ರಾಂಚಿ: ದಿಲ್ಲಿಗೆ ಹೊರಟಿದ್ದ ಏರ್ ಆಂಬ್ಯುಲೆನ್ಸ್ ವೊಂದು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿಪತನಗೊಂಡ ದುರಂತ ಸೋಮವಾರ ರಾತ್ರಿ ಸಂಭವಿಸಿದೆ. ಛಾತ್ರ ಜಿಲ್ಲೆಯ ಸಿಮಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕರ್ಮಾತಾಂಡ ಗ್ರಾಮದ ಅರಣ್ಯ ಪ್ರದೇಶದಲ್ಲಿಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಆರಂಭಿಕ ಶೋಧಕಾರ್ಯದಲ್ಲಿಒಂದು ಮೃತದೇಹ ಪತ್ತೆಯಾಗಿದ್ದು, ಸಂಜಯ್ ಕುಮಾರ್ (41) ಎಂದು ಗುರುತಿಸಲಾಗಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿರಾಂಚಿಯಿಂದ 7.11ಕ್ಕೆ ಹಾರಿದ್ದ ವಿಮಾನವು ಕೇವಲ ನಾಲ್ಕು ನಿಮಿಷಗಳಲ್ಲಿಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಜತೆಗೆ ಸಂಪರ್ಕ ಕಳೆದುಕೊಂಡಿತ್ತು. ಕೋಲ್ಕೊತಾದ ರೆಡಾರ್ ಸಂಪರ್ಕವನ್ನು ಕೂಡ ಕಳೆದುಕೊಂಡಾಗ ವಿಮಾನ ಪತನವಾಗಿರುವ ಆತಂಕ ಶುರುವಾಗಿತ್ತು. ದಿಲ್ಲಿಗೆ ರಾತ್ರಿ 10 ಗಂಟೆಗೆ ವಿಮಾನವು ತಲುಪುವ ನಿರೀಕ್ಷೆಯಿತ್ತು.

