ವಿಕ ಸುದ್ದಿಲೋಕ ಬೆಂಗಳೂರು ಎಂ.ಫಾರ್ಮಾ ಕೋರ್ಸ್ ಪ್ರವೇಶಕ್ಕೆ ಎರಡನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆಯ್ಕೆಗಳನ್ನು ದಾಖಲಿಸಲು ಫೆ.25ರಂದು ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ. ‘ಧಿ‘ಫೆ.25ರಂದು ಸಂಜೆ 8 ಗಂಟೆ ನಂತರ ತಾತ್ಕಾಲಿಕ ಹಾಗೂ ಫೆ.26ರಂದು ಮಧ್ಯಾಹ್ನ 2 ಗಂಟೆ ನಂತರ ಅಂತಿಮ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆ ಯಾದವರು ಫೆ.27ರಿಂದ ಮಾರ್ಚ್ 4ರವರೆಗೆ ಶುಲ್ಕ ಪಾವತಿಸಿ, ಪ್ರವೇಶಪತ್ರಗಳನ್ನು ಪಡೆಯಬೇಕು. ಮಾರ್ಚ್ 5ರೊಳಗೆ ಕಾಲೇಜುಗಳಲ್ಲಿವರದಿ ಮಾಡಿಕೊಳ್ಳಲು ಸೂಚಿಸ ಲಾಗಿದೆ,’ಧಿ’ ಎಂದು ಅವರು ತಿಳಿಸಿದ್ದಾಧಿರೆ. ‘ಧಿ‘ಮೊದಲ ಸುತ್ತಿನಲ್ಲಿಸೀಟು ಹಂಚಿಕೆಯಾಗಿ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳಿಗೆ ಈ ಸುತ್ತಿನಲ್ಲಿಭಾಗವಹಿಸಲು ಅವಕಾಶ ಇರುವುದಿಲ್ಲ. ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದಿರುವ ಹಾಗೂ ಕಾಲೇಜಿನಲ್ಲಿಪ್ರವೇಶ ಪಡೆಯದಿರುವ ಅಭ್ಯರ್ಥಿಗಳು 2ನೇ ಸುತ್ತಿನಲ್ಲಿಲಭ್ಯವಾಗುವ ಸೀಟುಗಳಿಗೆ ಆಯ್ಕೆ ದಾಖಲಿಸಬಹುದು,’ಧಿ’ ಎಂದು ಅವರು ವಿವರಿಸಿದ್ದಾರೆ. ವಿವರಗಳಿಗೆ ಪ್ರಾಧಿಕಾರದ ವೆಬ್ ಸೈಟ್ ಪರಿಶೀಲಿಸ
ಬಧಿಹುದು.

