ಸತ್ಕಾರ್ಯಗಳಿಂದ ಬದುಕು ಸಾರ್ಥಕ

Contributed byagsbhat.vk@gmail.com|Vijaya Karnataka
achieving a good life 58th birth anniversary of ambajogai shambuling shivacharya
ಶ್ರೀರಂಭಾಪುರಿ ಪೀಠದಲ್ಲಿಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯರ ಜನ್ಮ ದಿನಾಚರಣೆ

ಸತ್ಕಾರ್ಯಗಳಿಂದ ಬದುಕು ಸಾರ್ಥಕ
ವಿಕ ಸುದ್ದಿಲೋಕ ಬಾಳೆಹೊನ್ನೂರು

ಯಶಸ್ಸಿನ ಮನುಷ್ಯನಾಗುವ ಬದಲಿಗೆ ಮೌಲ್ಯಯುತ ವ್ಯಕ್ತಿಯಾಗಿ ಬಾಳುವುದು ಶ್ರೇಷ್ಠ. ಸತ್ಕಾರ್ಯಗಳಿಂದ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಡಾ. ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀರಂಭಾಪುರಿ ಪೀಠದ ಸಭಾಂಗಣದಲ್ಲಿಭಾನುವಾರ ನಡೆದ ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 58ನೇ ಜನ್ಮ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಗವಂತ ನಮಗೆ ನೀಡಿರುವ ಜೀವನವನ್ನು ಒಳ್ಳೆ ಕೆಲಸಗಳನ್ನು ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು. ಒಳ್ಳೆಯ ನಡತೆಗೆ ಸಾವಿರಾರು ಹೃದಯಗಳನ್ನು ಗೆಲ್ಲುವ ಶಕ್ತಿ ಇದೆ. ಸಂಪತ್ತು, ಅಂತಸ್ತು ತಂದುಕೊಟ್ಟರೆ, ವಿದ್ಯೆ ಅರಿವು ನೀಡುತ್ತದೆ ಎಂದು ಹೇಳಿದರು.

ಸಂಸ್ಕಾರ, ಸದ್ವಿಚಾರಗಳಿಂದ ಜಗತ್ತÜನ್ನು ಗೆಲ್ಲಬಹುದು. ಅಹಂಕಾರವಿದ್ದರೆ ಗಳಿಸಿದ್ದೆಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಕಾಯಕದಿಂದ ಬಾಳು ಉಜ್ವಲಗೊಳ್ಳುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯರು ಧರ್ಮ ಮತ್ತು ಸಮಾಜಮುಖಿಯಾಗಿ ಶ್ರಮಿಸಿದವರು. ಪರಿಶುದ್ಧ, ಚಾರಿತ್ರತ್ರ್ಯ, ಸಂಸ್ಕೃತಿ ಪಾಲನೆಯಿಂದ ಅವರ ಬದುಕು ಉಜ್ವಲಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯರು ಮಾತನಾಡಿ, ಹರಸುವ ಹಿರಿಯರು, ಹಾರೈಸುವ ಆತ್ಮೀಯರು, ಪ್ರೀತಿಯ ಗೆಳೆಯರಿದ್ದರೆ ಅರಸನಾಗುವ ಅಗತ್ಯವಿಲ್ಲ. ವ್ಯಕ್ತಿತ್ವ ಯಾವಾಗಲೂ ಗಡಿಯಾರದೊಳಗಿನ ಸಂಖ್ಯೆ ಆಗಬೇಕೇ ಹೊರತು ಕಾಲಕ್ಕೆ ತಕ್ಕಂತೆ ಬದಲಾಗುವ ಮುಳ್ಳಾಗಬಾರದು. ಗುರು ಕಾರುಣ್ಯದಿಂದ ಬಾಳು ಉಜ್ವಲಗೊಳ್ಳುತ್ತದೆ ಎಂದರು.

ಅಷ್ಟಿ ಮಠದ ವಿಶ್ವ ಚೈತನ್ಯ ಶಿವಾಚಾರ್ಯ, ಕರ್ಜಿಗಿ ಮುರುಗೇಂದ್ರ ಸ್ವಾಮಿ ಮಠದ ಸೋಮನಾಥ ಶಿವಾಚಾರ್ಯರು ಉಪಸ್ಥಿತರಿದ್ದರು. ಪಾತ್ರಿ ಮಠದ ಕಾಶಿನಾಥ ಶಿವಾಚಾರ್ಯರು ಸ್ವಾಗತಿಸಿ, ಹುಡುಗಿ ಸಂಸ್ಥಾನ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ನಿರೂಪಿಸಿದರು. ಮಹಾರಾಷ್ಟ್ರದಿಂದ ಆಗಮಿಸಿದ ಭಕ್ತ ಮಂಡಳಿ ಶಂಭುಲಿಂಗ ಶಿವಾಚಾರ್ಯರನ್ನು ಗೌರವಿಸಲಾಯಿತು.

24ಬಿಎಚ್ ಆರ್ 1

ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಸಭಾಂಗಣದಲ್ಲಿನಡೆದ ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯರ 58 ನೇ ಜನದಿನಾಚರಣೆ ಸಮಾರಂಭದಲ್ಲಿಅವರನ್ನು ಡಾ.ವೀರ ಸೋಮೇಶ್ವರ ಜಗದ್ಗುರುಗಳು ಆಶೀರ್ವದಿಸಿದರು.