ಸಿಟಿಗೆ ಮಾತ್ರ

Contributed byPrasanna.Karpur@timesgroup.com|Vijaya Karnataka
spiritual experience in the rhythm of ram naam uttaradimath
ರಾಮನಾಮದ ಲಯದಲ್ಲಿಹೆಜ್ಜೆಯಾದ ಭಕ್ತಿ(ಹೆ)

ಧಾರವಾಡ ಉತ್ತರಾದಿಮಠದ ಆವರಣದಲ್ಲಿಭಕ್ತಿಯ ಹೊಸ ಅಲೆ
ವಿಕ ಸುದ್ದಿಲೋಕ ಧಾರವಾಡ

ಅಲ್ಲಿಹೆಜ್ಜೆಗಳು ಕೇವಲ ಹೆಜ್ಜೆಗಳಾಗಿರಲಿಲ್ಲ. ಅವು ರಾಮನಾಮದ ಲಯಕ್ಕೆ ಭಕ್ತಿ ಬರೆದ ಪದ್ಯಗಳಾಗಿದ್ದವು. ಶ್ರೀರಾಮನ ಪವಿತ್ರ ನಾಮಸ್ಮರಣೆಯ ನಾದವು ಪರಿಸರವನ್ನೆಲ್ಲಆವರಿಸಿದ್ದ ಆ ಸಮಯದಲ್ಲಿ, ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಮ್ಮನ್ನೇ ಮರೆತು ಭಕ್ತಿಯ ಪರವಶತೆಯಲ್ಲಿತಲ್ಲೀನರಾಗಿ ಹೆಜ್ಜೆ ಹಾಕಿದ ದೃಶ್ಯಕ್ಕೆ ಸೋಮವಾರ ಸಂಜೆ ನಗರದ ಉತ್ತರಾದಿಮಠದ ಚಾತುರ್ಮಾಸ್ಯ ಕಾರ್ಯಕ್ರಮ ಸಾಕ್ಷಿಯಾಯಿತು.

ತುಟಿಗಳಲ್ಲಿರಾಮನಾಮ...ಹೃದಯದಲ್ಲಿಶ್ರೀಹರಿಯ ಧ್ಯಾನ...ಮುಖದಲ್ಲಿದಿವ್ಯ ಪ್ರಸನ್ನತೆ...ಹೆಜ್ಜೆ ಹೆಜ್ಜೆಯಲ್ಲೂಭಕ್ತಿಯ ಉಲ್ಲಾಸ. ಆ ಕ್ಷಣದಲ್ಲಿಶ್ರೀಪಾದಂಗಳವರ ನಡೆಗೆ ರಾಮನಾಮವೇ ತಾಳವಾಗಿತ್ತು. ಭಕ್ತಿಯೇ ಲಯವಾಗಿತ್ತು. ಆನಂದವೇ ನೃತ್ಯವಾಗಿತ್ತು. ಹೊರಜಗತ್ತಿನ ಅರಿವನ್ನೇ ಮರೆತು, ಅಂತರಂಗದಲ್ಲಿಶ್ರೀರಾಮನ ಸಾನ್ನಿಧ್ಯವನ್ನು ಅನುಭವಿಸುತ್ತಿರುವಂತೆ ಅವರ ಭಾವಪರವಶತೆ ಕಂಗೊಳಿಸುತ್ತಿತ್ತು. ರಾಮನಾಮವೆಂಬ ಅಮೃತಧಾರೆ ಕಿವಿಗಳ ಮೂಲಕ ಹೃದಯಕ್ಕೆ ಇಳಿದಾಗ, ಮನಸ್ಸು ಮೌನವಾಗುತ್ತದೆ. ಮೌನ ಧ್ಯಾನವಾಗುತ್ತದೆ. ಧ್ಯಾನ ಭಕ್ತಿಯಾಗುತ್ತದೆ. ಭಕ್ತಿ ಪರವಶತೆಯಾಗಿ ಅರಳಿದಾಗ ದೇಹವೇ ದೇವರ ನಾಮಕ್ಕೆ ಹೆಜ್ಜೆ ಹಾಕತೊಡಗುತ್ತದೆ. ಅಂಥ ಅಪೂರ್ವ ಆಧ್ಯಾತ್ಮಿಕ ಅನುಭೂತಿಯ ಸಾಕಾರ ರೂಪದಂತಿತ್ತು ಶ್ರೀಪಾದಂಗಳವರ ಆ ನಡೆ. ಶ್ರೀಪಾದಂಗಳವರ ಭಕ್ತಿಪರವಶತೆಯನ್ನು ಕಂಡ ಭಕ್ತರ ಕಣ್ಣುಗಳಲ್ಲಿ ಧನ್ಯತಾ ಭಾವ ಇತ್ತು. ಸುತ್ತಲಿನ ವಾತಾವರಣವೇ ರಾಮಮಯವಾದಂತೆ ಭಾಸವಾಯಿತು. ರಾಮನಾಮದ ಅಲೆಗಳು ಭಕ್ತಿಯ ಹೊಸ ಕಂಪನವನ್ನು ಹುಟ್ಟಿಸಿದವು. ರಾಮನಾಮದಲ್ಲಿತಮ್ಮನ್ನೇ ಮರೆತು ಹೆಜ್ಜೆ ಹಾಕಿದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆ ಪುಣ್ಯಕ್ಷಣವು ಒಂದು ದೃಶ್ಯವಾಗದೇ ಭಗವಂತನತ್ತ ಸಾಗುವ ಪವಿತ್ರ ಯಾತ್ರೆಯಾಗುತ್ತದೆ ಎಂಬ ಆಧ್ಯಾತ್ಮಿಕ ಸಂದೇಶದ ಜೀವಂತ ಅಭಿವ್ಯಕ್ತಿಯಂತಿತ್ತು. ಹೆಜ್ಜೆ ಹೆಜ್ಜೆಗೂ ರಾಮ...ಉಸಿರು ಉಸಿರಿಗೂ ರಾಮ...ಮನದ ಮಿಡಿತದಲ್ಲೂರಾಮ...ಅಂತರಂಗದ ಅನುರಣನದಲ್ಲೂರಾಮ...ಕೊನೆಗೆ ಉಳಿದದ್ದು ಒಂದೇ ನಾದ. ಶ್ರೀರಾಮ... ಶ್ರೀರಾಮ... ಶ್ರೀರಾಮ...!

ಫೊಟೊ-ಉತ್ತರಾದಿಮಠದಲ್ಲಿನಡೆದ ಶ್ರೀ ಗಳ 31ನೇ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿಶ್ರೀ ಸತ್ಯಾತ್ಮತೀರ್ಥರು ರಾಮನಾಮದೊಂದಿಗೆ ಹೆಜ್ಜೆ ಹಾಕಿದರು.