(ಧಿಪ್ರಧಿಮುಧಿಖ..ಧಿ) ಶಾಸಕ ವೀರೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ದೂರು

Contributed byGirish J.R|Vijaya Karnataka

The Enforcement Directorate has filed an additional complaint against Congress MLA Virendra Pappi and his associates. They are accused of online betting fraud and illegal money transfers. The investigation reveals a scam involving approximately 2,300 crore rupees. The ED has already seized assets worth 320 crore rupees.

2300 crore online betting scam ed files additional prosecution complaint against congress mla veerendra pappi

* ಬೆಟ್ಟಿಂಗ್ ಅಕ್ರಮ

ವಿಕ ಸುದ್ದಿಲೋಕ ಬೆಂಗಳೂರು

ಆನ್ ಲೈನ್ ಬೆಟ್ಟಿಂಗ್ ಅವ್ಯವಹಾರ ಹಾಗೂ ಹಣದ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮತ್ತು ಅವರ ಸಹಚರರ ವಿರುದ್ಧ ಹೆಚ್ಚುವರಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.

ವೀರೇಂದ್ರ ಪಪ್ಪಿ ಅವರೊಂದಿಗೆ ಅಕ್ರಮದಲ್ಲಿಭಾಗಿಯಾದ ಆರೋಪದಡಿ ಪೃಥ್ವಿ ಎನ್ .ರಾಜ್ , ಕೆ.ಸಿ.ತಿಪ್ಪೇಸ್ವಾಮಿ, ಗುಲ್ಶಾನ್ ಕಟ್ಟಾರ್ , ಅರ್ಜುನ್ ನಾಗಭೂಷಣ್ , ಅಭಿಜಿತ್ ಸಜ್ಜನ್ , ಫೋನ್ ಪೈಸಾ ಪೇಮೆಂಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲಾಜಿಕ್ ಫೋಜ್ ರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಿರುದ್ಧ ಹೆಚ್ಚುವರಿ ಪ್ರಾಸಿಕ್ಯೂಷನ್ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಆರೋಪಿಗಳು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ನೆರವಿನಿಂದ ಬೆಟ್ಟಿಂಗ್ ಆ್ಯಪ್ ಗಳಲ್ಲಿಎದುರಾಳಿ ಸ್ಪರ್ಧಿ ಇರುವುದಾಗಿ ಬಿಂಬಿಸಿ ಸಾರ್ವಜನಿಕರಿಂದ ಬೆಟ್ಟಿಂಗ್ ಕಟ್ಟಿಸಿಕೊಂಡು ವಂಚಿಸಿದ್ದಾರೆ. ಹಣ ವರ್ಗಾಯಿಸಲು ವಿವಿಧ ಪೇಮೆಂಟ್ ಗೇಟ್ ವೇ ಕಂಪನಿಗಳ ಮ್ಯೂಲ್ ಖಾತೆಗಳನ್ನು ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಟ್ಟಿಂಗ್ ಅಕ್ರಮದಲ್ಲಿಸುಮಾರು 2,300 ಕೋಟಿ ರೂ. ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್ ಎ) ಈವರೆಗೆ 320 ಕೋಟಿ ರೂ. ಆಸ್ತಿ ಜಪ್ತಿ ಮಾಡಲಾಗಿದೆ. ವಿವಿಧ ಪೇಮೆಂಟ್ ಗೇಟ್ ವೇ ಮೂಲಕ ಬಂದ ಹಣದಿಂದ ಆರೋಪಿಗಳು ದುಬೈನಲ್ಲಿಆಸ್ತಿ ಖರೀದಿಸಿದ್ದಾರೆ. ಅಲ್ಲದೆ, ಕ್ರಿಪ್ಟೊ ಕರೆನ್ಸಿಯಲ್ಲಿಹೂಡಿಕೆ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಹೆಚ್ಚುವರಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಿಂಗ್ 567, ಪ್ಲೇ 567 ಹಾಗೂ ಪ್ಲೇವಿನ್ 567 ಬೆಟ್ಟಿಂಗ್ ಜಾಲತಾಣಗಳ ಮೂಲಕ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಎಸಗಿದ ಆರೋಪದಡಿ ವೀರೇಂದ್ರ ಪಪ್ಪಿ ಮತ್ತು ಸಹಚರರ ಮನೆಗಳೂ ಸೇರಿದಂತೆ ದೇಶದೆಲ್ಲೆಡೆ ಸುಮಾರು 60 ಕಡೆ ಇ.ಡಿ ಅಧಿಕಾರಿಗಳು 2025ರ ಆಗಸ್ಟ್ ನಲ್ಲಿದಾಳಿ ನಡೆಸಿದ್ದರು. ದಾಳಿ ವೇಳೆ ಕೋಟ್ಯಂತರ ರೂ. ನಗದು, ಚಿನ್ನದ ಗಟ್ಟಿಗಳು ಹಾಗೂ ಐಷಾರಾಮಿ ಕಾರುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಲ್ಲದೆ, ವೀರೇಂದ್ರ ಅವರನ್ನು ಬಂಧಿಸಿ, ಅವರಿಗೆ ಸೇರಿದ ಸುಮಾರು 177.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರು.