ಮನ್ರೇಗಾ ಸಮಾವೇಶದ ಸೈಡ್ ಲೈಟ್ಸ್

Contributed bychandregowda.n@timesofindia.com|Vijaya Karnataka

ಮನ್ರೇಗಾ ಬಚಾವ್‌ ಆಂದೋಲನ ಪ್ರತಿಭಟನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಕೂಟರ್ ಚಲಾಯಿಸಿ ಗಮನ ಸೆಳೆದರು. ಕಾರ್ಯಕ್ರಮ ತಡವಾಗಿ ಆರಂಭವಾದ ಕಾರಣ ಜನಸಂದಣಿ ಕಡಿಮೆಯಾಯಿತು. ಊಟದ ವ್ಯವಸ್ಥೆ ವಿಫಲವಾಯಿತು. ಪೊಲೀಸರ ವರ್ತನೆ ಮತ್ತು ಟ್ರಾಫಿಕ್ ಜಾಮ್ ಜನರಿಗೆ ಕಿರಿಕಿರಿ ಉಂಟುಮಾಡಿತು. ಗಣ್ಯರ ಭದ್ರತೆಗೆ ಆದ್ಯತೆ ನೀಡಲಾಯಿತು.

dk shivakumar rides scooter at mgnrega protest meeting

ಸ್ಕೂಟರ್ ಚಲಾಯಿಸಿದ ಡಿಕೆಶಿ

ಮನ್ರೇಗಾ ಬಚಾವ್ ಆಂದೋಲನ ಪ್ರತಿಭಟನಾ ಸಮಾವೇಶಕ್ಕೂ ಮುನ್ನ ಎಸ್ ಜೆಸಿಐಟಿ ಹೆಲಿಪ್ಯಾಡ್ ನಿಂದ ಕಾರ್ಯಕ್ರಮದ ವೇದಿಕೆವರೆಗೂ ಯುವ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಅಧ್ಯಕ್ಷ , ಡಿಸಿಎಂ ಶಿವಕುಮಾರ್ ಸ್ಕೂಟರ್ ಚಲಾಯಿಸಿ ಗಮನ ಸೆಳೆದರು.

ಯುವ ಕಾಂಗ್ರೆಸ್ ಕಾರ್ಯಕರ್ತರ ಜತೆ ತಾವೇ ಸ್ಕೂಟರ್ ಚಲಾಯಿಸುವ ಜತೆಗೆ ವಿಬಿ ಜಿ ರಾಮ್ ಜಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಮನ್ರೇಗಾ ಬಚಾವ್ ಆಂದಲೋನದ ಪ್ರತಿಭಟನೆಯಲ್ಲಿಭಾಗಿಯಾದರು. ಡಿ.ಕೆ. ಶಿವಕುಮಾರ್ ಅವರು ಮಾತ್ರ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರು. ಆದರೆ ಅವರ ಜತೆ ಬೈಕ್ ಚಲಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಲ್ಮೆಟ್ ಹಾಕದೆ ಬೇವಾಬ್ದಾರಿತನ ಪ್ರದರ್ಶಿಸಿದ್ದು ಟೀಕೆಗೆ ಕಾರಣವಾಯಿತು.

ಮಧ್ಯದಲ್ಲೇ ಎದ್ದೋದ ಜನ

ನಿಗದಿಯಂತೆ ಮನ್ರೇಗಾ ಬಚಾವ್ ಆಂದೋಲನ ಮಧ್ಯಾಹ್ನ 12 ಗಂಟೆಯೊತ್ತಿಗೆ ಶುರುವಾಗಬೇಕಿತ್ತು. ಜನರು ಬಂದಿದ್ದರು. ಆದರೆ ಸಿಎಂ ಮತ್ತು ಡಿಸಿಎಂ ಬರುವ ಹೊತ್ತಿಗೆ ಮಧ್ಯಾಹ್ನ 1.45 ಆಗಿತ್ತು. ಹೀಗಾಗಿ ಕಾದು ಕಾದು ಸುಸ್ತಾದ ಜನ ಕಾಲ್ಕಿತ್ತಿದ್ದರು. ಡಿಸಿಎಂ ಶಿವಕುಮಾರ್ ಭಾಷಣದ ನಂತರ ಜನರು ಜಾಗ ಖಾಲಿ ಮಾಡಲು ಶುರು ಮಾಡಿದರು. ಕೊನೆಯಲ್ಲಿಸಿಎಂ ಸಿದ್ದರಾಮಯ್ಯ ಮಾತನಾಡುವ ವೇಳೆಗೆ ಸಾಕಷ್ಟು ಮಂದಿ ಹೊರಟು ಹೋಗಿದ್ದರು. ಇದನ್ನು ಪ್ರಸ್ತಾಪಿಸಿದ ಸಿಎಂ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳಿ.. ಬಂದು ಹೋದವರು ಸಮಾರಂಭದಲ್ಲಿಉಳಿದಿರುವವರಿಗೆ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಊಟ ತಿನ್ನೋರು ಇರಲಿಲ್ಲ

ಸಮಾವೇಶ ಮಧ್ಯಾಹ್ನ 12ಕ್ಕೆ ಶುರುವಾಗಬೇಕಿತ್ತು. ಮಾಧ್ಯಾಹ್ನ 1.30 ಗಂಟೆಯಾದರೂ ಸಿಎಂ, ಡಿಸಿಎಂ ಬಾರದ ಕಾರಣ ಜನರು ಹೊರಡಲು ಸಿದ್ಧರಾಗಿದ್ದರು. ಆದರೆ ಊಟದ ಕೌಂಟರ್ ಗಳಿಗೆ ಜನರು ಹೋಗಿ ಬಿಡುತ್ತಾರೆ ಎನ್ನುವ ಕಾರಣಕ್ಕೆ ತೆರೆದಿರಲಿಲ್ಲ. ಹೀಗಾಗಿ ಊಟ ತಿನ್ನದೆಯೇ ಜನರು ಹೊರಟು ಹೋಗಿದ್ದರು. ಮಧ್ಯಾಹ್ನ 2.30ರ ನಂತರ ಊಟದ ಕೌಂಟರ್ ಗಳನ್ನು ತೆರೆದರಾದರೂ ಜನರು ಯಾರೂ ಊಟಕ್ಕೆ ಬರಲೇ ಇಲ್ಲ. ಊರುಗಳಿಗೆ ವಾಪಸ್ ಆಗುವ ಧಾವಂತದಲ್ಲಿಜಾಗ ಖಾಲಿ ಮಾಡಿದ್ದರಿಂದ ಕ್ವಿಂಟಾಲ್ ಗಟ್ಟಲೆ ಹಾಗೇ ಉಳಿದಿತ್ತು.

ಪೊಲೀಸರ ಕಿರಿಕಿರಿ

ಗಣ್ಯಾತಿಗಣ್ಯರಿಗೆ ಅದ್ಧೂರಿ ಸ್ವಾಗತ ಕಮಾನು ಮಾಡಿದ್ದರು. ಒಳ್ಳೆಯ ರಸ್ತೆ ಮಾಡಿದ್ದರು. ಆದರೆ ಜನರ ಪ್ರವೇಶಕ್ಕೆ ಮಾತ್ರ ಸರಿಯಾದ ಪ್ರವೇಶ ದ್ವಾರವೇ ಇರಲಿಲ್ಲ. ಜನರು ಕಾಂಪೌಂಡ್ ಗಳನ್ನು ದಾಟಿ ಹೋಗುತ್ತಿದ್ದರು. ಖಾಲಿ ಜಾಗವಿದ್ದ ಕಡೆಯಲ್ಲನೂಕುತ್ತಿದ್ದರು. ಪೊಲೀಸರು ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಇದ್ದರು. ವಿಐಪಿಗಳಿಗಷ್ಟೇ ಭದ್ರತೆ ಬಗ್ಗೆ ಗಮನ ಹರಿಸಿದ್ದ ಪೊಲೀಸರು ಜನರನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದರು, ಕೆಲವರನ್ನು ಹಿಡಿದೆಳೆದು ಹಾಕುತ್ತಿದ್ದರು. ಜನರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡದೆ ಬಾಯಿಗೆ ಬಂದಂತೆ ಬೈದು ಕಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಟ್ರಾಫಿಕ್ ಜಾಮ್

ಕಾರ್ಯಕ್ರಮ ಆರಂಭ, ಅಂತ್ಯದಲ್ಲಿಎನ್ ಎಚ್ 44ರ ಒಂದು ಕಡೆಯ ರಸ್ತೆಯಲ್ಲಿಗಂಟೆಗಟ್ಟಲೇ ವಿಐಪಿಗಳ ಸಂಚಾರಕ್ಕೆ ಬಂದ್ ಮಾಡಿದ್ದರಿಂದ ಕಿ.ಮೀ.ಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಕಾದು ಕಾದು ಸುಸ್ತಾದವರು ಬೇಡಿಕೊಂಡರೂ ಅವಕಾಶ ನೀಡಲಿಲ್ಲ, ಹೀಗಾಗಿ ಜನಸಾಮಾನ್ಯರು ಪೊಲೀಸರು ಹಾಗೂ ಗಣ್ಯರಿಗೆ ಹಿಡಿಶಾಪ ಹಾಕುತ್ತಿದ್ದರು.

23ಸಿಬಿಪಿಫೋಟೋ07

ಚದಲಪುರ ಕ್ರಾಸ್ ಬಳಿ ಮನ್ರೇಗಾ ಬಚಾವ್ ಆಂದೋಲನದ ಮುನ್ನ ಯುವ ಕಾಂಗ್ರೆಸ್ ಕಾರ್ಯಕರ್ತರ ಜತೆ ಸ್ಕೂಟರ್ ಚಲಾಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

23ಸಿಬಿಪಿಫೋಟೋ08

ಸಿಎಂ ಭಾಷಣಕ್ಕೂ ಮುನ್ನ ವೇದಿಕೆಯಲ್ಲಿಖಾಲಿ ಚೇರ್ ಗಳ ದರ್ಶನ

23ಸಿಬಿಪಿಫೋಟೋ09

ಖಾಲಿ ಹೊಡೆಯುತ್ತಿರುವ ಊಟದ ಕೌಂಟರ್ ಗಳು

23ಸಿಬಿಪಿಫೋಟೋ10

ರಾಷ್ಟ್ರೀಯ ಹೆದ್ದಾರಿಯಲ್ಲಿಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್