ವಿಕ ಸುದ್ದಿಲೋಕ ಕುಷ್ಟಗಿಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿವಿಶ್ವಕರ್ಮ ಸಮಾಜದಿಂದ ನಡೆಯುತ್ತಿರುವ 39ನೇ ಶ್ರೀದೇವಿ ಪುರಾಣ ಮಹೋತ್ಸವದಲ್ಲಿವಿಜಯ ದಶಮಿ ದಿನದಂದು ಬಾಲ ಮಕ್ಕಳಿಗೆ ನವದುರ್ಗೆಯರ ಅವತಾರದಲ್ಲಿಶೃಂಗರಿಸಿ ಪೂಜೆ ಸಲ್ಲಿಸಲಾಯಿತು.
ನವರಾತ್ರಿ ನಿಮಿತ್ತ ಒಂಬತ್ತು ಬಾಲಕಿ ಅವರನ್ನು ದೇವಿಯ ಸ್ವರೂಪವೆಂದು ಭಾವಿಸಿ ಕನ್ಯಾಪೂಜೆ ಮತ್ತು ನವದುರ್ಗೆಯ ಆರಾಧನೆ ನೆರವೇರಿಸಲಾಯಿತು. ಕನ್ಯೆಯರಿಗೆ ಪಾದಪೂಜೆ, ಅರಿಶಿನ-ಕುಂಕುಮ, ಹೂವು ನೀಡಲಾಯಿತು.
ನವದುರ್ಗೆಯ ಒಂಬತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಹೀಗೆ ಈ ಒಂಬತ್ತು ರೂಪಗಳಲ್ಲಿಬಾಲಕಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಂತರ ನಾನಾ ಕಾರ್ಯಕ್ರಮಗಳು ಜರುಗಿದವು. ಪುರಾಣ ಪ್ರವಚನಕಾರ ಲಕ್ಷೆತ್ರ್ಮೕಂದ್ರಸ್ವಾಮಿಗಳು ಶ್ಯಾಡಲಗೇರಿ, ಪಠಣಕಾರ ನಾಗಲಿಂಗಪ್ಪ ಬಡಿಗೇರ, ತಬಲಾ ಸಾಥ್ ಶ್ರೀಧರ ಪತ್ತಾರ, ಹಾರ್ಮೋನಿಯಂ ಸೇವೆ ಮೌನೇಶ ಕಮ್ಮಾರ ನೀಡಿದರು.
ಜಿಪಂ ಮಾಜಿ ಸದಸ್ಯ ಕೆ.ಮಹೇಶ, ತಾಲೂಕು ಅಧ್ಯಕ್ಷ ಶರಣಪ್ಪ ಬಡಿಗೇರ, ರಾಮಣ್ಣ ಬಡಿಗೇರ, ನಗರ ಘಟಕ ಗೌರವಾಧ್ಯಕ್ಷ ಸಿದ್ದಪ್ಪ ಬಡಿಗೇರ, ಅಧ್ಯಕ್ಷ ಶಿವಕುಮಾರ ಬಡಿಗೇರ, ಎಸ್ .ಕೆ. ಬಡಿಗೇರ, ಮಾನಪ್ಪ ಕಮ್ಮಾರ, ಗುರಪ್ಪ ಬಡಿಗೇರ, ಅನಿಲ್ ಕುಮಾರ ಕಮ್ಮಾರ ಇದ್ದರು.
---
21 ಕೆಎಸ್ ಟಿ ಪಿ09
ಕುಷ್ಟಗಿಯ ಕಾಳಿಕಾದೇವಿ ದೇವಸ್ಥಾನದಲ್ಲಿನವದುರ್ಗೆಯರಿಗೆ ಪೂಜೆ ಸಲ್ಲಿಸಲಾಯಿತು.