*ಚಿತ್ರ:ಗಾಯತ್ರಿ*
**
ರಾಷ್ಟ್ರೀಯ ಕಾರ್ಯಾಗಾರಕ್ಕೆ ಗಾಯತ್ರಿ ಶಿಲ್ಪಿ ಆಯ್ಕೆ
ಕಲಬುರಗಿ: ಭಾರತ ಸರಕಾರದ ಜವಳಿ ಸಚಿವಾಲಯ, ಶಿಲ್ಪಕಲಾ ವಿಭಾಗದ ಅಭಿವೃದ್ಧಿ ಆಯುಕ್ತರ ಕಚೇರಿ, ಅಸ್ಸಾಂ ರಾಜ್ಯ ಬಂಬೂ ಮಿಷನ್ , ನವದೆಹಲಿಯ ರಾಷ್ಟ್ರೀಯ ಕರಕುಶಲ ಮ್ಯೂಸಿಯಂ ಹಾಗೂ ಹಸ್ತಕಲಾ ಅಕಾಡೆಮಿ ಜಂಟಿಯಾಗಿ ದೆಹಲಿಯಲ್ಲಿಆಯೋಜಿಸಿರುವ 10 ದಿನ ರಾಷ್ಟ್ರೀಯ ಕಾರ್ಯಾಗಾರಕ್ಕೆ ನಗರದ ಶಿಲ್ಪ ಕಲಾವಿದೆ ಗಾಯತ್ರಿ ಸಿ.ಶಿಲ್ಪಿ ಆಯ್ಕೆಯಾಗಿದ್ದಾರೆ.
ಫೆ.23ರಿಂದ ಮಾ.4ರವರೆಗೆ ಕಾರ್ಯಾಗಾರ ನಡೆಯಲಿದ್ದು, ಮರ, ಬಿದಿರು ಮತ್ತು ಇತರ ವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ರಾಜ್ಯದಿಂದ ಈ ಕಾರ್ಯಾಗಾರದಲ್ಲಿಇಬ್ಬರು ಆಯ್ಕೆಯಾಗಿದ್ದು, ಗಾಯತ್ರಿ ಕಲ್ಯಾಣ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಕಲಾವಿದೆಯಾಗಿದ್ದಾರೆ. ಶಿಲ್ಪಕಲೆಯಲ್ಲಿತಮ್ಮ ರಚನೆಗಳನ್ನು ಮಾಡುತ್ತಾ ಬಂದಿರುವ ಗಾಯತ್ರಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.

