(ಸ್ಥಳೀಯಪುಟ ಲೀಡ್ ) ( ಇದರ ಜತೆ ಲಗತ್ತಿಸಿರುವ ಫೋಟೋಗಳಲ್ಲದೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದ ಫೋಟೋ ಕಳುಹಿಸುವೆ, ಅದಕ್ಕೆ ಜಾಗ ಬಿಟ್ಟಿರಿ ಸರ್ ; ಫೋಟೋಗಳ ಸಹಿತ ಚೆನ್ನಾಗಿ ಸುದ್ದಿ ಕಟ್ಟಿಕೊಡಲು ಮಯ್ಯ ಸರ್ ಸೂಚಿಸಿದ್ದಾರೆ) (ವಿಜಯ ಕಲರ್ ಚೇಂಜ್ ಮಾಡಿ ನಮ್ಮ ಫಾಂಟ್ ಬಳಸಬಹದು ಅನಿಸಿಕೆ)
ಅಂಬಾರಿಯಲ್ಲಿಚಾಮುಂಡೇಶ್ವರಿ ವಿರಾಜಮಾನ: ತುಮಕೂರು ದಸರಾ ವಿಜಯಜನಸಾಗರದ ನಡುವೆ ಜಂಬೂಸವಾರಿ | ಮೈಸೂರು ಮಾದರಿಯಲ್ಲಿ11 ದಿನ ಉತ್ಸವಕ್ಕೆ ಅದ್ಧೂರಿ ತೆರೆ | 50ಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳು, 25ಕ್ಕೂ ಅಧಿಕ ಕಲಾ ತಂಡಗಳ ಆಕರ್ಷಕ ಪ್ರದರ್ಶನ
ವಿಕ ಸುದ್ದಿಲೋಕ ತುಮಕೂರು
ಅಂಬಾರಿಯಲ್ಲಿಚಾಮುಂಡೇಶ್ವರಿ ತಾಯಿಯ ವಿರಾಜಮಾನ, ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಮೂರು ಆನೆಗಳು, ಭಕ್ತಿಭಾವದ ನಡುವೆ ಸಾಗಿದ 50ಕ್ಕೂ ಅಧಿಕ ದೇವಾಲಯಗಳ ಉತ್ಸವ ಮೂರ್ತಿಗಳು, ನಾಡಿನ ಕಲಾ ವೈಭವವನ್ನು ಅನಾವರಣಗೊಳಿಸಿದ 25ಕ್ಕೂ ಹೆಚ್ಚು ಕಲಾ ತಂಡಗಳು... ಇವೆಲ್ಲದರ ನಡುವೆ ರಸ್ತೆಯ ಇಕ್ಕೆಲಗಳಲ್ಲಿಉಕ್ಕಿ ಹರಿದ ಜನಸಾಗರ! ವಿಜಯದಶಮಿಯಂದು ತುಮಕೂರು ಅಕ್ಷರಶಃ ದಸರಾ ಸಂಭ್ರಮದಲ್ಲಿಮಿಂದೆದ್ದಿತು. ಮೈಸೂರು ದಸರಾ ಮಾದರಿಯಲ್ಲಿಆಯೋಜಿಸಿದ್ದ ತುಮಕೂರು ದಸರಾ ಜಂಬೂಸವಾರಿ ಜಿಲ್ಲೆಯ ಸಾಂಸ್ಕೃತಿಕ ವೈಭವಕ್ಕೆ ಹೊಸ ಮೆರುಗು ನೀಡಿತು.
ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ11 ದಿನಗಳ ಕಾಲ ನಡೆದ ತುಮಕೂರು ದಸರಾ ಮಹೋತ್ಸವಕ್ಕೆ ವಿಜಯದಶಮಿಯ ಜಂಬೂಸವಾರಿ ಅದ್ದೂರಿ ಸಮಾರೋಪದ ಕಳೆ ತಂದಿತು. ಅಂಬಾರಿ ಮೆರವಣಿಗೆ, ಜನಪದ ಕಲಾ ಪ್ರದರ್ಶನ, ವಾದ್ಯಗಳ ನಿನಾದ ಹಾಗೂ ಜನರ ಸಂಭ್ರಮ ನಗರದ ಪ್ರಮುಖ ರಸ್ತೆಗಳನ್ನು ಹಬ್ಬದ ಅಂಗಳವನ್ನಾಗಿಸಿದವು.
ನಗರದ ಟೌನ್ ಹಾಲ್ ವೃತ್ತದಲ್ಲಿಡಾ. ಜಿ. ಪರಮೇಶ್ವರ್ ಅವರು ನಂದಿಧ್ವಜಕ್ಕೆ ಹಾಗೂ ಅಂಬಾರಿಯಲ್ಲಿಪ್ರತಿಷ್ಠಾಪಿಸಲಾಗಿದ್ದ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ನೆರವೇರಿಸಿದರು. ಬಳಿಕ ಜಂಬೂಸವಾರಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು.
ಅಂಬಾರಿ ಹೊತ್ತ ಲಕ್ಷ್ಮಣನ ಗಜಗಾಂಭೀರ್ಯ: ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದ ದುಬಾರೆ ಆನೆ ಬಿಡಾರದ ಲಕ್ಷ್ಮಣ ಆನೆ ಸೀತಕಲ್ಲುಚಾಮುಂಡೇಶ್ವರಿ ತಾಯಿಯ ಅಂಬಾರಿಯನ್ನು ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿತು. ಅದರ ಇಕ್ಕೆಲಗಳಲ್ಲಿನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮಿ ಹಾಗೂ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮಿ ಆನೆಗಳು ಸಾಗಿದ್ದು ನೋಡುಗರ ಗಮನ ಸೆಳೆಯಿತು. ಮೂರು ಆನೆಗಳ ರಾಜಗಾಂಭೀರ್ಯ, ಅಂಬಾರಿಯ ಅಲಂಕಾರ ಹಾಗೂ ತಾಯಿಯ ದರ್ಶನ ಪಡೆಯಲು ಮುಗಿಬಿದ್ದ ಭಕ್ತರು ಜಂಬೂಸವಾರಿಯ ಮೆರುಗನ್ನು ಹೆಚ್ಚಿಸಿದರು.
ಹೀಗೆ ಅಂಬಾರಿಯ ಗಾಂಭೀರ್ಯ, ಜನಪದ ಕಲೆಯ ವೈಭವ, ಧಾರ್ಮಿಕ ಶ್ರದ್ಧೆ ಮತ್ತು ಜನರ ಉತ್ಸಾಹದ ಸಂಗಮದಲ್ಲಿತುಮಕೂರು ದಸರಾ ಜಂಬೂಸವಾರಿ ಸಂಭ್ರಮದಿಂದ ಸಂಪನ್ನಗೊಂಡಿತು. 11 ದಿನಗಳ ದಸರಾ ಉತ್ಸವದ ಅಂತಿಮ ದಿನ ಕಲ್ಪತರುನಾಡಿನ ಬೀದಿಗಳು ನಾಡಿನ ಸಂಸ್ಕೃತಿ ಪರಂಪರೆ ಮತ್ತು ಉತ್ಸವದ ಸಂಭ್ರಮಕ್ಕೆ ಸಾಕ್ಷಿಯಾದವು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಮೆರವಣಿಗೆಯಲ್ಲಿಹೆಜ್ಜೆ ಹಾಕಿದರು. ಶಾಸಕರಾದ ಟಿ.ಬಿ. ಜಯಚಂದ್ರ, ಜಿ.ಬಿ. ಜ್ಯೋತಿಗಣೇಶ್ , ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರಿ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ , ಜಿಪಂ ಸಿಇಒ ಬಿ.ವಿ.ಅಶ್ವಿಜಾ, ಎಸ್ ಪಿ ಕೆ.ವಿ. ಅಶೋಕ್ , ಎಡಿಸಿ ಡಾ. ಎನ್ .ತಿಪ್ಪೇಸ್ವಾಮಿ, ಎಎಸ್ ಪಿಗಳಾದ ಗೋಪಾಲ್ ಮತ್ತು ಪುರುಷೋತ್ತಮ್ , ಮಹಾನಗರ ಪಾಲಿಕೆ ಆಯುಕ್ತೆ ಶುಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದರಾಮಣ್ಣ, ತಹಸೀಲ್ದಾರ್ ರಾಜೇಶ್ವರಿ ಮತ್ತಿತರರು ಪಾಲ್ಗೊಂಡಿದ್ದರು.
ಬಾಕ್ಸ್
50ಕ್ಕೂ ಹೆಚ್ಚು ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ
50ಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳು ಜಂಬೂಸವಾರಿಯಲ್ಲಿಪಾಲ್ಗೊಂಡು ಧಾರ್ಮಿಕ ಶ್ರದ್ಧೆಯ ವೈಭವವನ್ನು ಅನಾವರಣಗೊಳಿಸಿದವು. ಎತ್ತಿನ ಗಾಡಿಗಳು ಹಾಗೂ ಕುದುರೆಗಳೂ ಮೆರವಣಿಗೆಯಲ್ಲಿಸಾಗಿದವು. ಸಾಂಪ್ರದಾಯಿಕತೆ ಮತ್ತು ಜನಪದ ಕಲೆಯ ಸಮ್ಮಿಲನದೊಂದಿಗೆ ಸಾಗಿದ ಜಂಬೂಸವಾರಿ ತುಮಕೂರಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಯಿತು.
ಶಮೀ ಪೂಜೆ ಸಂಪನ್ನ : ಜಂಬೂ ಸವಾರಿ ಸರಕಾರಿ ಪ.ಪೂ.ಕಾಲೇಜು ಮೈದಾನ ತಲುಪಿದ ಬಳಿಕ ಗ್ರಾಮ ದೇವತೆಗಳ ಸಮ್ಮುಖದಲ್ಲಿಸಚಿವ ಪರಮೇಶ್ವರ್ ಕದಳಿ ಛೇದನ ಮಾಡುವ ಮೂಲಕ ಶಮಿ ಪೂಜೆ ಸಂಪನ್ನಗೊಂಡಿತು.
ಬಾಕ್ಸ್
ರಸ್ತೆಯುದ್ದಕ್ಕೂ ಕಲಾ ವೈಭವದ ರಸದೌತಣ
ಯಕ್ಷಗಾನದಿಂದ ಕಥಕ್ಕಳಿವರೆಗೆ, ವೀರಗಾಸೆಯಿಂದ ಹುಲಿವೇಷದವರೆಗೆ, ಕಂಸಾಳೆಯಿಂದ ಕೋಲಾಟದವರೆಗೆ... ಒಂದಕ್ಕಿಂತ ಒಂದು ಆಕರ್ಷಕ ಪ್ರದರ್ಶನಗಳು ಜನರನ್ನು ಮಂತ್ರಮುಗ್ಧಗೊಳಿಸಿದವು. ಚಂಡೇವಾದ್ಯ, ನಂದಿಧ್ವಜ, ಶಿವಪಾರ್ವತಿ ವೇಷ, ಪೂಜಾ ಕುಣಿತ, ಸೋಮನ ಕುಣಿತ, ಚಿಟ್ಟಿಮೇಳ, ನಾಸಿಕ್ ಡೋಲು, ಗೊರವರ ಕುಣಿತ, ಗಾರುಡಿಗೊಂಬೆ, ಕೀಲುಕುದುರೆ, ಅರೇವಾದ್ಯ ಸೇರಿದಂತೆ 25ಕ್ಕೂ ಅಧಿಕ ಕಲಾ ತಂಡಗಳು ಮೆರವಣಿಗೆಗೆ ಕಲರವ ತುಂಬಿದವು. ವಾದ್ಯಗಳ ಮೊಳಗುವಿಕೆ, ಕಲಾವಿದರ ಲಯಬದ್ಧ ಹೆಜ್ಜೆ, ಆಕರ್ಷಕ ವೇಷಭೂಷಣಗಳು ಹಾಗೂ ಜನಪದ ಕಲೆಯ ವೈವಿಧ್ಯ ರಸ್ತೆಯ ಇಕ್ಕೆಲಗಳಲ್ಲಿನೆರೆದಿದ್ದ ಜನರನ್ನು ಸೆಳೆದವು. ಪ್ರತಿ ಕಲಾ ತಂಡದ ಪ್ರದರ್ಶನವೂ ಪ್ರೇಕ್ಷಕರಲ್ಲಿಉತ್ಸಾಹ ಮೂಡಿಸಿತು.
21ಟಿಯುಎಂ3 : ತುಮಕೂರು ದಸರಾ ಜಂಬೂಸವಾರಿಯ ದೃಶ್ಯ. ಅಂಬಾರಿ ಹೊತ್ತ ಲಕ್ಷ್ಮಣನ ಜತೆಗೆ ಎರಡು ಲಕ್ಷ್ಮೇ ಆನೆಗಳ ಗಾಂಭಿರ್ಯ ನಡೆ. ಕಿಕ್ಕಿರಿದು ನೆರೆದಿದ್ದ ಜನಸಾಗರ.
21ಟಿಯುಎಂ4 : ಜಂಬೂಸವಾರಿಗೆ ಬಿಜಿಎಸ್ ವೃತ್ತದಲ್ಲಿಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಕನ್ನಿಕಾ ಪರಮೇಶ್ವರಿ, ಟಿ.ಬಿ.ಜಯಚಂದ್ರ, ಜಿ.ಬಿ.ಜ್ಯೋತಿಗಣೇಶ್ ಮತ್ತಿತರರಿದ್ದರು.
21ಟಿಯುಎಂ5 ರಿಂದ 21 ಟಿಯುಎಂ10 : ಜಂಬೂ ಸವಾರಿಗೆ ಕಲಾ-ಸಾಂಸ್ಕೃತಿಕ ಮೆರಗು (ಒಂದೇ ಕ್ಯಾಪ್ಷನ್ ಬಳಸಿ ಹೆಚ್ಚು ಫೋಟೋಗಳ ಸಹಿತ ಫೀಚರ್ ರೂಪದ ಬಳಕೆಗೆ)
21ಟಿಯುಎಂ11 : 50ಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನೋಟ.