ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ, ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕ, ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅ.23ರಂದು ಪಾಲಿಬೆಟ್ಟದಲ್ಲಿಸ್ವಚ್ಛತಾ ಅಭಿಯಾನ ಕಾರ ್ಯಕ್ರಮ ಆಯೋಜಿಸಲಾಗಿದೆ ಎಂದು ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಶಶಿ ಅಚ್ಚಪ್ಪ ತಿಳಿಸಿದರು.ವಿರಾಜಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು,‘‘ಕಳೆದ ವರ್ಷವೂ ನಾವು ನಮ್ಮ ಸಮಿತಿ ವತಿಯಿಂದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮಾಕುಟ್ಟದಲ್ಲಿಸ್ವಚ್ಛತಾ ಅಭಿಯಾನ ಜಾಥಾ ಆಯೋಜಿಸಲಾಗುತ್ತಿದೆ. ಅ.23ರಂದು ಪಾಲಿಬೆಟ್ಟದಲ್ಲಿಸ್ವಚ್ಛತಾ ಅಭಿಯಾನ ಕಾರ ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಎರಡು ಪದವಿ ಕಾಲೇಜುಗಳ ನೂರಕ್ಕೂ ಅಧಿಕ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿಪಾಲ್ಗೊಳ್ಳಲಿದ್ದಾರೆ. ಜತೆಗೆ ವಿವಿಧ ಸಂಘ ಸಂಸ್ಥೆಗಳು ಜತೆಗೂಡಲಿವೆ, ಈ ಅಭಿಯಾನದಲ್ಲಿವಿದ್ಯಾರ್ಥಿಗಳನ್ನು ಒಳಗೊಂಡಂತೆ 150ಕ್ಕೂ ಅಧಿಕ ಜನರು ಸೇರಲಿದ್ದಾರೆ,’’ಎಂದು ವಿವರಿಸಿದರು.
‘‘ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಸಂಪೂರ್ಣ ಸಹಕಾರ ನೀಡಿದ್ದು, ಸ್ವಚ್ಛತಾ ಅಭಿಯಾನದಂದು ಬೆಳಗ್ಗೆ ವಿರಾಜಪೇಟೆ ತಾಲೂಕು ತಹಸೀಲ್ದಾರ್ ಪ್ರವೀಣ್ ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಈ ಕಾರ್ಯಕ್ರಮವು ಜರುಗಲಿದೆ. ಜತೆಗೆ ಸ್ವಚ್ಛ ಪರಿಸರ ಮಾಹಿತಿ ಕಾರ ್ಯಕ್ರಮ, ಗಿಡ ನೆಡುವ ಕಾರ ್ಯಕ್ರಮ ನಡೆಯಲಿದೆ,’’ಎಂದರು.
ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಪುರಸಭಾ ಸದಸ್ಯರಾದ ಸುನೀತಾ ಮಾತನಾಡಿ,‘‘ಪಾಲಿ ಬೆಟ್ಟದಲ್ಲಿಜರುಗಲಿರುವ ಈ ಸ್ವಚ್ಛತಾ ಅಭಿಯಾನ ಕಾರ ್ಯಕ್ರಮಕ್ಕೆ ಎನ್ ಎಸ್ ಎಸ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ,’’ಎಂದು ಹೇಳಿದರು.
ಗೋಷ್ಠಿಯಲ್ಲಿಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಪದಾಧಿಕಾರಿಗಳಾದ ಸುಬ್ರಮಣಿ, ಥೆರೇಸಾ ವಿಕ್ಟರ್ ಹಾಜರಿದ್ದರು.