ಬೆಂಗಳೂರು: ರಾಜ್ಯದ ಎಲ್ಲಾಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿಫೆ.28ಕ್ಕೆ ನಿಗದಿಪಡಿಸಿದ್ದ ಪೋಷಕರು-ಶಿಕ್ಷಕರ ಸಭೆಯನ್ನು ಮುಂದೂಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಫೆ.28ರ ಬದಲಾಗಿ ಮಾ. 7ರಂದು ಎಲ್ಲಾಶಾಲೆಗಳಲ್ಲಿನಿಯಮಾನುಸಾರ ಸಭೆ ನಡೆಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ಫೆ. 28ರಂದು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿಎಲ್ಲಾಶಿಕ್ಷಕರು, ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಭಾಗಿಯಾಗುವುದರಿಂದ ಸಭೆಯ ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸರಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ, ಸ್ಥಿತಿಗತಿ ತಿಳಿಯುವ ಜತೆಗೆ, ಪೋಷಕರು ಹಾಗೂ ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿಸರಕಾರ ಎಲ್ಲಾಶಾಲೆಗಳಲ್ಲೂಕಡ್ಡಾಯವಾಗಿ ಪೋಷಕರು-ಶಿಕ್ಷಕರ ಸಭೆ ನಡೆಸಲು ಸೂಚಿಸಿತ್ತು. ಈಗ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದ ಹಿನ್ನೆಲೆಯಧಿಲ್ಲಿಸಭೆಯ ದಿನಾಂಕ ಮರುನಿಗದಿಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ.

