151 ಕೆಜಿ ಪಂಚಲೋಹದ ಘಂಟೆ ಸಮರ್ಪಣೆ

Contributed byravideshpande77@gmail.com|Vijaya Karnataka

A 151 kg Panchaloha bell, crafted by over 150 Maragala Mallayyas from North Karnataka, will be dedicated to Kailasa Dwaram in Srisailam on March 14. The bell's journey begins on March 1 from Yeduru village, with a procession accompanying it to Srisailam, reaching the holy place on March 13. The bell's resonant 'Omkara' sound is expected to travel four kilometers.

151 kg panchaloha grand bell for srisailam kailasa door a unique contribution by over 150 maragalu mallayya artisans of north karnataka

151 ಕೆಜಿ ಪಂಚಲೋಹದ ಘಂಟೆ ಸಮರ್ಪಣೆ

ಬಾಗಲಕೋಟೆ: ಶ್ರೀಶೈಲದಲ್ಲಿಕೈಲಾಸ ಬಾಗಿಲಿಗೆ ಅಳವಡಿಸಲು ಅಖಿಲ ಕರ್ನಾಟಕ ಮರಗಾಲ ಮಲ್ಲಯ್ಯಗಳ ಸಂಘ ಹಾಗೂ ಬೆಂಗಳೂರಿನ ಅಮ್ಮ ಫೌಂಡೇಶನ್ ವತಿಯಿಂದ ನಿರ್ಮಿಸಿರುವ 151 ಕೆ.ಜಿ. ಲೋಹದ ಘಂಟೆ ಸಮರ್ಪಣೆ ಕಾರ್ಯ ಮಾ.14 ರಂದು ನಡೆಯಲಿದೆ ಎಂದು ಸಂಘದ ಪ್ರಮುಖ ಲಕ್ಷ್ಮಣ ಇಂಗುನವರ ತಿಳಿಸಿದ್ದಾರೆ.ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ಬೆಳಗಾವಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಹತ್ತಾರು ಜಿಲ್ಲೆಗಳ 150ಕ್ಕೂ ಹೆಚ್ಚು ಮರಗಾಲು ಮಲ್ಲಯ್ಯರು ಸ್ವಯಂ ಪ್ರೇರಣೆಯಿಂದ ಈ ಘಂಟೆ ನಿರ್ಮಿಸಿದ್ದಾರೆ. ಮಾ.1 ರಂದು ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಘಂಟೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಘಂಟೆಯನ್ನು ಶ್ರೀಶೈಲ ಭಕ್ತರ ಪಾದಯಾತ್ರೆಯೊಂದಿಗೆ ಶ್ರೀಶೈಲಕ್ಕೆ ಸಾಗಿಸಲಾಗುತ್ತದೆ. ಮಾ.13 ರಂದು ಸುಕ್ಷೇತ್ರ ತಲುಪಲಿದೆ. ಹನಗಂಡಿಯ ಅಣ್ಣಪ್ಪ ಲಾಳಕಿ ಘಂಟೆ ತಯಾರಿಸಿದ್ದಾರೆ. ಒಂದು ಸಾರಿ ಬಾರಿಸಿದರೆ ಹೊರಹೊಮ್ಮುವ ಓಂಕಾರ ನಾದ ಕೈಲಾಸ ಬಾಗಿಲಿನ ಸುತ್ತ ನಾಲ್ಕು ಕಿ.ಮೀ. ವರೆಗೆ ಕೇಳುತ್ತದೆ ಎಂದು ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಬೆಲ್ -ಬಿಜಿಕೆ-23

151 ಕೆ.ಜಿ. ಪಂಚಲೋಹದ ಘಂಟೆ