ಪೂರ್ವಭಾವಿ ಸಭೆಯಲ್ಲಿಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾಹಿತಿ
ವಿಕ ಸುದ್ದಿಲೋಕ ಐಗಳಿಅಥಣಿ ಪೂರ್ವ ಭಾಗದ ಕರಿಮಸೂತಿ ಏತ ನೀರಾವರಿ ಯೋಜನಾ ವರದಿಯಂತೆ (ಡಿಪಿಆರ್ ) ಕಾಲುವೆಗೆ ನೀರು ಹರಿಸುವಲ್ಲಿನೀರಾವರಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಐಗಳಿ ಕ್ರಾಸ್ , ಗುಂಡದ ಖೋಡಿ, ಬಾಡಗಿ, ಅರಟಾಳ ಸೇರಿದಂತೆ ನೀರು ವಂಚಿತ ಗ್ರಾಮಗಳ ರೈತರು ಸೆ.3 ರಂದು ಐಗಳಿ ಕ್ರಾಸ್ ನಲ್ಲಿಜೇವರ್ಗಿ- ಸಂಕೇಶ್ವರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಿದ್ದಾರೆ ಎಂದು ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಹೇಳಿದರು.
ಗ್ರಾಮದ ಐಗಳಿ ಕ್ರಾಸ್ ನಲ್ಲಿಭಾನುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿಮಾತನಾಡಿದ ಅವರು, ‘‘ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಕಾಲುವೆ ನೀರು ನಂಬಿ ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ರೈತರ ಗೋಳು ಕೇಳಲು ಯಾರೂ ಮುಂದೆ ಬರುತ್ತಿಲ್ಲ. ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೂ ಕುಡಿಯುವ ನೀರು ಸಿಗುತ್ತಿಲ್ಲ. ಇದರಲ್ಲಿನೀರಾವರಿ ಇಲಾಖೆ ವೈಫಲ್ಯವಿದೆ ಹೀಗಾಗಿ ಹೋರಾಟ ಅನಿವಾರ್ಯವಾಗಿದೆ. ಪ್ರತಿಭಟನೆಯಲ್ಲಿಕರ್ನಾಟಕ ರೈತ ಸಂಘದ ಮುಖಂಡ ಶಶಿಕಾಂತ ಗುರೂಜಿ ಮತ್ತಿತರರು ಭಾಗವಹಿಸಲಿದ್ದಾರೆ,’’ ಎಂದರು.
ಯುವ ರೈತ ಮುಖಂಡ ಜಗದೀಶ ತೆಲಸಂಗ ಮತ್ತಿತರರು ಮಾತನಾಡಿ, ‘‘ಕಾಲುವೆಯಿಂದ ಸಮರ್ಪಕ ನೀರು ಪೂರೈಕೆಯೊಂದೇ ನಮ್ಮ ಬೇಡಿಕೆ. ಇಲ್ಲಿಯಾವುದೇ ರಾಜಕೀಯವಿಲ್ಲ,’’ ಎಂದರು.
ಕರಿಮಸೂತಿ ಏತ ನೀರಾವರಿ ಯೋಜನೆ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಸೆ.3ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾತನಾಡಿದರು.