ದ್ವಿತೀಯ ಪಿಯುಸಿ ಪರೀಕ್ಷೆಗೆ ಸಜ್ಜು (ಸ್ಥಳೀಯಪುಟ ಲೀಡ್ )

Contributed byshashidonihaklu@gmail.com|Vijaya Karnataka

ದ್ವಿತೀಯ ಪಿಯುಸಿ ಪರೀಕ್ಷೆ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ 41 ಪರೀಕ್ಷಾ ಕೇಂದ್ರಗಳಲ್ಲಿ 24,753 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇರಲಿದೆ. ಜೆರಾಕ್ಸ್, ಸೈಬರ್ ಕೇಂದ್ರಗಳಿಗೆ ನಿರ್ಬಂಧ ವಿಧಿಸಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಲಾಗಿದೆ.

all preparations completed at second puc examination centers

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಜ್ಜು

41 ಪರೀಕ್ಷಾ ಕೇಂದ್ರಗಳು, 24,753 ವಿದ್ಯಾರ್ಥಿಗಳು | ಸಿಸಿ ಕ್ಯಾಮೆರಾ ಕಣ್ಗಾವಲು, ಜೆರಾಕ್ಸ್ , ಸೈಬರ್ ಕೇಂದ್ರಗಳಿಗೆ ನಿರ್ಬಂಧ

ವಿಕ ಸುದ್ದಿಲೋಕ ತುಮಕೂರು

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ, ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಫೆ.28ರಿಂದ ಮಾ.17ರವರೆಗೆ 2025-26ನೇ ಸಾಲಿನ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ41 ಪರೀಕ್ಷಾ ಕೇಂದ್ರಗಳಲ್ಲಿಪರೀಕ್ಷಾ ಕೇಂದ್ರಗಳು ಸಜ್ಜಾಗಿದ್ದು, 24,753 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿಅವರು ಪರೀಕ್ಷಾ ಸಿದ್ಧತೆ ಬಗ್ಗೆ ಮಾಹಿತಿ ಹಂಚಿಕೊಂಡರು.

ಮುಕ್ತ ಹಾಗೂ ಆರಾಮದಾಯಕ ವ್ಯವಸ್ಥೆಯಲ್ಲಿಪರೀಕ್ಷೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಯಾವುದೇ ಲೋಪಲ್ಲದಂತೆ ಪಾರದರ್ಶಕವಾಗಿ ನಡೆಸಲು ಎಲ್ಲಾತಯಾರಿಯನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಪೂರಕ ವಾತಾವರಣ ಕಲ್ಪಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿಕುಡಿಯುವ ನೀರು ಸೇರಿದಂತೆ ನಾನಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಸೂಕ್ತ ಭದ್ರತೆಯಲ್ಲಿಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

22,851 ಹೊಸ ವಿದ್ಯಾರ್ಥಿಗಳು: 22,851 ಹೊಸ ವಿದ್ಯಾರ್ಥಿಗಳು, ಖಾಸಗಿಯಾಗಿ 285 ವಿದ್ಯಾರ್ಥಿಗಳು, 1606 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 11 ಫಲಿತಾಂಶ ಸುಧಾರಣೆ ವಿದ್ಯಾರ್ಥಿಗಳು ಸೇರಿ ಒಟ್ಟು 24,753 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರೆಂದರು.

ಸುದ್ದಿಗೋಷ್ಠಿಯಲ್ಲಿಎಡಿಸಿ ಡಾ.ಎನ್ .ತಿಪ್ಪೇಸ್ವಾಮಿ, ಎಎಸ್ ಪಿ ಪುರುಷೋತ್ತಮ್ , ಎಸಿ ನಾಹಿದಾ ಜ‚ಮ್ ಜ‚ಮ್ , ಡಿಡಿಪಿಯು ಡಾ.ಬಾಲಗುರುಮೂರ್ತಿ ಇದ್ದರು.

ಬಾಕ್ಸ್

ಸಿಸಿ ಕ್ಯಾಮೆರಾ ಕಣ್ಗಾವಲು

ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಭದ್ರತೆ ಒದಗಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಪಂನಲ್ಲಿವಾರ್ ರೂಂಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ41 ಪರೀಕ್ಷಾ ಕೇಂದ್ರಗಳ ವೀಕ್ಷಣೆ ಮಾಡಬಹುದಾಗಿದೆ. ಇದಕ್ಕಾಗಿ ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಸಕಾಲಕ್ಕೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸುಗಮ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾಹಿತಿ ನೀಡಿದರು.

ಬಾಕ್ಸ್

ಆತಂಕ, ಒತ್ತಡ ಬೇಡ -1098ಗೆ ಕರೆ ಮಾಡಿ

ವಿದ್ಯಾರ್ಥಿಗಳು ಆತಂಕ, ಒತ್ತಡ ಪಡಬೇಡಿ. ಈ ಪರೀಕ್ಷೆಯ ನಂತರವೂ ಅನುತ್ತೀರ್ಣರಾದಲ್ಲಿಇನ್ನೂ 2 ಅವಕಾಶಗಳು ಪರೀಕ್ಷೆ ಬರೆಯಲು ಇದೆ. ಯಾವುದಾದರೂ ವಿಷಯದಲ್ಲಿವಿದ್ಯಾರ್ಥಿಗಳಿಗೆ ಆತಂಕ ಅಥವಾ ಸಮಸ್ಯೆಗಳಿದ್ದಲ್ಲಿಕಂಟ್ರೋಲ್ ರೂಮ್ ನಂಬರ್ 1098ಗೆ ಕರೆ ಮಾಡಿ ಮಾತನಾಡಬಹುದು ಎಂದು ತಿಳಿಸಿದರು.

ಬಾಕ್ಸ್

ಪಧಿರೀಕ್ಷಾ ಕೇಂದ್ರ ಬಳಿ ನಿಷೇಧಾಜ್ಞೆ

ಪರೀಕ್ಷಾ ಕೇಂದ್ರದ 200 ಮೀ. ಪರಿದಿಯಲ್ಲಿಯಾವುದೇ h‚æರಾಕ್ಸ್ ಅಂಗಡಿಗಳು ಅಥವಾ ಸೈಬರ್ ಕೇಂದ್ರಗಳು ಕಾರ್ಯನಿರ್ವಸದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ನಿಷೇಧಾಜ್ಞೆ ವಿಧಿಸಲಾಗಿರುತ್ತದೆ. ಜಿಲ್ಲಾಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯಲು ಮಾರ್ಗಾಧಿಕಾರಿಗಳ ತಂಡವನ್ನು ನೇಮಿಸಲಾಗಿದೆ.

ಉಧಿತ್ತಮ ಸ್ಥಾಧಿನಧಿಕ್ಕೇಧಿರುವ ವಿಧಿಶ್ವಾಧಿಸ: ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿತುಮಕೂರು ಜಿಲ್ಲೆಪಿಯುಸಿ ಫಲಿತಾಂಶದಲ್ಲಿರಾಜ್ಯದಲ್ಲಿ4ನೇ ಸ್ಥಾನದಲ್ಲಿದ್ದು, ಗುಣಮಟ್ಟದ ಪರೀಕ್ಷೆ ಮೂಲಕ ಇನ್ನೂ ಉತ್ತಮ ಸ್ಥಾನಕ್ಕೆ ಏರುವ ವಿಶ್ವಾಸವನ್ನು ಶುಭಾ ಕಧಿಲ್ಯಾಧಿಣ್ ವ್ಯಕ್ತಪಡಿಸಿದರು.

ಕೋಟ್

ಪೋಷಕರು ಪರೀಕ್ಷಾ ಸಂದರ್ಭದಲ್ಲಿತಮ್ಮ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಮಕ್ಕಳನ್ನು ಪ್ರೋತ್ಸಾಹಿಸುವ, ಉತ್ತೇಜಿಸುವ ಮಾತುಗಳನ್ನಾಡಿ. ಒಳ್ಳೆಯ ಆಹಾರ ಕೊಡಿ. ಪರೀಕ್ಷೆಗೆ ತೆರಳುವಾಗ ಉಪವಾಸ ಬೇಡ. ಬೆಳಗ್ಗೆ ತಿಂಡಿ ತಿನ್ನಿಸಿ ಕಳುಹಿಸಿ.

-ಶುಭಾಕಲ್ಯಾಣ್ , ಜಿಲ್ಲಾಧಿಕಾರಿ, ತುಮಕೂರು

23ಟಿಯುಎಂ2 : ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಸೋಮವಾರ ಸುದ್ದಿಗೋಷ್ಠಿ ನಡೆಸಿದರು. ಎಡಿಸಿ ಡಾ.ಎನ್ .ತಿಪ್ಪೇಸ್ವಾಮಿ, ಎಎಸ್ ಪಿ ಪುರುಷೋತ್ತಮ್ , ಎಸಿ ನಾಹಿದಾ ಜ‚ಮ್ ಜ‚ಮ್ ಇದ್ದರು.