ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

Contributed bykugweprakash@gmail.com|Vijaya Karnataka
modern agriculture tiller platform enhancing progress in farming
ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ವಿಕ ಸುದ್ದಿಲೋಕ ಸಾಗರ
ರೈತರು ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿಕೃಷಿ ಇಲಾಖೆ ಮೂಲಕ ಅನೇಕ ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ನೆಹರೂ ಮೈದಾನದಲ್ಲಿಕೃಷಿ ಇಲಾಖೆ ವತಿಯಿಂದ ರೈತರಿಗೆ ಟಿಲ್ಲರ್ ವಿತರಿಸಿ ಮಾತನಾಡಿದರು.

ತಾಲೂಕಿನಲ್ಲಿಒಟ್ಟು 12 ರೈತ ಫಲಾನುಭವಿಗಳಿಗೆ 2.25 ಲಕ್ಷ ರೂ. ವೆಚ್ಚದ ಟಿಲ್ಲರ್ ನೀಡಲಾಗಿದ್ದು, ಇದಕ್ಕೆ 92 ಸಾವಿರ ರೂ. ಸಬ್ಸಿಡಿ ಇರುತ್ತದೆ. ರೈತರು ಸಾಂಪ್ರದಾಯಿಕ ಕೃಷಿ ಜತೆಗೆ ಆಧುನಿಕ ಕೃಷಿಯಲ್ಲೂಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಸರಕಾರ ರೈತರ ಪರವಾಗಿದ್ದು ಕೃಷಿ ಇಲಾಖೆ ಮೂಲಕ ಕೃಷಿ ಉತ್ತೇಜನಕ್ಕೆ ಸಂಬಂಧಿಸಿದಂತೆ ವಿವಿಧ ಸೌಲಭ್ಯಗಳು ನೀಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ರೈತರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಅನೇಕ ಯಂತ್ರೋಪಕರಣಗಳು ಸಬ್ಸಿಡಿ ದರದಲ್ಲಿನೀಡಲಾಗುತ್ತಿದೆ. ಇದರ ಬಗ್ಗೆ ರೈತರಿಗೆ ಮಾಹಿತಿ ಇಲ್ಲದೆ ಹೋದರೆ ಇದನ್ನು ಅವರು ಪಡೆಯುವುದಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಈ ಕುರಿತು ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಈ ಸಂದರ್ಭ ಉಪ ಕೃಷಿ ನಿರ್ದೇಶಕ ಲೋಕೇಶ್ , ಸಹಾಯಕ ಕೃಷಿ ನಿರ್ದೇಶಕ ಬಿ.ಎಲ್ .ಶಿವಪ್ರಕಾಶ್ , ತಾಂತ್ರಿಕ ಅಧಿಕಾರಿ ನಂದೀಶ್ , ತಾಂತ್ರಿಕ ವ್ಯವಸ್ಥಾಪಕ ಬಿ.ಆರ್ .ವಿನಾಯಕ ರಾವ್ , ಜಿಲ್ಲಾಪಂಚಾಯಿತಿ ಮಾಜಿ ಸದಸ್ಯೆ ಅನಿತಾ ಕುಮಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರಸಭೆ ಮಾಜಿ ಸದಸ್ಯ ಗಣಪತಿ ಮಂಡಗಳಲೆ ಮತ್ತಿತರರು ಇದ್ದರು.

ಚಿತ್ರಶೀರ್ಷಿಕೆ

ಸಾಗರದ ನೆಹರೂ ಮೈದಾನದಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿಶಾಸಕ ಗೋಪಾಲಕೃಷ್ಣ ಬೇಳೂರು ರೈತರಿಗೆ ಟಿಲ್ಲರ್ ವಿತರಿಸಿದರು.