ವಿಕ ಸುದ್ದಿಲೋಕ ಬಂಗಾರಪೇಟೆ
ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿರುವಂತಹ ಕಾಲಘಟ್ಟದಲ್ಲಿಮನ್ವಂತರ ಪ್ರಕಾಶನ ಎಲೆಮರೆಯ ಸಾಧಕರನ್ನು ಕರೆದು ಸನ್ಮಾನ ಮಾಡುತ್ತಾ, ಜಿಲ್ಲೆಯ ಮಣ್ಣಿನಲ್ಲಿಬಿತ್ತುತ್ತಿರುವ ಹೃದಯವಂತಿಕೆ ಮತ್ತು ಸೌಹಾರ್ದತೆಯ ಬೀಜಗಳು ಬೆಳೆದು ಹೆಮ್ಮರವಾಗಿ ಸಹಬಾಳ್ವೆ ಎನ್ನುವ ನೆರಳನ್ನು ಸದಾಕಾಲ ನೀಡಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಹೇಳಿದರು.
ಪಟ್ಟಣದ ಎಸ್ ಡಿಸಿ ಕಾಲೇಜಿನ ಸಭಾಂಗಣದಲ್ಲಿಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಮಾಧ್ಯಮ ಕೌಶಲ್ಯ ಅಭಿವೃದ್ಧಿ ತರಬೇತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ನಾನಾ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದಿನ ತಂತ್ರಜ್ಞಾನದ ಯುಗದಲ್ಲಿಮಾನವೀಯ ಸಂಬಂಧಗಳು ಮರೆಯಾಗುತ್ತಿವೆ. ಮೊಬೈಲ್ ವ್ಯಾಮೋಹದಿಂದಾಗಿ ಪೋಷಕರ ಜನ್ಮದಿನ ಮರೆಯುವ ಯುವಜನತೆ, ನಟರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ವಿಷಾದನೀಯ. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಹತ್ತಾರು ಯೋಜನೆಗಳನ್ನು ರೂಪಿಸುತ್ತಾರೆ. ಆದರೆ ಮಕ್ಕಳು ಪೋಷಕರ ಭವಿಷ್ಯಕ್ಕಾಗಿ ಯಾವುದೇ ಯೋಜನೆ ಹೊಂದುತ್ತಿಲ್ಲ. ಮಾನವೀಯ ಮೌಲ್ಯಗಳು ಕಡಿಮೆಯಾಗಿ ಮಕ್ಕಳಿಗೆ ಪೋಷಕರು ಹೊರೆಯಾಗುವ ಮೂಲಕ ವೃದ್ಧಾಶ್ರಮಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಓದಿ ದೊಡ್ಡವರಾಗಿ ಎಷ್ಟು ಆಸ್ತಿ ಪಾಸ್ತಿ ಮಾಡ್ತೀವಿ ಅದು ಮುಖ್ಯ ಅಲ್ಲ. ಸಮಾಜಕ್ಕೆ ನಾನು ಏನು ಮಾಡಿದೆ ಅನ್ನೋದು ಮುಖ್ಯ. ನಮಗೆ ಜನ್ಮ ನೀಡಿದ ತಂದೆ ತಾಯಿ, ಅಕ್ಷರ ಕಲಿಸಿದ ಗುರು ಮತ್ತು ಶಾಲೆಗಳನ್ನು ಎಂದಿಗೂ ಮರೆಯಬಾರದು, ಅದೇ ನಿಜವಾದ ಜೀವನದ ಮೌಲ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೋಲಾರದಂತಹ ಸೌಹಾರ್ದತೆಯ ನಾಡಿನಲ್ಲಿಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಅಪರೂಪದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಮನ್ವಂತರ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮನ್ವಂತರ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ದಕ್ಕಬೇಕು. ಆ ಪ್ರಶಸ್ತಿ ಪಡೆಯುವುದಕ್ಕೆ ಸಂಸ್ಥೆ ಅರ್ಹವಾಗಿದ್ದು, ಮುಂದಿನ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಅನಂತರಾಮ್ ಅವರು ಪ್ರಶಸ್ತಿ ಸ್ವೀಕಾರ ಮಾಡಬೇಕು ಅನ್ನೋದು ನನ್ನ ಆಸೆ. ಆ ವಿಚಾರದಲ್ಲಿನಾನು ಪ್ರಾಮಾಣಿಕವಾದಂತಹ ಪ್ರಯತ್ನವನ್ನ ಮಾಡುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೇನಾರಾಯಣ, ಶಾಸಕ ಎಸ್ .ಎನ್ .ನಾರಾಯಣಸ್ವಾಮಿ, ಮನ್ವಂತರ ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷ ಪಾ.ಶ್ರೀ.ಅನಂತರಾಮ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಮುನಿರಾಜು, ಜಿಲ್ಲಾಪ್ರಧಾನ ಕಾರ್ಯದರ್ಶಿ ಎ.ಜಿ ಸುರೇಶ್ ಕುಮಾರ್ , ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ಎಸ್ ಡಿಸಿ ಕಾಲೇಜಿನ ಪ್ರಾಂಶುಪಾಲ ಎಸ್ .ಎ ಜಗದೀಶ್ , ಎಚ್ .ಎಲ್ ಸುರೇಶ್ , ಕೆ.ರಮೇಶ್ , ಎಂ.ಮೋಹನ್ , ಎಸ್ ಪಿ ವೆಂಕಟೇಶ್ , ಮಂಜುಳ, ಮೈ.ಸತೀಶ್ ಕುಮಾರ್ , ಮಂಜುನಾಥ, ಮುಂತಾದವರು ಭಾಗವಹಿಸಿದ್ದರು.
21 ಬಂಗಾರಪೇಟೆ: ಪಟ್ಟಣದ ಎಸ್ .ಡಿ.ಸಿ ಕಾಲೇಜಿನಲ್ಲಿಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಮಾಧ್ಯಮ ಕೌಶಲ್ಯ ಅಭಿವೃದ್ಧಿ ತರಬೇತಿ ಸಂಸ್ಥೆಯಿಂದ ನಾನಾ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

