23ನರೇಗಲ್ಲ1
ಆರಾಧನೆಯಿಂದ ಮನಸ್ಸಿನ ಕಲ್ಮಷ ನಾಶ
ವಿಕ ಸುದ್ದಿಲೋಕ ನರೇಗಲ್ಲ
ದೇವಸ್ಥಾನಗಳಲ್ಲಿನ ದೇವರಿಗೆ ಅಲಂಕರಿಸಿ ಪೂಜಿಸುವುದರೊಂದಿಗೆ ಸಾಕಾರ ಮೂರ್ತಿಯನ್ನಾಗಿಸುವ ಕಾರ್ಯವೇ ಅರ್ಚಕರ ಕಾಯಕ ಎಂದು ಆನಂದರಾವ ಕಾಳೆ ಹೇಳಿದರು.
ಇಲ್ಲಿನ ಈಶ್ವರೀಯ ವಿಶ್ವವಿದ್ಯಾಯದಿಂದ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಅರ್ಚಕರ ಸನ್ಮಾನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ದೇವನೊಬ್ಬ ನಾಮ ಹಲವು ಎಂಬಂತೆ ದೇವರ ನಾಮಾಂಕಿತರ ಸ್ಮರಣೆ ಮಾತ್ರ ಒಂದೆ ಆಗಿರುತ್ತದೆ. ಅಂತ ಶಿವನ ಆರಾಧನೆಯೆ ಶಿವರಾತ್ರಿಯ ವಿಶೇಷವಾಗಿದೆ ಎಂದರು.
ಈಶ್ವರೀಯ ವಿವಿ ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ಶಿವಸ್ತುತಿ, ಶಿವಭಜನೆ, ಶಿವನೃತ್ಯ ಹೀಗೆ ಹಲವಾರು ವಿಧದಲ್ಲಿಸಾರ್ವಜನಿಕರು ಶಿವನ ಆರಾಧನೆ ಮಾಡುತ್ತ ಮನಸ್ಸಿನ ಕಲ್ಮಷ ಹೊಡೆದೊಡಿಸುವ ಕಾರ್ಯವೆ ಶಿವರಾತ್ರಿ.
ಬಾಬಣ್ಣ ಕಾಳೆ, ನಾಗರಾಜ ನಾಡಗೇರ, ದೇವೇಂದ್ರಪ್ಪ ಚಳ್ಳಮರದ, ಯಮನೂರಪ್ಪ ಪಾದಗಟ್ಟಿ, ಸದಾನಂದ ಬಡಿಗೇರ, ದೊಡ್ಡಯ್ಯ ಗೊಂಡುಗೋಪುರಮಠ ಉಪಸ್ಥಿತರಿದ್ದರು. ಗೀತಾ ಭೋಪಳಾಪೂರ ನಿರ್ವಹಿಸಿದರು.
ಪೋಟೋ ಶಿರ್ಷಿಕೆ23 ನರೇಗಲ್ಲ1:::::
ನರೇಗಲ್ಲಈಶ್ವರೀಯ ವಿಶ್ವವಿದ್ಯಾಯದಿಂದ ಅರ್ಚಕರನ್ನು ಸನ್ಮಾನಿಸಲಾಯಿತು.

