದೆ. ಇಲ್ಲಿಯವರೆಗಿನ ಪರಿಷ್ಕರಣೆ ಕಾರ್ಯದ ಕುರಿತು ಸಾರ್ವಜನಿಕರಿಂದಾಗಲೀ ಅಥವಾ ರಾಜಕೀಯ ಪಕ್ಷಗಳ ಮುಖಂಡರಿಂದಾಗಲೀ ಯಾವುದೇ ಆಕ್ಷೇಪಣೆಗಳು ಬಂದಿಲ್ಲಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ , ಚುನಾವಣಾ ತಹಸೀಲ್ದಾರ್ ಮಂಜುಳಾ ಹೆಗಡಾಳ, ಉಪ ವಿಭಾಗಾಧಿಕಾರಿ ಡಾ. ಎಚ್ .ಪಿ.ಎಸ್ . ಮೈತ್ರಿ ಸೇರಿದಂತೆ ಜಿಲ್ಲಾಚುನಾವಣಾ ಶಾಖೆಯ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

===

ಜಿಲ್ಲೆಯಲ್ಲಿ93 ಮತಗಟ್ಟೆ ಹೆಚ್ಚಳ

2026ರ ಜೂನ್ 16ರ ವರೆಗೆ ಜಿಲ್ಲೆಯಲ್ಲಿ1793 ಮತಗಟ್ಟೆಗಳಿದ್ದವು. ಪುರುಷರು 745941, ಮಹಿಳೆಯರು 773487, ಲಿಂಗತ್ವ ಅಲ್ಪಸಂಖ್ಯಾತರು 31 ಸೇರಿ ಒಟ್ಟು 15,19,459 ಮತದಾರರಿದ್ದರು. ಆದರೆ, ಆಗಸ್ಟ್ 24ರ ನಂತರ ಮತಗಟ್ಟೆಗಳ ಸಂಖ್ಯೆಯನ್ನು 1886ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ, ಪುರುಷರು 656527, ಮಹಿಳೆಯರು 674351, ಲಿಂಗತ್ವ ಅಲ್ಪಸಂಖ್ಯಾತರು 27 ಸೇರಿ ಒಟ್ಟು 13,30,905 ಮತದಾರರು ಪಟ್ಟಿಯಲ್ಲಿಉಳಿದುಕೊಂಡಿದ್ದಾರೆ.

===

ತಾಲೂಕುವಾರು ನೋಟಿಸ್ ಪಟ್ಟಿ

ತಾಲೂಕು ನೋಟಿಸ್

ಶಿವಮೊಗ್ಗ (ಗ್ರಾ) 14,072

ಭದ್ರಾವತಿ 4,931

ಶಿವಮೊಗ್ಗ 1,705

ತೀರ್ಥಹಳ್ಳಿ 7,421

ಶಿಕಾರಿಪುರ 9,975

ಸೊರಬ 4,081

ಸಾಗರ 6,483

ಒಟ್ಟು 48,668

===

ನೋಟಿಸ್ ಹೇಗೆ ಬರುತ್ತೆ?

ಎಸ್ ಐಆರ್ ಎನ್ಯೂಮರೇಷನ್ ಫಾಮ್ ರ್ ಗಳಲ್ಲಿಸರಿಯಾದ ಮಾಹಿತಿ ನೀಡದವರಿಗೆ ಬಿಎಲ್ ಒಗಳು ಮನೆಗಳಿಗೆ ಭೇಟಿ ನೀಡಿ ನೋಟಿಸ್ ನೀಡುವರು. ಈ ವೇಳೆ, ಮತದಾರ ಮನೆಯಲ್ಲಿಇಲ್ಲದಿದ್ದರೆ ಅವರ ಪರವಾಗಿ ಬೇರೆಯವರೂ ನೋಟಿಸ್ ಪ್ರತಿ ಸ್ವೀಕರಿಸಬಹುದು. ಆದರೆ, ಈ ವೇಳೆ ಬಿಎಲ್ ಒ ಮತ್ತಿತರ ಅಧಿಕಾರಿಗಳು ಫೋಟೊ ಕ್ಲಿಕ್ಕಿಸಿಕೊಂಡು ಅಪ್ ಲೋಡ್ ಮಾಡುತ್ತಾರೆ. ಆ ನೋಟಿಸ್ ಪ್ರತಿಯಲ್ಲಿಕಾರಣ, ಯಾವ ದಾಖಲೆ ಸಲ್ಲಿಸಬೇಕು, ಯಾವ ಸ್ಥಳದಲ್ಲಿಮತ್ತು ಯಾವ ದಿನಾಂಕದಂದು ಹಾಗೂ ಯಾವ ಅಧಿಕಾರಿಗೆ ಭೇಟಿ ಆಗಬೇಕೆಂಬ ಮಾಹಿತಿ ಇರುತ್ತದೆ. ಆ ದಿನಾಂಕದಂದು ವ್ಯಕ್ತಿ ಕಾರ್ಯನಿಮಿತ್ತ ಲಭ್ಯವಿರದಿದ್ದರೆ, ಬೇರೆಯ ದಿನಾಂಕ ಆಯ್ಕೆ ಮಾಡಬಹುದು. ಆದರೆ ಈ ರೀತಿ ಎರಡು ಅವಕಾಶಗಳು ಮಾತ್ರ ಇರುತ್ತವೆ. ಅಷ್ಟರೊಳಗೆ ಮಾಹಿತಿ ನೀಡದಿದ್ದರೆ ಮತಪಟ್ಟಿಯಿಂದ ಹೆಸರು ತೆಗೆದುಹಾಕಲಾಗುವುದು. ಒಂದುವೇಳೆ, ಕೇಳಲಾದ ದಾಖಲೆ ಮತದಾರರ ಬಳಿ ಇದ್ದರೆ ಬಿಎಲ್ ಒ ಮನೆಗೆ ಭೇಟಿ ನೀಡಿದಾಗಲೇ ನೀಡಿದರೆ ಸಾಕು. ಅವರು ಅದನ್ನು ಆನ್ ಲೈನ್ ನಲ್ಲಿಅಪ್ ಲೋಡ್ ಮಾಡುತ್ತಾರೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ ಮಾಹಿತಿ ನೀಡಿದರು.

ಫೋಟೊ: 24ಎಸ್ ಎಂಜಿ17

==

(ಕೋಟ್ )

ಮತದಾರರು ಸ್ಥಳೀಯ ಬಿಎಲ್ ಒ ಕಚೇರಿಗಳಲ್ಲಿಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಬಹುದು. ಪಟ್ಟಿಯಲ್ಲಿಹೆಸರು ಇಲ್ಲದವರು ಹೊಸ ಸೇರ್ಪಡೆಗೆ ನಿಗದಿತ ದಾಖಲೆಗಳೊಂದಿಗೆ ಫಾಮ್ ರ್ 6 ಸಲ್ಲಿಸಬೇಕು. ಇದರ ಜತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾಮ್ ರ್ 6 ಸಲ್ಲಿಸಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-8 ನೀಡಬೇಕಾಗುತ್ತದೆ. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಪೌರತ್ವ ದೃಢಪಟ್ಟರಷ್ಟೇ, ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುವುದು.

- ಪ್ರಭುಲಿಂಗ ಕವಳಿಕಟ್ಟಿ, ಡಿಸಿ, ಶಿವಮೊಗ್ಗ

==

ಫೋಟೊ: 24ಎಸ್ ಎಂಜಿ16