ದಸರಾ ಪ್ರೀತಿ, ಗೌರವದ ಸಂಕೇತ

Contributed by: skchoudhari121@gmail.com|Vijaya Karnataka•
dasara festival a symbol of mutual love and respect
ವಿಕ ಸುದ್ದಿಲೋಕ ಅಫಜಲಪುರ ದಸರಾ ಹಬ್ಬವು ಕೇವಲ ಆಚರಣೆ ಅಷ್ಟೇ ಅಲ್ಲ, ಅದು ಸಮಾಜದಲ್ಲಿಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಗೌರವ ಮೂಡಿಸುವ ಪವಿತ್ರ ಹಬ್ಬವಾಗಿದೆ. ಹೀಗಾಗಿ ನಾವೆಲ್ಲರೂ ಒಂದಾಗಿ ಇಂತಹ ಪವಿತ್ರ ಹಬ್ಬವನ್ನು ಆಚರಿಸೋಣ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು. ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿನಡೆದ ಬನ್ನಿ ವಿನಿಮಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಸರಾ ಹಬ್ಬಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆಯಿದೆ ಎಂದರು. ಮಹಾಭಾರತದ ಅವಧಿಯಲ್ಲಿಪಾಂಡವರು ತಮ್ಮ ಸುದೀರ್ಘ ವನವಾಸ ಮುಗಿಸಿ, ಅಧರ್ಮದ ಹಾದಿಯಲ್ಲಿದ್ದ ಕೌರವರನ್ನು ಸೋಲಿಸಿ ವಿಜಯಶಾಲಿಯಾಗಿ ಬಂದ ದಿನವನ್ನೇ ನಾವು ಅತ್ಯಂತ ಶ್ರೇಷ್ಠ ಹಾಗೂ ವಿಜಯದ ದಿನವಾಗಿ ಆಚರಿಸುತ್ತಾ ಬಂದಿದ್ದೇವೆ. ಪ್ರಸ್ತುತ ರಾಜ್ಯಾದ್ಯಂತ ಬರಗಾಲ ಆವರಿಸಿದೆ. ನಮ್ಮ ಭಾಗದಲ್ಲೂಬೆಳೆಗಳು ಮಳೆಯಿಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿನಾವೆಲ್ಲರೂ ಒಟ್ಟಾಗಿ, ಪ್ರಕೃತಿ ಮಾತೆ ಕರುಣೆ ತೋರಲಿ ಮತ್ತು ರೈತರ ಹಾಗೂ ಸಾರ್ವಜನಿಕರ ಸಂಕಷ್ಟಗಳನ್ನು ಶೀಘ್ರದಲ್ಲೇ ಬಗೆಹರಿಸಲಿ ಎಂದು ಭಗವಂತನಲ್ಲಿಶ್ರದ್ಧೆಯಿಂದ ಪ್ರಾರ್ಥಿಸೋಣ ಎಂದರು. ಸಾನಿಧ್ಯ ವಹಿಸಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಮಹಾಭಾರತದ ಪ್ರಕಾರ ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯಲ್ಲಿತಮ್ಮ ದಿವ್ಯ ಆಯುಧಗಳನ್ನು ಬನ್ನಿ ಮರದಲ್ಲಿಇಟ್ಟಿದ್ದರು. ವಿಜಯದಶಮಿಯ ದಿನದಂದು ಆ ಆಯುಧಗಳನ್ನು ಮರಳಿ ಪಡೆದು, ಕೌರವರ ವಿರುದ್ಧ ವಿಜಯ ಸಾಧಿಸಿದರು. ಹಾಗಾಗಿ ಇದು ವಿಜಯದ ಸಂಕೇತವಾಗಿದೆ ಎಂದರು. ಈ ಸಂದರ್ಭದಲ್ಲಿಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ…, ಮಂಜೂರ ಅಹ್ಮದ್ ಪಟೇಲ…, ಸಿದ್ದಯ್ಯ ಹಿರೇಮಠ, ಸಂಗ್ರಾಮಗೌಡ ಪಾಟೀಲ…, ಪಪ್ಪು ಪಟೇಲ…, ಪ್ರಕಾಶ್ ಜಮಾದಾರ, ಮತೀನ ಪಟೇಲ…, ಸಿದ್ದಾಥ್ ರ್ ಬಸರಗಿಡ, ಸಿದ್ದು ಸಿರಸಗಿ, ರವಿ ಶೆಟ್ಟಿ, ಶರಣು ಕುಂಬಾರ, ಸುಭಾಷ್ ರೂಗಿ, ರೇಣುಕಾ ಸಿಂಗೆ, ರಮೇಶ್ ಪೂಜಾರಿ, ಎಸ್ .ಎಸ್ .ಪಾಟೀಲ…, ಮಹಾಂತಯ್ಯ ಹಿರೇಮಠ, ಶಿವಾನಂದ ಗಾಡಿ ಸಾಹುಕಾರ, ಕಲ್ಯಾಣಿ ಸಿಂದಗೇರಿ, ಶಿವು ಪದಕಿ, ಮಹಾಲಿಂಗ ಅಂಗಡಿ, ರಾಜು ಪಾಟೀಲ…, ಸುರೇಶಗೌಡ ಶಿರನಾಳ, ಕರೆಪ್ಪ ಪೂಜಾರಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ಓದಲೇ ಬೇಕಾದ ಸುದ್ದಿ