ಮಸ್ಕಿ-ಚಾಲಕರ ಚೆಲ್ಲಾಟ ಪ್ರಯಾಣಿಕರ ಸಂಕಟ

Contributed byazizvk51@gmail.com|Vijaya Karnataka

ಮಸ್ಕಿಯಲ್ಲಿ ಬಸ್‌ ಚಾಲಕರ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಳೆ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸದೆ ಅಶೋಕ ವೃತ್ತದ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ವಯೋವೃದ್ಧರು, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕರು ಈ ಬಗ್ಗೆ ಗಮನಹರಿಸಿ, ಹಳೆ ಬಸ್‌ ನಿಲ್ದಾಣದಲ್ಲೇ ಬಸ್‌ ನಿಲ್ಲಿಸಲು ಆದೇಶ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

bus stop issue for students in maski police and public urge ministers and officials to take action

ಚಾಲಕರ ಚೆಲ್ಲಾಟ, ಪ್ರಯಾಣಿಕರ ಸಂಕಟ

* ಮಸ್ಕಿ ಹಳೆ ಬಸ್ ನಿಲ್ದಾಣ ಬಳಿ ಬಸ್ ನಿಲುಗಡೆಗೆ ಜಧಿನರ ಪ್ರಧಿಯಾಧಿಣಿಧಿಕರ ಆಧಿಗ್ರಧಿಹ

ವಿಕ ಸುಧಿದ್ದಿಧಿಲೋಧಿಕ ಮಸ್ಕಿ

ಇಲ್ಲಿಯ ಹಳೆ ಬಸ್ ನಿಲ್ದಾಣ ಬಳಿ ಸಾರಿಗೆ ಬಸ್ ಗಳನ್ನು ನಿಲುಗಡೆ ಮಾಡದ ಕಾರಣ ಪ್ರಯಾಣಿಕರು ಸಂಕಟ ಪಡುತ್ತಿದ್ದಾರೆ.

ಬಸ್ ಡಿಪೊ ಚಾಲಕರು ಹಳೆ ಬಸ್ ನಿಲ್ದಾಣ ಬಳಿ ಬಸ್ ನಿಲುಗಡೆ ಮಾಡುತ್ತಿದ್ದರೆ, ಕೆಲ ಚಾಲಕರು ಬಸ್ ನಿಲ್ಲಿಸದೆ ಅಶೋಕ ವೃತ್ತ ಬಳಿ ನಿಲ್ಲಿಸಿ ಪ್ರಯಾಣಿಕರ ಜತೆ ಚೆಲ್ಲಾಟ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ಹಳೆ ಬಸ್ ನಿಲ್ದಾಣ ಬಳಿ ಬೇರೆ ತಾಲೂಕುಗಳ ಬಸ್ ಗಳು ನಿಲುಗಡೆಯಾಧಿಗುಧಿತ್ತಧಿವೆ. ಇಲ್ಲಿಯ ಡಿಪೊ ಬಸ್ ಗಳನ್ನು ನಿಲುಗಡೆ ಮಾಡದ ಕಾರಣ ಪ್ರಯಾಣಿಕರು ತೊಂದರೆಪಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಾಸಕ ಬಸನಗೌಡ ತುರುವಿಹಾಳ ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್ ನಲ್ಲಿಸಿಲುಕಿತ್ತು. ಶಾಸಕರಿಗೆ ಟ್ರಾಫಿಕ್ ಬಿಸಿ ತಟ್ಟಿದ ಕಾರಣ ಪೊಲೀಸ್ , ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ತಾಲೂಕಾಡಳಿತದ ಅಧಿಕಾರಿಗಳು ಸಭೆ ನಡೆಸಿ ಹಳೆ ಬಸ್ ನಿಲ್ದಾಣ ಬಳಿ ಬಸ್ ನಿಲುಗಡೆ ಮಾಡದೆ ಅನತಿ ದೂರದ ಅಶೋಕ ವೃತ್ತ ಬಳಿ ಬಸ್ ನಿಲ್ಲಿಸಲು ಆಧಿದೇಧಿಶ ಹೊರಡಿಸಿದ್ದರು. ಹಲವು ವರ್ಷಗಳಿಂದ ಹಳೆ ಬಸ್ ನಿಲ್ದಾಣ ಪ್ರಯಾಣಿಕರಿಗೆ ಮೂಲ ನಿಲ್ದಾಣವಾಗಿದ್ದು ವಯೋವೃದ್ದರು, ಮಹಿಳೆಯರು ಹಳೆ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುತ್ತಾರೆ. ಶಾಸಕರ ಕಾಧಿರು ಟ್ರಾಫಿಕ್ ನಲ್ಲಿಸಿಲುಕಿದರೆ ಅದಕ್ಕೆ ಪ್ರಯಾಣಿಕರು ಹೊಣೆ ಅಲ್ಲಎಂದು ಸಾರ್ವಜನಿಕರು ಅಧಿಕಾರಿಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಳೆ ಬಸ್ ನಿಲ್ದಾಣ ಬಳಿ ಬಸ್ ನಿಲುಗಡೆ ಮಾಡಲು ಶಾಸಕ ಬಸನಗೌಡ ತುರುವಿಹಾಳ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

*ಆರ್ ಸಿಎಚ್ 23 ಎಂಎಸ್ಕೆ ಪೋಟೋ 02

ಮಸ್ಕಿಯ ಅಶೋಕ ವೃತ್ತದ ಬಳಿ ಬಸ್ ನಿಲುಗಡೆ ಮಾಡಿರುವುದು.