ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ

Contributed bytirupati8886@gmail.com|Vijaya Karnataka

ಮುದೇನೂರು ಗ್ರಾಮದಲ್ಲಿ ಎಂ.ಗೂಡದೂರಿನ ಶ್ರೀ ಗುರುದೊಡ್ಡ ಬಸವೇಶ್ವರರ ಜಾತ್ರೆಗೆ ತೆರಳುವ ಭಕ್ತರಿಗೆ ಅನ್ನ ಪ್ರಸಾದ ಹಾಗೂ ಆರೋಗ್ಯ ತಪಾಸಣೆ ನಡೆಯಿತು. ಸಜ್ಜಲಗುಡ್ಡದ ಶರಣಮ್ಮ ತಾಯಿ ಭಾವಚಿತ್ರದೊಂದಿಗೆ ದೊಡ್ಡಬಸವಾರ್ಯ ತಾತನವರ ಎತ್ತಿನ ಗಾಡಿ ಆಗಮಿಸಿತು. ಪಾದಯಾತ್ರೆ ಮೂಲಕ ಭಕ್ತರು ಎಂ.ಗೂಡದೂರಿಗೆ ತೆರಳಿದರು. ಉಪಾಹಾರ, ನೀರು ಹಾಗೂ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿತ್ತು.

a remarkable occasion at shri varada uma chandramouleshwar mangalyamandir food offering to thousands of devotees

ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ

ವಿಕ ಸುದ್ದಿಲೋಕ ಮುದೇನೂರು

ಗ್ರಾಮದ ಶ್ರೀ ವರದ ಉಮಾಚಂದ್ರಮೌಳೇಶ್ವರ ಮಾಂಗಲ್ಯ ಮಂದಿರದ ಸಂತೆ ಬಜಾರದಲ್ಲಿಭಕ್ತರಿಗೆ ಅನ್ನ ಪ್ರಸಾದ ಹಾಗೂ ಆರೋಗ್ಯ ತಪಾಸಣೆ ಸೋಮವಾರ ನಡೆಯಿತು.

ಎಂ.ಗುಡದೂರ ಗ್ರಾಮದಲ್ಲಿಮಂಗಳವಾರ ನಡೆಯಲಿರುವ ಶ್ರೀ ಗುರುದೊಡ್ಡ ಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ತೆರಳುವ ಭಕ್ತರಿಗೆ ಅನ್ನ ಪ್ರಸಾದ

ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು.

ಸಜ್ಜಲಗುಡ್ಡದ ಶ್ರೀ ಪೂಜ್ಯ ಶರಣಮ್ಮ ತಾಯಿ ಭಾವಚಿತ್ರದೊಂದಿಗೆ ಕಂಬಳಿಹಾಳದಿಂದ ದೊಡ್ಡಬಸವಾರ್ಯ ತಾತನವರ ಎತ್ತಿನ ಗಾಡಿ ಆಗಮನ ಹಾಗೂ

ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರು ಮುದೇನೂರು, ಮಾದಾಪೂರ, ರಾಮತ್ನಾಳ ಮಾರ್ಗವಾಗಿ ಎಂ.ಗೂಡದೂರ ಗ್ರಾಮಕ್ಕೆ ತೆರಳಿದರು.

ಉಪಾಹಾರ, ನೀರು ಹಾಗೂ ಸಮುದಾಯ ಆರೋಗ್ಯ ಕೇಂದ್ರದಿಂದ ಆರೋಗ್ಯ ತಪಾಸಣೆ ಮಾಡಿದರು.

ಗ್ರಾಮಕ್ಕೆ ಪ್ರವೇಶಿಸಿದ ಸಜ್ಜಲಗುಡ್ಡದ ಶರಣಮ್ಮ ತಾಯಿಯವರ ಭಾವ ಚಿತ್ರಕ್ಕೆ ರಸ್ತೆಯೂದ್ದಕ್ಕೂ ನೀರು ಸಿಂಪರಣೆ, ರಂಗೋಲಿ ಹಾಗೂ ಪೂಜೆ ಕಾರ್ಯ ನಡೆಯಿತು.

=========

ಪೋಟೊ ಶಿರ್ಷಿಕೆ

ಕೆಪಿಎಲ್ 23ಎಮಡಿಆರ್ 1-ಮುದೇನೂರು ಸಮೀಪದ ಎಂ.ಗೂಡದೂರಿನ ಜಾತ್ರೆಗೆ ಸಜ್ಜಲಗುಡ್ಡ ಶರಣಮ್ಮ ತಾಯಿ ಭಾವಚಿತ್ರ ಹಾಗೂ ಕಂಬಳಿಹಾಳ ಶ್ರೀ

ದೊಡ್ಡಬಸವಾರ್ಯ ತಾತನವರ ಎತ್ತಿನ ಗಾಡಿಯಲ್ಲಿಆಗಮಿಸಿದರು

2-ಮುದೇನೂರು ಗ್ರಾಮದಲ್ಲಿಎಂ.ಗೂಡದೂರಿನ ಜಾತ್ರೆಗೆ ತೆರಳುವ ಭಕ್ತರಿಗೆ ಅನ್ನಪ್ರಸಾದ ಹಾಗೂ ಆರೋಗ್ಯ ತಪಾಸಣೆ ಸೋಮವಾರ ನಡೆಯಿತು.