ಜ್ಯೋತಿ ಇಂಟರ್ ನ್ಯಾಷನಲ್ ಶಾಲೆ ವಾರ್ಷಿಕೋತ್ಸವ

Contributed byvishnu.kumar0075@gmail.com|Vijaya Karnataka

ಬೂದಿಕೋಟೆಯ ದಿ ಜ್ಯೋತಿ ಇಂಟರ್‌ ನ್ಯಾಷನಲ್‌ ಶಾಲೆಯ ವಾರ್ಷಿಕೋತ್ಸವ ನಡೆಯಿತು. ನಾಗಾನಂದ ಕೆಂಪರಾಜ್‌ ಅವರು ಶಾಲೆಯ ಸಾಧನೆಯನ್ನು ಶ್ಲಾಘಿಸಿದರು. ಪೋಷಕರ ಸಹಕಾರದಿಂದ ಮಕ್ಕಳು ಉತ್ತಮ ಫಲಿತಾಂಶ ತರುತ್ತಾರೆ ಎಂದರು. ಗ್ರಾಮೀಣ ಮಕ್ಕಳಿಗೂ ಉನ್ನತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

jyoti international school annual day 2023 a platform for achievement education and inspiration

ವಿಕ ಸುದ್ದಿಲೋಕ ಬೂದಿಕೋಟೆ

ಹಲವು ವರ್ಷಗಳಿಂದ ಜ್ಯೋತಿ ವಿದ್ಯಾ ಸಮೂಹ ಸಂಸ್ಥೆ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡುತ್ತಿದೆ. ಈಗಾಗಲೇ ಸಹಸ್ರಾರು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಮಟ್ಟದ ಅಧಿಕಾರಿಗಳು ಆಗಿದ್ದಾರೆ. ಇದು ಶಾಲೆಗೆ ಹೆಮ್ಮೆಯ ವಿಚಾರ ಈ ಶಾಲೆ ಇನ್ನಷ್ಟು ಅಭಿವೃದ್ಧಿ ಆಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

ಬೂದಿಕೋಟೆಯ ದಿ ಜ್ಯೋತಿ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿಮಾತನಾಡಿದ ಅವರು ಪೋಷಕರ ಸಹಕಾರದಿಂದ ಮಕ್ಕಳು ಉತ್ತಮ ಫಲಿತಾಂಶ ತರಲು ಸಾಧ್ಯ. ಜ್ಯೋತಿ ವಿದ್ಯಾ ಸಂಸ್ಥೆ ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಿದೆ. ಪರೀಕ್ಷಾ ದಿನಗಳು ಸಮೀಪಿಸುತ್ತಿರುವುದರಿಂದ ಮೊಬೈಲ್ , ಟಿವಿಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಓದಿನ ಕಡೆಗೆ ಗಮನ ಹರಿಸಬೇಕು ಎಂದರು. ಹಾಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಿಬೇಕು. ವಿದ್ಯೆ ಮನುಷ್ಯನನ್ನು ಬಾಳಿ ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಬೂದಿಕೋಟೆ ಗ್ರಾಮದ ಮುಖಂಡರಾದ ಚಂದ್ರಶೇಖರ್ ಮಾತನಾಡಿ, ಜ್ಯೋತಿ ವಿದ್ಯಾ ಸಂಸ್ಥೆ ಕೇವಲ ಪಟ್ಟಣದಲ್ಲಿಮಾತ್ರ ಇತ್ತು,ಈಗ ಗ್ರಾಮೀಣ ಮಕ್ಕಳಿಗೂ ಸಹ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ನೀಡಬೇಕು ಎಂಬ ಆಸೆಯಿಂದ ಸುಮಾರು ಎಂಟು ವರ್ಷಗಳಿಂದ ಗಡಿ ಭಾಗವಾದ ಬೂದಿಕೋಟೆ ಗ್ರಾಮದಲ್ಲಿಶಾಲೆಯನ್ನು ಪ್ರಾರಂಭಿಸಿ ಉತ್ತಮ ಶಿಕ್ಷಣವನ್ನು ನೀಡುತ್ತಿರುವುದು ನಿಜವಾಗಲೂ ಶ್ಲಾಘನೀಯ ಎಂದರು.

ಅದರಂತೆ ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ ಸಂಸ್ಕಾರಯುತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿಕಾರ್ಯೋನ್ಮುಖರಾಗಬೇಕು. ಹಾಗೇ ಸಾಧಕರ ಸಾಧನೆಗಳನ್ನು ಮೈಗೂಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಕಲಿಯುವಂತೆ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿಬೂದಿಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಆರ್ ಮಂಜುನಾಥ್ , ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ , ಉಪಾಧ್ಯಕ್ಷ ಎಚ್ .ಎಲ್ ನಾಗರಾಜ್ ,ಸಾಹಿತಿಗಳಾದ ಲಕ್ಷ್ಮಯ್ಯ, ಕನ್ನಡ ಸಂಘದ ಪ್ರಸಾದ್ , ವಕೀಲ ಆನಂದ್ , ಮುಖಂಡರಾದ ಪ್ರಭು, ಕೃಷ್ಣಾರೆಡ್ಡಿ, ರಾಜಗೋಪಾಲ್ , ಗೋವಿಂದಪ್ಪ, ಜ್ಯೋತಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಸತೀಶ್ ಕುಮಾರ್ , ಜಗದೀಶ್ ,ಹರೀಶ್ ಹಾಗೂ ಮೊದಲಾದವರು ಇದ್ದರು.

21ಬೂದಿಕೋಟೆ ಚಿತ್ರ 1 ದಿ ಜ್ಯೋತಿ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ನಾಗಾನಂದ ಕೆಂಪರಾಜು ಉದ್ಘಾಟಿಸಿದರು.