ವಿಕ ಸುದ್ದಿಲೋಕ ಮಂದಾರ್ತಿ
ಬ್ರಹ್ಮಾವರ ಎಸ್ ಎಂಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್ ) ಘಟಕದ ವಾರ್ಷಿಕ ವಿಶೇಷ ಶಿಬಿರಕ್ಕೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಫ್ರೌಢಶಾಲೆಯಲ್ಲಿಚಾಲನೆ ದೊರೆಯಿತು.
ಬ್ರಹ್ಮಾವರ ಎಸ್ ಎಂಎಸ್ ಕಾಲೇಜಿನ ಸಂಚಾಲಕ ರೆ.ಫಾ.ಎಂ.ಸಿ.ಮಥಾಯಿ ಅಧ್ಯಕ್ಷತೆ ವಹಿಸಿದ್ದರು. ಮಂದಾರ್ತಿ ದೇವಸ್ಥಾನದ ಅಧ್ಯಕ್ಷ ಎಚ್ .ಧನಂಜಯ ಶೆಟ್ಟಿ, ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ.ರೋಬರ್ಟ್ ರೊಡ್ರಿಗಸ್ , ಸಹಕಾರಿ ಧುರೀಣ ಶೆಡಿಕೋಡ್ಲುವಿಠ್ಠಲ್ ಶೆಟ್ಟಿ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ್ ಶೆಟ್ಟಿ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಸಕಾರಾಮ ಸೋಮಯಾಜಿ, ಪಂಚಾಯಿತಿ ಸದಸ್ಯ ಪ್ರವೀಣ್ ಶೆಟ್ಟಿ, ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನಾರಾಯಣ ಮಣೂರು, ಯೋಜನಾಧಿಕಾರಿ ಪ್ರಕಾಶ್ , ಸಹ ಯೋಜನಾಧಿಕಾರಿ ಡಾ.ಮಂಜುನಾಥ್ ಉಡುಪ ಮತ್ತು ಕುಮಾರಿ ರಂಜಿನಿ ಉಪಸ್ಥಿತರಿದ್ದರು.
ಶಿಬಿರದ ಅವಧಿಯಲ್ಲಿಸ್ವಚ್ಛತಾ ಅಭಿಯಾನ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಜಾಗೃತಿ ಶಿಬಿರಗಳು ಹಾಗೂ ನಾನಾ ಸಮಾಜಮುಖಿ ಚಟುವಟಿಕೆಗಳು ನಡೆಯಲಿದೆ. ಯೋಜನಾಧಿಕಾರಿ ಪ್ರಸನ್ನ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿಎನ್ನೆಸ್ಸೆಸ್ ನಾಯಕ ನಂದನ್ ಹಾಗೂ ಧನ್ವಂತರಿ ಕಾರ್ಯಕ್ರಮ ನಿರೂಪಿಸಿದರು.
ಫೋಟೋಫೈಲ್ 23ಎಮ್ ಎಮ್ ಮಂದಾರ್ತಿ
ಫೋಟೋಕ್ಯಾಪ್ಷನ್ ಮಂದಾರ್ತಿ ದೇವಸ್ಥಾನದ ಅಧ್ಯಕ್ಷ ಎಚ್ . ಧನಂಜಯ ಶೆಟ್ಟಿ, ಶಿಬಿರವನ್ನು ಉದ್ಘಾಟಿಸಿದರು.

