ಚಲಿಸುತ್ತಿರುವ ಕಾರಿನ ಮೇಲೆ ಬಿದ್ದ ಮರ

Contributed bympadmanabha51@gmail.com|Vijaya Karnataka

A moving car was crushed when a large tree fell on it in Bengamala. The occupants of the Swift Desire car, including a State Bank manager and another staff member, sustained minor injuries. They were returning to Sulya after a collection trip. The incident caused a traffic halt for about half an hour.

huge tree falls on moving car on sonangeribellare road car mangled two passengers miraculously escape

ಪ್ರಯಾಣಿಕರು ಪವಾಡ ಸದೃಶ ಪಾರು

ವಿಕ ಸುದ್ದಿಲೋಕ ಸುಳ್ಯ

ಸೋಣಂಗೇರಿ- ಬೆಳ್ಳಾರೆ ರಸ್ತೆಯ ಬೇಂಗಮಲೆಯಲ್ಲಿಚಲಿಸುತ್ತಿರುವ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂ ಆದ ಹಾಗೂ ಅದರಲ್ಲಿದ್ದ ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ನಡೆದಿದೆ.

ಸುಳ್ಯದ ಉಮ್ಮರ್ ಎಂಬವರ ಸ್ವಿಫ್ಟ್ ಡಿಸೈರ್ ಕಾರಿನಲ್ಲಿಸುಳ್ಯ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ಉತ್ಸವ್ ಚಕ್ರವರ್ತಿ ಹಾಗೂ ಮತ್ತೊಬ್ಬ ಸಿಬ್ಬಂದಿ ಜತೆ ಸಾಲ ವಸೂಲಾತಿಗಾಗಿ ಪಂಜಕ್ಕೆ ಹೋಗಿ ಬೆಳ್ಳಾರೆಯಿಂದ ಸುಳ್ಯಕ್ಕೆ ಹಿಂತಿರುಗಿ ಬರುತ್ತಿದ್ದ ವೇಳೆ ಬೇಂಗಮಲೆಯಲ್ಲಿರಸ್ತೆಬದಿಯಲ್ಲಿದ್ದ ದೊಡ್ಡ ಚೇರೆ ಮರ ಕಾರಿನ ಮೇಲೆ ಬಿದ್ದಿದೆ. ಕಾರು ಭಾಗಶಃ ನುಜ್ಜುಗುಜ್ಜಾಗಿದೆ. ಕಾರಲ್ಲಿದ್ದ ಇಬ್ಬರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಅವರನ್ನು ಬೇರೆ ಕಾರಲ್ಲಿಸುಳ್ಯಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಯಿತು. ಮರ ಬಿದ್ದ ಪರಿಣಾಮ ಸುಮಾರು ಅರ್ಧ ಗಂಟೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸಾರ್ವಜನಿಕರು ಸೇರಿ ಮರದ ಗೆಲ್ಲುಗಳನ್ನು ಕಡಿದು ತೆಗೆದು ವಾಹನ ಸಂಚಾರ ಸುಗಮಗೊಳಿಸಿದರು.

ಫೋಟೋ

23ಎಸ್ ಯುಎಲ್ - ಮರ ಬಿದ್ದು ಜಖಂಗೊಂಡ ಕಾರು.