ಚಿನ್ನದ ದರ 5 ತಿಂಗಳಲ್ಲೇ ಗರಿಷ್ಠ

Contributed byHarsha Vardhana|Vijaya Karnataka
gold price reaches highest in five months touches rs 164 lakh on monday
ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯ ಪ್ರಬಲ ಏರಿಳಿತ ಹಾಗೂ ಯುಎಸ್ - ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ, ಸೋಮವಾರ ಚಿನ್ನದ ಬೆಲೆಯು ಐದು ತಿಂಗಳಲ್ಲೇ ಗರಿಷ್ಠ ಮಟ್ಟವಾದ ಪ್ರತಿ 10 ಗ್ರಾಂಗೆ 1.64 ಲಕ್ಷ ರೂ.ಗಳಿಗೆ ತಲುಪಿದೆ. ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆಯು ಶುಕ್ರವಾರದ ಮುಕ್ತಾಯದ 1,63,500 ರೂ.ಗಳಿಂದ 900 ರೂ. ಏರಿಕೆಯಾಗಿ, ತೆರಿಗೆಗಳು ಸೇರಿ ಪ್ರತಿ 10 ಗ್ರಾಂಗೆ 1,64,400 ರೂ. ತಲುಪಿದೆ. ಈ ಹಿಂದೆ ಮಾರ್ಚ್ 9ರಂದು ಇದೇ ಮಟ್ಟದ ಬೆಲೆ ದಾಖಲಾಗಿತ್ತು.

ಬೆಳ್ಳಿ ದರ ಸತತ ಮೂರನೇ ಅಧಿವೇಶನದಲ್ಲಿಯೂ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ 3,500 ರೂ. ಹೆಚ್ಚಳವಾಗಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ 2,53,500 ರೂ.ಗಳಿಗೆ (ತೆರಿಗೆಗಳು ಸೇರಿ) ತಲುಪಿದೆ. ಯುಎಸ್ ಡಾಲರ್ ಮೌಲ್ಯ ಕುಸಿದಿರುವುದು ಮತ್ತು ಸುರಕ್ಷಿತ ಹೂಡಿಕೆಯ ಬೇಡಿಕೆ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಸ್ಪಾಟ್ ಗೋಲ್ಡ… ಪ್ರತಿ ಔನ್ಸ್ ಗೆ 4,646.54 ಡಾಲರ್ ಗಳಿಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿಬೆಲೆಗಳ ಚಲನೆಯು ಹೆಚ್ಚಾಗಿ ಹಣದುಬ್ಬರ ಹಾಗೂ ಜಾಗತಿಕ ರಾಜಕೀಯ ಬೆಳವಣಿಗೆಗಳನ್ನು ಅವಲಂಬಿಸಿರುತ್ತದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.