ವಿಕ ಸುದ್ದಿಲೋಕ ಕಲಬುರಗಿ ತಾಯಿಯ ಸ್ಮರಣಾರ್ಥ ಭವ್ಯ ಮಂದಿರ ನಿರ್ಮಿಸಿರುವುದು ಶ್ಲಾಘನೀಯ, ಅಂಬವ್ವಾ ಅವರ ನೆನಪಿನಲ್ಲಿತಾಯಿಯ ಕುರಿತ ಲೇಖನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿಪ್ರಕಟಿಸಲು ಮುಂದಾಗಿರುವುದು ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯಾಗಲಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ತಾಯಿ ಅಂಬಾಭವಾನಿ ದೇವಿಯು ಸುಭಾಷ್ ಗುತ್ತೇದಾರ ಅವರಿಗೆ ಶಕ್ತಿ ಮತ್ತು ಆಶೀರ್ವಾದ ನೀಡಲಿ ಎಂದು ಲೇಖಕ ವೀರಶೆಟ್ಟಿ ಎಂ.ಪಾಟೀಲ್ ಹಾರೈಸಿದರು. ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿನಡೆದ ಅಂಬಾಭವಾನಿ ದೇವಿಯ ಪ್ರಥಮ ಜಾತ್ರೆ ಹಾಗೂ ದಸರಾ ಮಹೋತ್ಸವದ ಅಂಗವಾಗಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ತಾಯಿ ಅಂಬವ್ವಾ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಲೇಖನ ಸ್ಪರ್ಧೆಯಲ್ಲಿಪ್ರಥಮ ಬಹುಮಾನ ಪಡೆದು ಮಾತನಾಡಿದರು. ಅವರು ಬರೆದ ಅಮ್ಮ-ತನ್ನ ಕನಸುಗಳ ಚಿತಾಭಸ್ಮದಲ್ಲಿಮಕ್ಕಳ ಭವಿಷ್ಯಕ್ಕೆ ದೀಪ ಹಚ್ಚಿದ ಮಹಾತಾಯಿ! ಎಂಬ ಲೇಖನಕ್ಕೆ ಅಂಬವ್ವಾ ಮಾತೃರತ್ನ ಪ್ರಶಸ್ತಿ ಹಾಗೂ 21,000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಅವರು 16 ಪುಸ್ತಕಗಳನ್ನು ಪ್ರಕಟಿಸಿದ್ದು, ಚಿತ್ರಕಲೆ ಮತ್ತು ಛಾಯಾಗ್ರಹಣ ಕ್ಷೇತ್ರಗಳಲ್ಲಿ50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾರ್ಯಕ್ರಮದಲ್ಲಿನಂದಗಾಂವದ ರಾಜಶೇಖರ ಸ್ವಾಮೀಜಿ ಹಾಗೂ ಮಾಡಿಯಾಳದ ಮರುಳಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಸುಭಾಷ್ ಗುತ್ತೇದಾರ ಹಾಗೂ ಶಿವಪುತ್ರಪ್ಪ ಬೆಳ್ಳೆ ಉಪಸ್ಥಿತರಿದ್ದರು. ಹುಬ್ಬಳ್ಳಿಯ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಶಿವಾ ಎಲ….ಉಡಚಣ ಮತ್ತು ಡಾ.ಅವಿನಾಶ ದೇವನೂರಗೆ ತಲಾ 5,000 ನಗದು ಸಹಿತ ಗೌರವ ಪುರಸ್ಕಾರ ನೀಡಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರನ್ನೂ ಸನ್ಮಾನಿಸಲಾಯಿತು.