ವಿಕ ಸುದ್ದಿಲೋಕ ಬೆಂಗಳೂರು ಕಾಂತಾರ ಚಾಪ್ಟರ್ -1 ಚಿತ್ರದ ದೈವಪಾತ್ರವಧಿನ್ನು ಅವಮಾನಿಸಲಾಗಿದೆ ಎಂಬ ಆರೋಪದ ಮೇಲೆ ನಗರದ ಮ್ಯಾಜಿಸ್ಪ್ರೇಟ್ ಕೋರ್ಟ್ ನಲ್ಲಿತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್ ಠಾಣಾ ಪೊಲೀಸರು ದಾಖಲಿಸಿರುವ ಎಫ್ ಐಆರ್ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ರಣವೀರ್ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದು, ನಗರದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಮತ್ತು ಪ್ರಕರಣದ ಖಾಸಗಿ ದೂರುದಾರ ಪ್ರಶಾಂತ್ ಮೆಥಲ್ ಅವರನ್ನು ಪ್ರತಿವಾದಿ ಮಾಡಿದ್ದಾರೆ. ಸೋಮವಾರ ರಣವೀರ್ ಪರ ವಕೀಲರು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಹಾಜರಾಗಿ, ‘ಧಿ‘ರಣವೀರ್ ಸಿಂಗ್ ಕಾಂತಾಧಿರ ಚಾಪ್ಟರ್ -1 ರ ಪಾತ್ರದಲ್ಲಿರಿಷಬ್ ಶೆಟ್ಟಿ ನಟನೆ ಕುರಿತು ಹೊಗಳಿ ಮಾತನಾಡಿದ್ದಾರೆ. ಆದರೆ, ಅವರ ಹೇಳಿಕೆ ತಿರುಚಿ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ. ಪ್ರಕರಣದಲ್ಲಿನ ಖಾಸಗಿ ದೂರುದಾರರು ವಕೀಲರಾಗಿದ್ದಾರೆ. ಅರ್ಜಿಯನ್ನು ಸೋಧಿಮಧಿವಾರ ಮಧ್ಯಾಹ್ನವೇ ತುರ್ತು ವಿಚಾ ರಣೆ ನಡೆಸಬೇಕು,’ಧಿ’ ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಧಿ‘ಏಕೆ ತುರ್ತು ವಿಚಾರಣೆ ನಡೆಸಬೇಕು? ಅರ್ಜಿದಾರರು ಬಾಲಿವುಡ್ ನಟರೆಂಬ ಕಾರಣಕ್ಕಾಗಿಯೇ? ಹಾಲಿವುಡ್ ನವರಾದರೆ ಈಗಲೇ ವಿಚಾರಣೆ ನಡೆಸಬೇಕಾ?,’ಧಿ’ ಎಂದು ಪ್ರಶ್ನಿಸಿದರು. ರಣವೀರ್ ಪರ ವಕೀಲರು, ಧಿ‘ಧಿ‘ಪೊಲೀಸರು ಅರ್ಜಿದಾರರಿಗೆ ಎರಡು ನೋಟಿಸ್ ಜಾರಿ ಮಾಡಿದ್ದಾರೆ. ಹಾಗಾಗಿ, ತುರ್ತು ವಿಚಾರಣೆಗೆ ಕೋರಲಾಗುತ್ತಿದೆ,’ಧಿ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಮನವಿಗೆ ಒಪ್ಪಿದ ನ್ಯಾಯಪೀಠವು, ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.

