ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕನೊಬ್ಬ ಶನಿವಾರ ಮೃತಪಟ್ಟರು. ಬೆಂಗಳೂರಿನ ಪಾಪಯ್ಯ ಗಾರ್ಡನ್ ನಿವಾಸಿ ಆರ್ .ವಿಜಯ್ ಕುಮಾರ್ ಅವರ ಪುತ್ರ ಭಾರ್ಗವ್ (22) ಮೃತ ಯುವಕ. ಬೆಂಗಳೂರಿನ ಬನಶಂಕರಿಯಲ್ಲಿಖಾಸಗಿ ಶಾಲೆಯಲ್ಲಿಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಈತ, ತನ್ನ ಎಂಟು ಮಂದಿ ಸ್ನೇಹಿತರೊಂದಿಗೆ ಆಟೋ ಮತ್ತು ಕಾರಿನಲ್ಲಿಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದರು. ಊಟ ಮುಗಿಸಿ ಕಾವೇರಿ ನದಿಯಲ್ಲಿಈಜಾಡಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ. ಹಲಗೂರು ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

