ರಾಯಚೂರು- ಮಠಗಳಿಗೆ ಬೋಸರಾಜು ಭೇಟಿ

Contributed by: manjunathsalic@gmail.com|Vijaya Karnataka•
member bosaraju visits renowned monasteries
ಮಠಗಳಿಗೆ ಬೋಸರಾಜು ಭೇಟಿ

ರಾಯಚೂರು : ದಸರಾ ಹಬ್ಬದ ನಿಮಿತ್ತ ನಗರದ ಪೇಟೆ ಹಿರೇಮಠ ಹಾಗೂ ಕಿಲ್ಲೆಬೃಹನ್ಮಠಕ್ಕೆ ವಿಧಾನ ಪರಿಷತ್ ಸದಸ್ಯ ಎನ್ .ಎಸ್ .ಬೋಸರಾಜು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
‘‘ಹಬ್ಬ-ಹರಿದಿನಗಳು ಸಮಾಜದಲ್ಲಿಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಭಾವನೆ ಬಲಪಡಿಸುವ ಮಹತ್ವದ ಸಂದರ್ಭಗಳಾಗಿವೆ. ಮಠ-ಮಾನ್ಯಗಳು ಜನರಲ್ಲಿಆಧ್ಯಾತ್ಮಿಕ ಚಿಂತನೆ ಬೆಳೆಸುವುದರ ಜತೆಗೆ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯ ಸಾರುವಲ್ಲಿಮಹತ್ವದ ಪಾತ್ರ ವಹಿಸುತ್ತಿವೆ,’’ ಎಂದರು.

ಬಳಿಕ ಸೋಮವಾರ ಪೇಟೆ ಹಿರೇಮಠದ ಪೀಠಾಧಿಪತಿ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿಲ್ಲೆಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಶಿವಾಚಾರ್ಯ ಸ್ವಾಮೀಜಿಗಳಿಗೆ ಪುಷ್ಪಗುಚ್ಛ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆದರು. ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಕೆ.ಶಾಂತಪ್ಪ, ಮುಖಂಡರಾದ ಜಯವಂತರಾವ್ ಪತಂಗೆ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ದರೂರ್ ಬಸವರಾಜ್ ಸೇರಿ ಇತರರಿದ್ದರು.

---

ಆರ್ ಸಿಎಚ್ 21ಎಂಎಸ್ 08

ದಸರಾ ಹಬ್ಬದ ನಿಮಿತ್ತ ರಾಯಚೂರಿನ ಕಿಲ್ಲೆಬೃಹನ್ಮಠಕ್ಕೆ ಭೇಟಿ ನೀಡಿದ ಎಂಎಲ್ಸಿ ಎನ್ .ಎಸ್ .ಬೋಸರಾಜು ಅವರು ಪೀಠಾಧಿಪತಿ ಶಾಂತಮಲ್ಲಶಿವಾಚಾರ್ಯ ಸ್ವಾಮೀಜಿಗೆ ಪುಷ್ಪಗುಚ್ಛ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಓದಲೇ ಬೇಕಾದ ಸುದ್ದಿ