ಕಾಮಗೌಡನಹಳ್ಳಿಯಲ್ಲಿಶಾಲಾ ಸಂಭ್ರಮೋತ್ಸವ

Contributed byvkhnataraj@gmail.com|Vijaya Karnataka

ಹುಣಸೂರು ತಾಲೂಕಿನ ಕಾಮಗೌಡನಹಳ್ಳಿಯ ಸರಕಾರಿ ಶಾಲೆಯಲ್ಲಿ ಶಾಲಾ ಸಂಭ್ರಮೋತ್ಸವ-2026 ಅದ್ಧೂರಿಯಾಗಿ ನಡೆಯಿತು. ಗ್ರಾಮಸ್ಥರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಶಾಲಾ ಅಭಿವೃದ್ಧಿಗೆ ಸಹಕರಿಸಿದ ಎಸ್‌ಡಿಎಂಸಿ, ಪೋಷಕರು, ಗ್ರಾಮಸ್ಥರ ಕೊಡುಗೆಯನ್ನು ಅಧಿಕಾರಿಗಳು ಶ್ಲಾಘಿಸಿದರು. ಶಾಲಾ ಮಕ್ಕಳಿಗೆ ಊಟದ ತಟ್ಟೆ, ಡೆಸ್ಕ್, ಕುರ್ಚಿಗಳನ್ನು ದೇಣಿಗೆಯಾಗಿ ನೀಡಲಾಯಿತು. ಹಳೆ ವಿದ್ಯಾರ್ಥಿನಿಯೊಬ್ಬರನ್ನೂ ಸನ್ಮಾನಿಸಲಾಯಿತು.

school celebration in kamagoudanahalli community support for rural school success

ಕಾಮಗೌಡನಹಳ್ಳಿಯಲ್ಲಿಶಾಲಾ ಸಂಭ್ರಮೋತ್ಸವ

ವಿಕ ಸುದ್ದಿಲೋಕ ಹುಣಸೂರು

ತಾಲೂಕಿನ ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ ಶಾಲಾ ಸಂಭ್ರಮೋತ್ಸವ-2026 ಅದ್ಧೂರಿಯಾಗಿ ನಡೆಯಿತು.

ಗ್ರಾಮಸ್ಥರ ಸಹಕಾರದಲ್ಲಿನಡೆದ ಕಾರ್ಯಕ್ರಮದಲ್ಲಿಮಕ್ಕಳು ನಡೆಸಿಕೊಟ್ಟ ಸಾಂಸ್ಕ್ಕೃತಿಕ ಕಾರ್ಯಕ್ರಮಗಳಂತೂ ಒಂದನ್ನೊಂದು ಮೀರಿಸುವಂತಿತ್ತು. ತಮ್ಮ ಮಕ್ಕಳ ಪ್ರತಿಭೆ ಕಂಡು ಪೋಷಕರು, ಗ್ರಾಮಸ್ಥರು ಪುಲ್ ಖುಷ್ ಆಗಿದ್ದರು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಸಾಲಿಗ್ರಾಮ ತಾ.ಪಂ. ಇಒ ಎ.ಎನ್ .ರವಿ ಮಾತನಾಡಿ,‘‘ಗ್ರಾಮೀಣ ಪ್ರದೇಶದ ಈ ಸರಕಾರಿ ಶಾಲೆಯ ಅಭಿವೃದ್ಧಿಗೆ ಎಸ್ ಡಿಎಂಸಿ, ಪೋಷಕರು ಹಾಗೂ ಗ್ರಾಮಸ್ಥರ ಸಹಕಾರ ಅವಿಸ್ಮರಣೀಯ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ .ಪಿ.ಮಹದೇವ್ ಮಾತನಾಡಿ, ‘‘ಸಮುದಾಯದ ಸಹಕಾರ ದೊರೆತರೆ ಮಾತ್ರ ಶಾಲೆ ಉನ್ನತಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿಗ್ರಾಮಸ್ಥರು ತಮ್ಮೂರಿನ ಸರಕಾರಿಮ ಶಾಲೆ ಬಗ್ಗೆ ಹೊಂದಿರುವ ಅಭಿಮಾನ ಮಾದರಿಯಾಗಿದೆ ಎಂದು ಪ್ರಶಂಸಿಸಿ, ಟಿ.ನರಸಿಪುರ ಕುರುಬೂರಿನಂತೆ ಈ ಗ್ರಾಮದಲ್ಲಿಖೊ-ಖೋ ಆಟಗಾರರ ತಂಡಗಳೇ ಇರುವುದು ಹೆಮ್ಮೆ,’’ ಎಂದು ಅಭಿಮಾನ ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕ ಸುಬ್ಬೆಗೌಡ ಶಾಲೆಯ ಯಶೋಗಾಥೆ ತಿಳಿಸಿ, ಗ್ರಾಮಸ್ಥರ ಸಂಪೂರ್ಣ ಸಹಕಾರವನ್ನು ಸ್ಮರಿಸಿದರು. ಉದ್ಯಮಿ ಕಾರ್ತಿಕ್ , ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಅಶ್ವಿನಿ ಮಾತನಾಡಿದರು. ಸಾಂಸ್ಕೃತಿಕ ಕಲರವದಲ್ಲಿಚಿಣ್ಣರು ಮಿಂಚಿದರು.

ಶಾಲೆಗೆ ಕೊಡುಗೆ: ಮೈಸೂರಿನ ಆಟೋಮೆಟಿಕ್ ಆಕ್ಸಲ್ ವತಿಯಿಂದ 15 ಡೆಸ್ಕ್ , 30 ಕುರ್ಚಿಗಳನ್ನು ಕೊಡಿಸಿದ ಹಾಗೂ ಶಾಲಾ ಮಕ್ಕಳಿಗೆ ವೈಯಕ್ತಿಕವಾಗಿ 101 ಊಟದ ತಟ್ಟೆ ಕೊಡುಗೆಯಾಗಿ ನೀಡಿದ್ದ ಇದೇ ಸಂಸ್ಥೆಯ ಉದ್ಯೋಗಿ ತಿಲಕ ಶ್ರೀಧರ್ ಅವರನ್ನು ಹಾಗೂ ಕಳೆದ ವರ್ಷದ ಎನ್ ಎಂಎಂಎಸ್ ಪರೀಕ್ಷೆಯಲ್ಲಿಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದ ಶಾಲೆಯ ಹಳೆ ವಿದ್ಯಾರ್ಥಿನಿ ಪ್ರಿಯಾ ಅವರನ್ನು ಗಣ್ಯರು ಸನ್ಮಾನಿಸಿದರು.

ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಮಾದೇಗೌಡ, ಉಪಾಧ್ಯಕ್ಷೆ ಸುಮಾ ಹಾಗೂ ಸದಸ್ಯರು, ಗ್ರಾ.ಪಂ.ಮಾಜಿ ಸದಸ್ಯರಾದ ಬೋರೇಗೌಡ, ಈಶ್ವರ, ಪವಿತ್ರಚಂದ್ರು, ಮಾದನಾಯಕ, ಡ್ರೈವರ್ ಮಾದೇವಣ್ಣ, ಶಿವಣ್ಣ ಮತ್ತಿತರಿದ್ದರು. ಗ್ರಾಮದ ಯಜಮಾನರು, ಪೋಷಕರು, ಗ್ರಾಮಸ್ಥರು ಭಾಗಿಯಾಗಿದ್ದರು.

ಪೊಟೋ

23 ಎಚ್ ಯುಎನ್ 1

ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿ ಸರಕಾರಿ ಶಾಲೆಯಲ್ಲಿನಡೆದ ಶಾಲಾ ಸಂಭ್ರಮೋತ್ಸವವನ್ನು ಸಾಲಿಗ್ರಾಮ ತಾ.ಪಂ. ಇಒ ಎ.ಎನ್ .ರವಿ ಉದ್ಘಾಟಿಸಿದರು, ಬಿಇಒ ಮಹದೇವ್ , ಮುಖ್ಯ ಶಿಕ್ಷಕ ಸುಬ್ಬೆಗೌಡ ಉದ್ಯಮಿ ಕಾರ್ತಿಕ್ ಹಾಗೂ ಮುಖಂಡರುಗಳಿದ್ದರು.