ಮಹಾಕಾಳಿ ದೇವಸ್ಥಾನ: ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ

Contributed byjohn.dsouza@timesofindia.com|Vijaya Karnataka
transfer of power to new officials of mahakali temple
ಕುಂದಾಪುರ : ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ 2027-2028ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜರುಗಿತು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಬಾಬು ಹೆಗ್ಡೆ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಪ್ರಕಾಶ್ ಆರ್ .ಖಾರ್ವಿ, ಕೋಶಾಧಿಕಾರಿ ರಾಜು ನಾಯ್ ್ಕ ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ, ದೇವಸ್ಥಾನದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮತ್ತ ಷÜು್ಟ ಪರಿಣಾಮಕಾರಿಯಾಗಿ ಮುನ್ನಡೆಸುವಂತೆ ಶುಭಹಾರೈಸಿದರು.
ಅಜಂತಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಮೊಕ್ತೇಸರರಾದ ಶಂಕರ್ ನಾಯ್ ್ಕ, ಪಾಂಡು ಸಾರಂಗ, ಆನಂದ ನಾಯ್ ್ಕ ಮತ್ತಿತರರು ಉಪಸ್ಥಿತರಿದ್ದರು. ದೇವಸ್ಥಾನದ ಕಾರ್ಯದರ್ಶಿ ನಾಮದೇವ ಖಾರ್ವಿ ಸ್ವಾಗತಿಸಿದರು. ಕೇಶವ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೋಕ್ ಖಾರ್ವಿ ಮದ್ದು ಗುಡ್ಡೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಸುನಿಲ್ ಖಾರ್ವಿ ವಂದಿಸಿದರು.

ಪೋಟೊ//24ಕೆ-ಕೆಆರ್ ವಿ