ಮುಂದಿನ ವರ್ಷದಿಂದ ನೈತಿಕ ವಿಜ್ಞಾನ ಪಠ್ಯ

Contributed bydjtrupti@gmail.com|Vijaya Karnataka

Starting next academic year, students from grades 1 to 10 in Karnataka will receive moral science textbooks. This initiative aims to foster deeper understanding beyond just marks. Minister Madhu Bangarappa emphasized the importance of human values and discipline, drawing parallels with Japan's waste management.

from next year moral science textbooks made mandatory for classes 1 to 10 a new step to build human values and environmental awareness in students

ವಿಕ ಸುದ್ದಿಲೋಕ ಬೆಂಗಳೂರು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೈತಿಕ ವಿಜ್ಞಾನ ಪಠ್ಯಪುಸ್ತಕ ಪರಿಚಯಿಸಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಹಯೋಗದಲ್ಲಿವಿಕಾಸಸೌಧದಲ್ಲಿಸೋಮವಾರ ಆಯೋಜಿಸಿದ್ದ ‘ ಮಿಷನ್ ಪ್ರಕೃತಿ ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘‘ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಾಗಿ ಓದಬಾರದು. ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ತಾನಾಗಿಯೇ ಉತ್ತಮವಾಗುತ್ತದೆ,’’ ಎಂದು ಕಿವಿಮಾತು ಹೇಳಿದರು. ‘‘ತ್ಯಾಜ್ಯ ನಿರ್ವಹಣೆಯಲ್ಲಿಜಪಾನ್ ನಲ್ಲಿಕಸದ ಬುಟ್ಟಿಗಳು ಕಡಿಮೆ ಇದ್ದರೂ ಜನರು ತಮ್ಮ ಕಸವನ್ನು ತಾವೇ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡು ತ್ತಾರೆ. ಅಂತಹ ಶಿಸ್ತು ನಮ್ಮಲ್ಲಿಬರಬೇಕಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು,’’ ಎಂದು ಅಭಿಪ್ರಾಯಪಟ್ಟರು. ‘‘ವಿದ್ಯಾರ್ಥಿಗಳು ಸರಕಾರದಿಂದ ನೀಡುತ್ತಿರುವ ಬಿಸಿಯೂಟ, ರಾಗಿ ಮಾಲ್ಟ್ , ಹಾಲು, ಮೊಟ್ಟೆ ಹಾಗೂ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು,’’ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳಾದ ನಾಗಭೂಷಣ್ ಮತ್ತು ರೆಹಮಾನ್ ‘ಮಿಷನ್ ಪ್ರಕೃತಿ’ ಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ವನ್ಯಜೀವಿಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಮಹತ್ವವನ್ನು ಈ ಅಭಿಯಾನವು ತಮಗೆ ಹೇಗೆ ಕಲಿಸಿಕೊಟ್ಟಿತು ಎಂಬುದನ್ನು ವಿವರಿಸಿದರು. ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ , ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಸಿಇಒ ಕರಣ್ ಭಲ್ಲಾ, ನಾನಾ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಭಾಧಿಗಧಿವಧಿಹಿಧಿಸಿಧಿದ್ದಧಿರು.