ಬಿರು ಬಿಸಿಲಿನ ಮಧ್ಯೆ ಜೋರಾದ ಮಳೆ

Contributed byravideshpande77@gmail.com|Vijaya Karnataka

ಬಾಗಲಕೋಟೆ ಜಿಲ್ಲೆಯ ಅಮೀನಗಡ, ಶಿರೂರು, ಕಮತಗಿ, ಐಹೊಳೆ ಸುತ್ತಮುತ್ತ ಸೋಮವಾರ ಮಧ್ಯಾಹ್ನ ಜೋರಾದ ಮಳೆ ಸುರಿಯಿತು. ಅರ್ಧ ಗಂಟೆ ಕಾಲ ಸುರಿದ ಮಳೆ ಗಾಳಿಯೊಂದಿಗೆ ಬಂದು ತಂಪು ನೀಡಿತು. ರಾಜ್ಯ ಹೆದ್ದಾರಿಯಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬೇವೂರು ಸುತ್ತಮುತ್ತ ಜಿಟಿಜಿಟಿ ಮಳೆಯಾಯಿತು. ಉಳಿದಂತೆ ಜಿಲ್ಲೆಯ ಬಹುತೇಕ ಕಡೆ ಬಿಸಿಲು ಮುಂದುವರಿದಿದೆ.

amidst the summer heat joyful rain in the district

ಬಿರು ಬಿಸಿಲಿನ ಮಧ್ಯೆ ಜೋರಾದ ಮಳೆ

ಬಾಗಲಕೋಟೆ: ಬೇಸಿಗೆಯ ಬಿರು ಬಿಸಿಲಿನ ಮಧ್ಯೆ ಜಿಲ್ಲೆಯ ಕೆಲವೆಡೆ ಸೋಮವಾರ ಮಧ್ಯಾಹ್ನ ಬಿರುಸಿನಿಂದ ಮಳೆ ಆಗಿದೆ.

ಜಿಲ್ಲೆಯ ಅಮೀನಗಡ, ಶಿರೂರು, ಕಮತಗಿ, ಐಹೊಳೆ ಸುತ್ತಮುತ್ತ ಜೋರಾದ ಗಾಳಿ ಸಮೇತ ಅರ್ಧ ಗಂಟೆ ಮಳೆ ಸುರಿದಿದೆ. ಮಧ್ಯಾಹ್ನ 4 ಗಂಟೆಗೆ ಗುಡುಗು, ಮಿಂಚು, ಗಾಳಿಯೊಂದಿಗೆ ಸುರಿದ ಮಳೆ ಇಳೆಗೆ ಕೊಂಚ ತಂಪು ನೀಡಿತು.

ಬಿಸಿಲಿನ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮಧ್ಯೆಯೂ ಸುರಿದ ಮಳೆ ಸಮಾಧಾನ ನೀಡಿತು. ಹವಾಮಾನ ಇಲಾಖೆ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಾಗಿತ್ತು.

ಅಮೀನಗಡದಲ್ಲಿಅರ್ಧ ಗಂಟೆ ಸುರಿದ ಮಳೆಗೆ ರಾಜ್ಯ ಹೆದ್ದಾರಿಯಲ್ಲೆಲ್ಲನೀರು ಹರಿದು ವಾಹನ ಸವಾರರಿಗೆ ಕೊಂಚ ಅಡೆತಡೆಯಾಯಿತು. ಗುಡ್ಡದ ವಾರಿಯುದ್ದಕ್ಕೂ ವ್ಯಾಪಿಸಿರುವ ಅಮೀನಗಡದಲ್ಲಿಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ರಾಜ್ಯ ಹೆದ್ದಾರಿಯುದ್ದಕ್ಕೂ ಹರಿಯುವಂತಾಯಿತು. ಕಮತಗಿ ಸುತ್ತ ಅರ್ಧ ಗಂಟೆ ಮಳೆಯಾಯಿತು. ಬೇವೂರು ಸುತ್ತಮುತ್ತ ಜಿಟಿಜಿಟಿ ಮಳೆ ಆಯಿತು. ಉಳಿದಂತೆ ಜಿಲ್ಲೆಯ ಬಹುತೇಕ ಕಡೆ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಮುಂದುವರಿದಿದೆ.

ಫೋಟೊ

ರೇನ್ -ಬಿಜಿಕೆ-23, -1

ಅಮೀನಗಡದಲ್ಲಿಸೋಮವಾರ ಮಧ್ಯಾಹ್ನ ಸುರಿದ ಮಳೆ.